ದೌರ್ಭಾಗ್ಯ ಸುಮಿತ್ರೆ.
ಕವನ
ದೌರ್ಭಾಗ್ಯ ಸುಮಿತ್ರೆ.
ಸವತಿಯೊಬ್ಬಳಿದ್ದಾಳೆಂದೂ ತಿಳಿದೂ,
ಬಣ್ಣ ಬಣ್ಣದ ಕನಸುಗಳ ಹೊತ್ತು
ಬಂದೆ ನೀ ದಶರಥನರಮನೆಗೆ.
ಮಮ್ಮಲ ಮರುಗಿದಳಂದು ಕೌಸಲ್ಯೆ
ನೀನವಳ ಭಾಗ್ಯಕ್ಕೆ ಎರವಾದೆಯೆಂದು.
ಕಂಬನಿಗರೆದವಳಿಗನ್ನಿಸಿತ್ತು
ಮಹಾರಾಜರ ಪ್ರತಿಷ್ಟೆಯಿದೆಂದು.
ನೀನೂ ನೀಡಲಿಲ್ಲ ನಿನ್ನವನಿಗೆ....
ಅವಳಂತೆ ಮುದ್ದು ಮಕ್ಕಳ ಫಲ.
ಅವಳು ಪಟ್ಟಷ್ಟು ಸಂತಸವ
ಪಡಲಿಲ್ಲ ನೀನು.
ನೀವಿಬ್ಬರೂ ನೀಡದ್ದನ್ನು ಪಡೆಯಲು
ತಂದನವನು ಮೂರನೆಯವಳ.
ಕಂಬನಿ ಮಿಡಿದೆ ನೀನೂ...
ನಿನ್ನ ದೌರ್ಭಾಗ್ಯವ ನೆನೆದು.
ಬಂದಳಂದಗಾತಿ ಕೈಕೇಯಿ
ನಿಮ್ಮಿಬ್ಬರ ಆಸೆ ಅರಮನೆ ಮೇಲೆ
ತನ್ನಾಸೆ ಸೌಧ ಕಟ್ಟಲು....
ಸಮಾನ ದುಃಖಗಳಾದಿರಿ
ಅಂದಿನಿಂದ ನೀವಿಬ್ಬರು.
ಸಂತಾನ ಪ್ರಾಪ್ತಿಗಾಗಿ ವರಪಡೆದವನಿಗೆ
ಒಂದಲ್ಲವೆಂದು ಎರಡು ಮಕ್ಕಳನ್ನು ಹೆತ್ತ ನೀನು....
ಪಡೆದದ್ದಾದರೂ ಏನನ್ನು?
ರಾಮನಿಗೊಬ್ಬನಾದರೆ, ಭರತನಿಗೊಬ್ಬನಾದ.
ಬಾಯ್ಬಿಟ್ಟು ಏನೂ ಹೇಳದೆ ನೋವ ನುಂಗಿ..
ಅದರಲ್ಲೇ ಸಂತಸ ಹುಡುಕಿದ...
ದೌರ್ಭಾಗ್ಯ ಸುಮಿತ್ತೆ ನೀನು.
Comments
ಉ: ದೌರ್ಭಾಗ್ಯ ಸುಮಿತ್ರೆ.
In reply to ಉ: ದೌರ್ಭಾಗ್ಯ ಸುಮಿತ್ರೆ. by makara
ಉ: ದೌರ್ಭಾಗ್ಯ ಸುಮಿತ್ರೆ.
ಉ: ದೌರ್ಭಾಗ್ಯ ಸುಮಿತ್ರೆ.
ಉ: ದೌರ್ಭಾಗ್ಯ ಸುಮಿತ್ರೆ.
ಉ: ದೌರ್ಭಾಗ್ಯ ಸುಮಿತ್ರೆ.
ಉ: ದೌರ್ಭಾಗ್ಯ ಸುಮಿತ್ರೆ.