ಸಾವಿನ ಜೊತೆ ಹುಡುಗಾಟ - ಕಥೆ
ಅದೊಂದು ಸ್ಮಶಾನ. ಅಂದು ಸ್ಮಶಾನದ ಸುತ್ತ ವಿಪರೀತ ಜನ ಸೇರಿದ್ದಾರೆ. ಸ್ಮಶಾನದ ಮುಂದುಗಡೆ ಒಂದು ಪೋಲಿಸ್ ಜೀಪ್ ನಿಂತಿದೆ, ಪಕ್ಕದಲ್ಲೇ ಒಂದು ಆಂಬುಲೆನ್ಸ್ ನಿಂತಿದೆ. ಪಕ್ಕದಲ್ಲೇ ಸುಮಾರು ಜನ ಪತ್ರಕರ್ತರು ಬಂದಿದ್ದಾರೆ. ಆದರೆ ಒಳಗಡೆ ಯಾರನ್ನು ಪೊಲೀಸರು ಬಿಡುತ್ತಿಲ್ಲ. ಸ್ಮಶಾನದ ಒಳಗಡೆ ಒಂದು ಮೂಲೆಯಲ್ಲಿ ಒಂದು ಹುಡುಗಿಯ ಹೆಣ ಬಿದ್ದಿದೆ. ಪಕ್ಕದಲ್ಲಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ. ಇನ್ನೊಂದು ಪಕ್ಕದಲ್ಲಿ ಇನ್ನೊಂದು ಹುಡುಗಿ ಕುಳಿತುಕೊಂಡು ಜೋರಾಗಿ ಅಳುತ್ತಿದ್ದಾಳೆ. "ಇದೆಲ್ಲ ನನ್ನಿಂದಲೇ ಆಗಿದ್ದು. ಶೀಲ ಸಾವಿಗೆ ನಾನೇ ಕಾರಣ ನನ್ನನ್ನು ಅರೆಸ್ಟ್ ಮಾಡಿ, ನಾನು ತಪ್ಪು ಮಾಡಿಬಿಟ್ಟೆ ಎಂದು ಒಂದೇ ಸಮನೆ ಅಳುತ್ತಿದ್ದಾಳೆ".
ಮಹಜರು ಮುಗಿದ ಮೇಲೆ ಪೊಲೀಸರು ಆ ಹೆಣವನ್ನು ಆಂಬುಲೆನ್ಸ್ ನಲ್ಲಿ ಹಾಕಿ ಆಂಬುಲೆನ್ಸ್ ಸೈರನ್ ಸದ್ದು ಮಾಡಿಕೊಂಡು ಹೊರಟು ಹೋಯಿತು. ಇತ್ತ ಅಳುತ್ತಿದ್ದ ಹುಡುಗಿಯನ್ನು ಪೊಲೀಸರು ಕರೆದುಕೊಂಡು ಸ್ಟೇಷನ್ ಗೆ ಕರೆದುಕೊಂಡು ಬಂದು ವಿಚಾರಣೆ ಶುರು ಮಾಡಿದರು.
ಹೇಳಿ ಈ ಹುಡುಗಿಯ ಸಾವಿಗೂ ನಿಮಗೂ ಏನು ಸಂಬಂಧ. ಅಲ್ಲಿ ಡಾಕ್ಟರ ಪ್ರಕಾರ ಇದು ಸಹಜ ಸಾವು, ಆಕೆ ಹೃದಯಾಘಾತದಿಂದ ಸತ್ತಿದ್ದು ಎನ್ನುತ್ತಿದ್ದಾರೆ ಆದರೆ ನೀವು ನೋಡಿದರೆ ಈ ಸಾವಿಗೆ ನಾನೇ ಕಾರಣ ಎನ್ನುತ್ತಿದ್ದೀರಾ. ಎಲ್ಲವನ್ನೂ ವಿವರವಾಗಿ ಹೇಳಿ ಎಂದು ಪೋಲಿಸ್ ಅಧಿಕಾರಿ ಕೇಳಿದ.
ಅದಕ್ಕೆ ಆ ಹುಡುಗಿ ಕಣ್ಣೊರೆಸಿಕೊಂಡು ಎಲ್ಲ ಹೇಳ್ತೀನಿ ಸರ್. ನನ್ನ ಹೆಸರು ಮೋನಿಕಾ ಎಂದು. ಆ ಹುಡುಗಿ ಬೇರೆ ಯಾರೂ ಅಲ್ಲ ನನ್ನ ಸ್ನೇಹಿತೆ ಶೀಲ. ನಾವಿಬ್ಬರೂ ಚಿಕ್ಕಂದಿನಿಂದಲೂ ಸ್ನೇಹಿತರು. ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಅಷ್ಟು ಸ್ನೇಹಿತರು. ಎಲ್ಲೇ ಹೋದರು ಇಬ್ಬರೂ ಒಟ್ಟಿಗೆ ಹೋಗುತ್ತಿದ್ದೆವು. ಒಂದೇ ತರಹದ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ಇಬ್ಬರೂ ಒಟ್ಟಿಗೆ ಒಂದೇ ಶಾಲೆ, ಕಾಲೇಜು ಮತ್ತೆ ಈಗ ಒಂದೇ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದೆವು. ಶೀಲ ತುಂಬಾ ಒಳ್ಳೆಯ ಹುಡುಗಿ. ಚಿಕ್ಕಂದಿನಲ್ಲೇ ಅವರ ತಾಯಿಯನ್ನು ಕಳೆದುಕೊಂಡಿದ್ದಳು. ಇಬ್ಬರ ಮನೆಯೂ ಪಕ್ಕ ಪಕ್ಕದಲ್ಲೇ ಇದ್ದದ್ದರಿಂದ ಅವಳು ಹೆಚ್ಚು ನಮ್ಮ ಮನೆಯಲ್ಲೇ ಇರುತ್ತಿದ್ದಳು. ನನ್ನ ತಾಯಿ ಅವಳನ್ನೂ ಸ್ವಂತ ಮಗಳಂತೆಯೇ ನೋಡುತ್ತಿದ್ದರು. ಆದರೆ ಇವತ್ತು ಅವಳ ಸಾವಿಗೆ ನಾನೇ ಕಾರಣಲಾದೆ. ಅವರ ತಂದೆಗೆ ನಾನು ಹೇಗೆ ಮುಖ ತೋರಿಸಲಿ ಎಂದು ಮತ್ತೆ ಅಳಲು ಶುರು ಮಾಡಿದಳು.
ಪೋಲಿಸ್ ಅಧಿಕಾರಿ ಇದ್ದವನು, ನೋಡಿ ಅಳಬೇಡಿ ಸಮಾಧಾನವಾಗಿ ಹೇಳಿ. ಇಷ್ಟೆಲ್ಲಾ ಒಳ್ಳೆಯ ಸ್ನೇಹಿತರು ಎನ್ನುತ್ತೀರಾ ಆದರೆ ಅವಳ ಸಾವಿಗೆ ನೀವೇ ಕಾರಣ ಎನ್ನುತ್ತೀರಾ. ಸರಿಯಾಗಿ ಬಿಡಿಸಿ ಹೇಳಿ ಎಂದು ಕೇಳಿದ.
ಮೋನಿಕ ಮತ್ತೆ ಕಣ್ಣೊರೆಸಿಕೊಂಡು ಶುರು ಮಾಡಿದಳು. ನಾವಿಬ್ಬರೂ ಎಲ್ಲ ವಿಷಯದಲ್ಲೂ ಒಂದೇ ರೀತಿ ಇದ್ದರೂ ನನಗೆ ಅವಳಿಗೆ ಒಂದು ವಿಷಯದಲ್ಲಿ ಮಾತ್ರ ಸಾಮ್ಯತೆ ಇರಲಿಲ್ಲ. ನಾನು ತುಂಬಾ ಧೈರ್ಯಶಾಲಿಯಾಗಿದ್ದೆ ಆದರೆ ಅವಳು ಅಷ್ಟೇ ಪುಕ್ಕಲು ಆಗಿದ್ದಳು. ಒಂದು ಸಣ್ಣ ಜಿರಳೆ ಕಂಡರೂ ಸಾಕು ಕಿಟಾರನೆ ಕಿರುಚುತ್ತಿದ್ದಳು. ನಾನೇ ಎಷ್ಟೋ ಬಾರಿ ಅವಳ ಮೇಲೆ ಪ್ಲಾಸ್ಟಿಕ್ ಹಲ್ಲಿ ಹಾವುಗಳನ್ನು ಹಾಕಿ ಹೆದರಿಸುತ್ತಿದ್ದೆ. ಒಮ್ಮೊಮ್ಮೆಯಂತೂ ಅವಳಿಗೆ ಹೆದರಿಕೆಯಿಂದ ಜ್ವರವೇ ಬಂದು ಬಿಡುತ್ತಿತ್ತು. ನಾನು ಬೇರೆ ಸ್ನೇಹಿತರ ಜೊತೆ ಎಷ್ಟೋ ಸಲ ಬೆಟ್ಟಿಂಗ್ ಕಟ್ಟಿ ಒಬ್ಬೊಬ್ಬಳೆ ಸ್ಮಶಾನಕ್ಕೆ ಹೋಗಿ ಬರುತ್ತಿದ್ದೆ. ಅವಳಿಗೆ ಈ ವಿಷಯ ಹೇಳಿದರೆ ಸಾಕು ಹೆದರಿ ಬಿಡುತ್ತಿದ್ದಳು. ಎಷ್ಟೋ ಸಲ ಸುಮ್ಮನೆ ನನ್ನ ಜೊತೆ ಸ್ಮಶಾನಕ್ಕೆ ಬಾ ಎಂದರೂ ಬರುತ್ತಿರಲಿಲ್ಲ.
ಒಮ್ಮೆ ಒಂದು ಘಟನೆ ನಡೆಯಿತು ಅಂದು ವೀಕೆಂಡ್ ಆದರೂ ನನಗೆ ಮಾತು ಶೀಲ ಇಬ್ಬರಿಗೆ ಮಾತ್ರ ಆಫಿಸಿನಲ್ಲಿ ಕೆಲಸ ಇತ್ತು. ಅಂದು ಅವಳನ್ನು ಹೆದರಿಸುವ ಸಲುವಾಗಿ ನಾನು ಒಂದು ಸಿದ್ಧತೆ ಮಾಡಿಕೊಂಡು ಆಫಿಸಿಗೆ ಹೋದೆ. ನಾನು ಹೋಗುವಷ್ಟರಲ್ಲಿ ಅವಳು ತನ್ನ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಳು. ಸುತ್ತಲೂ ಯಾರೂ ಇರಲಿಲ್ಲ. ಆಗ ನಾನು ತಂದಿದ್ದ ಭೂತದ ಮುಖವಾಡವನ್ನು ಹಾಕಿಕೊಂಡು ಮೆಲ್ಲಗೆ ಅವಳ ಹಿಂದುಗಡೆ ಹೋಗಿ ಜೋರಾಗಿ ಕಿರುಚಿದೆ ಅಷ್ಟೇ ಅವಳು ಅದನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಳು. ನನಗೆ ವಿಪರೀತ ಗಾಭರಿ ಆಗಿ ಅಲ್ಲೇ ಪಕ್ಕದಲ್ಲಿದ್ದ ನೀರಿನ ಬಾಟಲ ನಿಂದ ನೀರು ತೆಗೆದು ಅವಳ ಮುಖದ ಮೇಲೆ ಸಿಂಪಡಿಸಿದ ಮೇಲೆ ಎಚ್ಚರವಾದಳು. ಅದಾದ ಮೇಲೆ ಮೂರು ದಿನ ಜ್ವರದಿಂದ ಆಫಿಸಿಗೆ ಬರಲಿಲ್ಲ. ನಂತರ ನಾನು ಅವಳಲ್ಲಿ ಕ್ಷಮೆ ಕೇಳಿ ಅವಳಲ್ಲಿ ಇರುವ ಹೆದರಿಕೆಯನ್ನು ಹೋಗಲಾಡಿಸಲು ನಿರ್ಧರಿಸಿ ಅವಳಿಗೆ ನಿಧಾನವಾಗಿ ಒಂದೊಂದೇ ವಿಷಯಗಳನ್ನು ತಿಳಿ ಹೇಳಿದೆ. ನೀನು ಧೈರ್ಯ ತಂದುಕೊಬೇಕು, ಧ್ರುತಿಗೆಡಬಾರದು ಎಂದೆಲ್ಲ ಹೇಳಿ ಅವಳಲ್ಲಿ ಧೈರ್ಯ ತುಂಬಲು ಶುರುಮಾಡಿದೆ.
ನಿಧಾನವಾಗಿ ಅವಳಲ್ಲೂ ಬದಲಾವಣೆಗಳು ಕಾಣತೊಡಗಿದವು. ಅವಳು ಈಗ ಮುಂಚಿನಂತೆ ಚಿಕ್ಕ ಚಿಕ್ಕ ವಿಷಯಗಳಿಗೆ ಹೆದರುತ್ತಿರಲಿಲ್ಲ. ಹೀಗಿರುವ ಸಂದರ್ಭದಲ್ಲೇ ನಾನೊಂದು ದೊಡ್ಡ ಅಪರಾಧವನ್ನು ಮಾಡಿಬಿಟ್ಟೆ. ಅವಳಲ್ಲಿರುವ ಹೆದರಿಕೆಯನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಒಂದು ಉಪಾಯವನ್ನು ಮಾಡಿದೆ.
ಶೀಲ ಬಳಿ ಹೋಗಿ ಒಂದು ಸವಾಲನ್ನು ಹಾಕಿದೆ. ನೋಡು ಶೀಲ ನಾನು ನನ್ನ ಸ್ನೇಹಿತರ ಬಳಿ ನಿನ್ನ ಪರವಾಗಿ ಪಂದ್ಯ ಕಟ್ಟಿದ್ದೇನೆ. ಇಂದು ರಾತ್ರಿ ನೀನು ನಮ್ಮ ಮನೆ ಬಳಿ ಇರುವ ಸ್ಮಶಾನಕ್ಕೆ ಹೋಗಿ ಕೊನೆಯಲ್ಲಿರುವ ಗೋರಿಯ ಬಳಿ ಒಂದು ಟೆಡ್ಡಿ ಬೇರ್ ಇಟ್ಟಿರುತ್ತೇವೆ. ಅದನ್ನು ತರಬೇಕು. ತಂದರೆ ಹತ್ತು ಸಾವಿರ ಪಂದ್ಯ ಎಂದು ಸುಳ್ಳು ಹೇಳಿದೆ. ಅದಕ್ಕೆ ಮೊದಲು ನಿರಾಕರಿಸಿದ ಶೀಲ ನಂತರ ನನ್ನ ಬಲವಂತದಿಂದ ಒಪ್ಪಿಕೊಂಡಳು. ನಂತರ ನಾನು ಸ್ಮಶಾನದ ಬಳಿ ಬಂದು ಟೆಡ್ಡಿ ಬೇರ್ ಗೆ ಒಂದು ಹಗ್ಗ ಕಟ್ಟಿ ಆ ಹಗ್ಗದ ಇನ್ನೊಂದು ತುದಿಗೆ ಒಂದು ಕಪ್ಪು ಬಟ್ಟೆಯ ಮೇಲೆ ಆಸ್ತಿ ಪಂಜರದ ಚಿತ್ರ ಇರುವ ಬ್ಯಾನರ್ ಅನ್ನು ಕಟ್ಟಿದ್ದೆ. ಆ ಟೆಡ್ಡಿ ಬೇರ್ ಎತ್ತಿದ ತಕ್ಷಣ ಆ ಬ್ಯಾನರ್ ಮುಂದಕ್ಕೆ ಬರುವ ಹಾಗೆ ಮಾಡಿದ್ದೆ. ಅಂದು ರಾತ್ರಿ ಶೀಲ ಸ್ಮಶಾನದ ಬಳಿ ಬರುವುದನ್ನೇ ಕಾಯುತ್ತಿದೆ. ನಾನು ಅವಳನ್ನು ಹಿಂಬಾಲಿಸಿ ಕೊಂಡು ಬಂದಿದ್ದೆ. ಎಲ್ಲಿ ತುಂಬಾ ಹೆದರುತ್ತಾಳೋ ಎಂದು.
ಸರಿಯಾದ ಸಮಯಕ್ಕೆ ಶೀಲ ಸ್ಮಶಾನದ ಒಳಗೆ ಅಡಿ ಇಟ್ಟಳು. ನಾನು ಆಚೆಯಿಂದ ಅದನ್ನೇ ನೋಡುತ್ತಿದ್ದೆ. ಗಾಭರಿ ಗಾಭರಿ ಇಂದಲೇ ನಿಧಾನವಾಗಿ ಸಾಗುತ್ತಿದ್ದ ಶೀಲ ಎರಡು ಮೂರು ಕಡೆ ಬೆಚ್ಚಿ ಬಿದ್ದಳು. ಆದರೂ ಮುಂದೆ ಮುಂದೆ ಸಾಗುತ್ತಿದ್ದಳು. ಅಂತೂ ನಾನು ಟೆಡ್ಡಿ ಬೇರ್ ಇಟ್ಟಿದ್ದ ಜಾಗಕ್ಕೆ ಬಂದಳು. ಒಂದು ಕ್ಷಣ ಅತ್ತಿತ್ತ ನೋಡಿ ಟೆಡ್ಡಿ ಬೇರ್ ಕೈಗೆ ಎತ್ತಿಕೊಂಡಳು ಆದರೆ ಅದು ಬರುತ್ತಿರಲಿಲ್ಲ. ಮತ್ತೊಮ್ಮೆ ಜೋರಾಗಿ ಎಳೆದಳು ತಕ್ಷಣ ನಾನು ಕಟ್ಟಿದ್ದ ಬ್ಯಾನರ್ ನೇರವಾಗಿ ಅವಳ ಮುಖದ ಬಳಿ ಬಂತು.
ಅಷ್ಟೇ...ನನ್ನ ಶೀಲಳ ಸಾವಿಗೆ ನಾನೇ ಕಾರಣವಾಗಿಬಿಟ್ಟೆ ಎಂದು ಜೋರಾಗಿ ಅಳಲು ಶುರು ಮಾಡಿದಳು ಮೋನಿಕ..
ನೋಡಿ ನಿಮ್ಮ ಹುಡುಗಾಟ ಒಂದು ಅಮಾಯಕ ಜೀವವನ್ನು ಬಲಿ ತೆಗೆದುಕೊಂಡು ಬಿಟ್ಟಿತು ಎಂದು ಪೋಲಿಸ್ ಅಧಿಕಾರಿ ನಿಟ್ಟುಸಿರು ಬಿಟ್ಟ
Rating
Comments
ಉ: ಸಾವಿನ ಜೊತೆ ಹುಡುಗಾಟ - ಕಥೆ
In reply to ಉ: ಸಾವಿನ ಜೊತೆ ಹುಡುಗಾಟ - ಕಥೆ by sathishnasa
ಉ: ಸಾವಿನ ಜೊತೆ ಹುಡುಗಾಟ - ಕಥೆ
ಉ: ಸಾವಿನ ಜೊತೆ ಹುಡುಗಾಟ - ಕಥೆ
In reply to ಉ: ಸಾವಿನ ಜೊತೆ ಹುಡುಗಾಟ - ಕಥೆ by kavinagaraj
ಉ: ಸಾವಿನ ಜೊತೆ ಹುಡುಗಾಟ - ಕಥೆ
ಉ: ಸಾವಿನ ಜೊತೆ ಹುಡುಗಾಟ - ಕಥೆ
In reply to ಉ: ಸಾವಿನ ಜೊತೆ ಹುಡುಗಾಟ - ಕಥೆ by bhalle
ಉ: ಸಾವಿನ ಜೊತೆ ಹುಡುಗಾಟ - ಕಥೆ
ಉ: ಸಾವಿನ ಜೊತೆ ಹುಡುಗಾಟ - ಕಥೆ
In reply to ಉ: ಸಾವಿನ ಜೊತೆ ಹುಡುಗಾಟ - ಕಥೆ by partha1059
ಉ: ಸಾವಿನ ಜೊತೆ ಹುಡುಗಾಟ - ಕಥೆ
ಉ: ಸಾವಿನ ಜೊತೆ ಹುಡುಗಾಟ - ಕಥೆ
ಉ: ಸಾವಿನ ಜೊತೆ ಹುಡುಗಾಟ - ಕಥೆ