ರಂಗ್ ದೇ ಬಸಂತಿ
ಇದು ಸಿನೆಮಾ ವಿಮರ್ಶೆ ಮಾಡುವ ಪ್ರಯತ್ನ ಅಲ್ಲ.
'ರಂಗ್ ದೇ ಬಸಂತಿ' ನಾನು ಇತ್ತೇಚೆಗೆ ನೋಡಿದ ಒಂದು ಒಳ್ಳೆಯ ಚಲನಚಿತ್ರ.ಸ್ಯೂ(Sue), ತನ್ನ ಅಜ್ಜನ ಡೈರಿಯನ್ನು ಆಧಾರವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳ ಕುರಿತು ಸಾಕ್ಶ್ಯಚಿತ್ರ ಮಾಡಲು ಭಾರತಕ್ಕ್ತೆ ಬರುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ.ತನ್ನ ಚರಿತ್ರೆಯೊಂದಿಗೆ ಗುರುತಿಸಿಕೊಳ್ಲಲಾಗದ ಗೆಳೆಯರ ಗುಂಪೊಂದು(Products of modern India), ಸಾಕ್ಶ್ಯಚಿತ್ರದಲ್ಲಿ ಅಭಿನಯಿಸುತ್ತಾ, ಭಗತ್ ಸಿಂಗ್, ಚಂದ್ರಶೇಕರ ಆಝಾದ್ ಮೊದಲದ ಪಾತ್ರಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ತಮ್ಮ ಗೆಳೆಯನ ಸಾವಿಗೆ ಪ್ರತಿಕಾರ ತೆಗೆದುಕೊಳ್ಳಲು, ಭಾರತದ ರಕ್ಷಣಾ ಮಂತ್ರಿಯ ಕೊಲೆ ಮಾಡಿ,ಅದನ್ನು ಜಗತ್ತಿಗೆ ಆಕಾಶವಾಣಿಯ ಮೂಲಕ ತಿಳಿಸುತ್ತಾರೆ.ಈ ಮಧ್ಯೆ ಗೆಳೆಯರ ನಡುವಿನ ತಮಾಷೆಯ ಮಾತುಕತೆ(Fun) ಇದೆ.ಹಿಂದೂ ಮೂಲಭೂತವಾದಿಗಳು ಬಂದು ಹೋಗುತ್ತಾರೆ.ಈ ದೇಶದಲ್ಲಿ ಏನು ಬದಲಾಗೊಲ್ಲ ಎನ್ನುವ ಯುವ ಜನತೆಯ ನಿರಾಶವಾದ ಇದೆ.ಇದನ್ನು ನಾವೇ ಬದಲಾಯಿಸಬೇಕು ಎನ್ನುವ ಸಂದೇಶದೊಂದಿಗೆ ಸಿನೆಮಾ ಮುಗಿಯುತ್ತದೆ.
ಯುನಿವರ್ಸಿಟಿಯ ಕ್ಯಾಂಪಸ್ ನಲ್ಲಿ ನನ್ನ ಜನ ಗುರುತಿಸುತ್ತಾರೆ, ಇಲ್ಲಿಂದ ಹೊರಗೆ ಹೋದರೆ ನಾನು ಒಬ್ಬ ಸಾಮಾನ್ಯ ಮನುಷ್ಯ ಎನ್ನುತ್ತಾ ಕ್ಯಾಂಪಸ್ ನಲ್ಲೇ ಕಾಲ ಕಳೆಯುವ ಡಿಜೆಯಾಗಿ ಆಮೀರ್ ಖಾನ್, ತಾನು ಬ್ರಹ್ಮಚಾರಿಯಾಗಿಯೇ ಸಾಯಬಹುದೆಂಬ ಅಂಜಿಕೆಯಿರುವ ಸೂಕಿಯಾಗಿ ಶರ್ಮಾನ್ ಜೋಶಿ,"dad calling" ಅನ್ನು ಮೊಬೈಲ್ ಫೋನ್ ನಲ್ಲಿ ನೋಡಿದ್ರೆ ಇರಿಟೇಟ್ ಆಗುವ ಕರಣ್ ಆಗಿ ಸಿದ್ಧಾರ್ಥ್,ಆಸ್ಲಾಮ್ ಪಾತ್ರದಲ್ಲಿ ಕುನಾಲ್ ಕಪೂರ್, ಸೋನಿಯಾ ಆಗಿ ಸೊಹಾ ಆಲಿ ಖಾನ್, ಆವಳ ಇನಿಯನಾಗಿ ಮಾಧವನ್, ಸ್ಯೂ ಆಗಿ ಆಲಿಸ್ ಪ್ಯಾಟರ್ನ್,ಹಿಂದು ಸಂಘಟನೆಯ ಕಾರ್ಯಕರ್ತನಾಗಿ ಅತುಲ್ ಕುಲಕರ್ಣಿ - ಎಲ್ಲರೂ ಸಿನೆಮಾಗೆ ಜೀವ ತುಂಬಿದ್ದಾರೆ.ಸಿನೆಮಾದ ಇನ್ನೊಂದು ಪ್ಲಸ್ ಪಾಯಿಂಟ್ ಸಂಗೀತ .
ಸಿನೆಮಾದ ಕೊನೆಯ ೩೦ ನಿಮಿಶಗಳು ಸ್ವಲ್ಪ ಜಾಸ್ತಿನೇ ನಾಟಕೀಯ ಆಯಿತು ಅನ್ನಿಸಿತು,ಮುಖ್ಯವಾಗಿ ಶಾಂತಿಯುತ ಪ್ರತಿಭಾಟನೆಯ ಮೇಲೆ ಪೋಲಿಸ್ ಲಾಟಿ ಚಾರ್ಜ್, ರಕ್ಷಣಾ ಮಂತ್ರಿಯ ಕೊಲೆ, ಈ ಮಧ್ಯೆ ಚರಿತ್ರೆ ಮತ್ತು ವರ್ತಮಾನದ ನಡುವೆ (very frequently) ಬದಲಾಗುವ ದೃಶ್ಯಗಳು ಹಾಗೂ ಆಕಾಶವಾಣಿ ಇಲಾಖೆಯ ಒಳಗಿದ್ದ ಯುವಕರ ಮೇಲೆ ಪೋಲಿಸ್ ಫೈರಿಂಗ್.
ಆ ತರ ರಕ್ಶಣಾ ಮಂತ್ರಿಯ ಕೊಲೆ, ನಮ್ಮ ಪ್ರಜಾಪ್ರಭುತ್ವವನ್ನೇ ಪ್ರಶ್ನೆ ಮಾಡುದಿಲ್ವಾ?ಸಿನೆಮಾದ ಕೊನೆಯಲ್ಲಿ ಕೊಲೆ ಮಾಡಿದ್ದು ತಪ್ಪು ಅನ್ನೊದು ಯುವಕರಿಗೆ ಅರ್ಥ ಆಗುತ್ತದೆ, ಆದ್ರೆ ಅದು ಅಷ್ಟೊಂದು ಪ್ರಭಾವ ಬೀರುವುದಿಲ್ಲ!
ಸಿನೆಮಾದ ಯಶಸ್ಸಿನ ಕ್ರೆಡಿಟ್ ನಿರ್ದೇಶಕ ಓಮ್ ಪ್ರಕಾಶ್ ಮೆಹ್ರಾಗೆ ಸಿಗಬೇಕು.ಬ್ರಿಟೀಷ್ ಆಡಳಿತವನ್ನು ಈಗಿನ ಆಡಳಿತದೊಂದಿಗೆ ಹೋಲಿಸಿದ್ದಾರೆ.ದೇಶಪ್ರೇಮವನ್ನು ಹೊಸದಾಗಿ ಡಿಫೈನ್ ಮಾಡಿದ್ದಾರೆ.ಈ ಎಲ್ಲದರ ಮಧ್ಯೆ ಒಂದು ಒಳ್ಳೆಯ ಕಮರ್ಷಿಯಲ್ ಸಿನೆಮಾವನ್ನು ಕೊಟ್ಟಿದ್ದಾರೆ.
ಇ ಸಿನೆಮಾದ ಫೇವರಿಟ್ ಡೈಲಾಗ್:"ಏಕ್ ಪಾವ್ past ಮೇ,ಏಕ್ ಪಾವ್ present ಮೇ,ಇಸೀಲಿಯೆ ಹಮ್ ಅಪ್ನೆ present ಪರ್ ಮೂಟ್(moot) ರಹೆ ಹೆ"!
Comments
ಭ್ರಷ್ಟಾಚಾರ
ನಾವು
In reply to ನಾವು by sinchanabhat
Re:ನಾವು
In reply to Re:ನಾವು by ಶಿವ
ರಂಗ್ ದೇ ಬಸಂತಿ
In reply to Re:ನಾವು by ಶಿವ
ಚನ್ನಾಗಿದೆ!