ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಕನಸೆಂಬ ಕುದುರೆಯ ಬೆನ್ನೇರಿ ಹೋದವನ ಕಥೆ,ಒಂದು ಕಪ್ ಕಾಫಿ ಜೊತೆಗೆ....

ದಿಂಬಿನ ಕೆಳಗಿನಿಂದ ಮೇಡ್ ಇನ್ ಇಂಡಿಯಾ ನೋಕಿಯಾ- ೫೨೦೦ ಮೊಬೈಲ್ ಅಲರಾಂ "ಕೊಸಲ್ಯ ಸುಪ್ರಜಾ ರಾಮ ..." ಎಂದು ಎಚ್ಚರಿಸುತಿತ್ತು. ಕಳೆದ ೧೫ ನಿಮಿಷದಿಂದ ಸ್ನೂಜ್ ಗೆ ಜಾರಿಸಿ ಜಾರಿಸಿ ನಿದ್ದೆ ಕಣ್ಣಿಂದ ಹೊರಟು ಹೋಗಿತ್ತು, ಹೊದಿಕೆಯ ಒಳಗೆ ೧೭ ರಿಂದ ೧೮ ಡಿಗ್ರಿ  ಸೆಂಟಿಗ್ರೇಡ್ ಇದ್ದರೂ ಹೊದ್ದು ಮಲಗಿದ್ದ ಎರಡೂವರೆ ಕಿಲೋ ಭಾರದ ಬ್ಲಾಂಕೆಟ್ ಹೊರಗಿನ ಚಳಿಗೆ ಮುದುಡಿ ಕೊಂಡಿತ್ತು.ಹೊರ ಕೋಣೆಯಲ್ಲಿ ಗೋಡೆಗೆ ಲಗುತ್ತಿಸಿದ ಡಿಜಿಟಲ್ ಗಡಿಯಾರದಲ್ಲಿ 05:14:33 DEC - 23 - 2010 30 F ಅಂತ LED ಬಿಂಬಿಸುತಲಿತ್ತು.

ಡಿಸೆಂಬರ್ ೨೩ ಹೌದು ನನ್ನ ಹುಟ್ಟು ಹಬ್ಬ, ನಾನು ೧೨ ಗಂಟೆ ೩೦ ನಿಮಿಷ ಹಿಂದೆ ಇದ್ದೇನೆ,

ಸ್ಯಾನ್ ಪ್ರಾನ್ಸಿಸ್ಕೋ... . ಕನಸೆಂಬ ಕುದುರೆಯನ್ನೇರಿ ಇನ್ನು ಎರಡು ದಿನಕ್ಕೆ ವರುಷ ಅಗಲಿತ್ತು.

ನಿನ್ನೆ ಸಂಜೆ :೩೦ ಅಮ್ಮನ ISD  ಕಾಲ್ ಮಾಡಿದ್ರು, ಇದು ಅವರ ಮೊದಲ ISD ಕರೆ.
"
ಕಾಲ್ ಕಾರ್ಡ್ ಮೂಲಕ ಕರೆ ಸುಲಭ ಮತ್ತು ಅಗ್ಗ ನಾನೇ ಮಾಡುತ್ತೇನೆ ...." ಎಂದು ಹೇಳಿ ಕರೆ ಕಟ್ ಮಾಡಿ, ನಾನೇ ಬೆಂಗಳೂರಿಗೆ ಕರೆ ಮಾಡಿದ್ದೆ.

"
ನೂರು ಕಾಲ ಸುಖವಾಗಿ ಬಾಳು... ನಿನ್ನ ಕನಸೆಲ್ಲ ನೆರವೇರಲಿ ..." ಎಂದು ವಿರಹದಲ್ಲೇ ಅವರು ಶುಭಾಶಯ ಕೋರಿದ್ದರು.
ಮಾತು ಬದಲಿಸಲು ನನಗೆ ಇಲ್ಲಿನ ಸಮಯಕ್ಕೂ ಅಲ್ಲಿನ ಸಮಯಕ್ಕೂ ವ್ಯತ್ಯಾಸ ಗೊತ್ತಿದ್ದರೂ " ಅಮ್ಮ ಬೆಳಗ್ಗೆ ಆರಕ್ಕೆ ಏಳುವ ಅಗತ್ಯ ಏನಿತಮ್ಮಾ..? ಆರಾಮಸೇ ಕ್ಕೆ ಏಳಬಹುದಿತಲ್ಲಾ ... " ಅಂದೆ.
"
ಹೌದು ನಾವು ಎಲ್ಲ ವಿಷಯದಲ್ಲಿ ಮುಂದೆ ಇದ್ದೇವೆ, ನಾವ್ಯಾಕೆ ನಿನಗೆ ನಿನ್ನ ಹುಟ್ಟಿದ ದಿನದಂದು ಮೊದಲಿಗರಾಗ ಬಾರದು ಎಂದು ಕರೆ ಮಾಡಿದೆ" ಅಂದರು.

ಇದಾದ ಬಳಿಕ ಅವರಲ್ಲಿ ಅವರ ಮತ್ತು ತಂದೆಯವರ ದೈನಂದಿನ ವರ್ತಮಾನ ಕೇಳಿದೆ. ಕಳೆದ ೭೨೮ ದಿನದಿಂದ ಆಫೀಸ್ ನಿಂದ ಫ್ಲಾಟ್ ಗೆ  ಹೋಗ ಬೇಕಾದರೆ ಒಂದು ಭಾರತಕ್ಕೆ ಕರೆ ಮಾಡುವುದು ನನ್ನ ದಿನಚರಿಯಲ್ಲಿ ಸೇರಿತ್ತು.ಫ್ಲಾಟ್ ಗೆ ಸೇರುವುದರಲ್ಲಿ ಒಂದು ಬಾರಿ ಭಾರತಕ್ಕೆ ಪ್ರವಾಸ ಹೋಗಿ ಬಂದಂತಾಗುತಿತ್ತು.

ಬಳಿಕ ಅಕ್ಕ ನೊಂದಿಗೆ ಸ್ಕೈಪ್ ನಲ್ಲಿ ಮಾತಾಡಿದ್ದೆ, ಮುದ್ದು ಸೊಸೆಯ ವೀಡಿಯೊ ಶುಭಾಶಯದೊಂದಿಗೆ ನಿನ್ನೆ ನಿದ್ದೆಗೆ ಜಾರಿದ್ದೆ.


ನಿನ್ನೆ ಇಂದಲೇ ಶುಭಾಶಯಗಳ ಸರಮಾಲೆ ಆರಂಭವಾಗಿತ್ತು. ಎದ್ದು ಬ್ಲಾಕ್ ಬ್ಯೂಟಿ ಲ್ಯಾಪಿ ಎತ್ತಿ ಹೊರಗಿನ ಲೊಂಜ್ ಮೇಲೆ ಕುಳಿತು. ಫಾಸೆಬೂಕ್ ನಲ್ಲಿ Vaibhav_kumar ಎಂದು ಟೈಪಿಸುತಿದ್ದಂತೆ ನನ್ನ ಲಾಗಿನ್ ಮತ್ತು ಪಾಸ್ವರ್ಡ್ ಗಳನ್ನು ಹೊಸದಾಗಿ ಹಾಕಿದ ಗೂಗಲ್ ಕ್ರೋಮ್ ನೆನಪಿಸಿ ನನ್ನನ್ನು ಮರು ಕ್ಷಣವೇ ನನ್ನ ಮನೆ (home page) ಗೆ ತಂದು ನಿಲ್ಲಿಸಿತು.

ಜೀವಮಾನದಲ್ಲೇ ಮೊದಲ ಬಾರಿಗೆ ಫ್ರೆಂಡ್ ರಿಕ್ವೆಸ್ಟ್ , ೧೧ ಮೆಸ್ಸೇಜ್ , ಮತ್ತು ೪೮ ನೋಟಿಫಿಕೇಶನ್ ನನಗಾಗಿ ಕಾದಿತ್ತು.

ಮೊದಲು ಎಲ್ಲ ಶುಭಾಶಯಗಳನ್ನು ಲೈಕ್ ಮಾಡಿದೆ, ಮೆಸ್ಸೇಜ್ ನಲ್ಲಿ ಸಂದೆಶಿಸಿದವರನ್ನು ಧನ್ಯವಾದಗಳ ಮೆಸ್ಸೇಜ್ ಅನ್ನು ಗೂಗಲ್ ನಲ್ಲಿ ಹುಡುಕಿ ೧೧ ಬಾರಿ Ctrl+C Ctrl+V ಮಾಡಿ ನನ್ನ ಕೆಲಸವನ್ನು ಕಮ್ಮಿ ಮಾಡಿ ಕೊಂಡೆ.

ಅಷ್ಟರಲ್ಲೇ ಬ್ಲಾಕ್ ಬ್ಯುಟಿಯ ರೈಟ್ ಬಾಟಮ್ ಕಾರ್ನರ್ ನಲ್ಲಿ skype ನೋಟಿಫಿಕೇಶನ್ ನಲ್ಲಿ  Rocking _Jeevan is calling ... ಅಂತ ಬರಲಾರಂಬಿಸಿತು.

"
ಜೀವನ್" - ನನ್ನ ಮೊದಲ ಪ್ರೋಫ್ಫೆಶನಲ್  ಫ್ರೆಂಡ್- ಎನಿಮಿ ಎಲ್ಲಾನು....

ಇಲ್ಲ ಈಗ ಅವನಲ್ಲಿ ಧ್ವೆಶವಿಲ್ಲ...

"Happy B'day Dude!!!! " ಅಂದ.

ನಾನು "Thanks a lot Buddy .... ಮತ್ತೆ ಹೇಗಿದ್ದೀಯ ...? ಎಲ್ಲಿದ್ದಿಯಾ...?"
"
ಅರಾಮಾಗಿದ್ದೇನೋ ... ಈಗ ಕ್ಲೈಂಟ್ ಪ್ಲೇಸ್ ನಲ್ಲಿದ್ದೇನೆ .. ಲಾಸ್ ಅನ್ಜಿಲಾಸ್ ನಲ್ಲಿದ್ದೇನೆ ... ನೀನು ಎಲ್ಲಿದ್ದಿಯಾ ...? ಮಾತಾಡದೆ ವರುಷದ ಮೇಲಾಯ್ತು ಅಲ್ಲವೇ ..." ಅಂದ.
"
ಹೌದು, Dream -tech ಬಿಟ್ಟ ಬಳಿಕ, ನಮ್ಮನೆಲ್ಲ ಮರೆತಿ ಅಲ್ಲಾ ... " ಅಂದೆ.
ಅವನು "ಅಂದ್ರೆ ನೀನು ಇನ್ನೂ Dream -tech ನಲ್ಲಿ ಇದ್ದಿಯಾ...? ಸುಧಾರ್ಸ್ಕೋ ಬೇಕಪ್ಪಾ .... ಫಾರಿನ್ ವೋರಿನ್ ಗೆ ಹೋಗು .. ಹಣ ಮಾಡು .... Dream -tech  ನಲ್ಲಿ ಏನಿದೆ ಅಂತ ಅಲ್ಲೇ ಕೊಳಿತಾ ಬಿದ್ದಿದ್ದೀಯಾ ...?"
"
ಓಯ್... ಸಲ್ಪ ತಡಿ ಮಗ್ನೆ... ನಾನು ಯು ಎಸ್ಸ್ ನಲ್ಲಿದ್ದೆನೋ ..."

"ಏನಂದೆ ...? ನಿಜನಾ ...? how come ? Really ??? I cant believe it...!!!!"  ಅಂದ.


US 
ಅನ್ನುತಿದ್ದಂತೆ ನಾವು ಹಳ್ಳಿಯಲ್ಲಿ ನಾವು ಕನ್ನಡ ಮೀಡಿಯಂ ಓದಿದ್ದೆವು  ಅನ್ನುದನ್ನು ಮರೆತು ಟುಸ್ಸ್ ಪುಸ್ಸ್  ಶುರು ಮಾಡಿಕೊಂಡ.

ಜೀವನ್ ನಾನು ರಲ್ಲಿ ಇರಬೇಕಾದರೆ ರಲ್ಲಿ ಕಲಿಯುತಿದ್ದ, ಕೊಚ್ಚಿಕೊಳ್ಳುವ ಸ್ವಭಾವ ಹಿಂದಿನಿಂದಲೂ, ಯಾರೊಂದಿಗೆ ಗೆಳೆತನವಿರಲಿಲ್ಲ. ಯಾರೀಗೂ ಅವನ ಗುಣ ಹಿಡಿಸುತ್ತಿರಲಿಲ್ಲ, ಓದಲು ಚುರುಕಾಗಿದ್ದ. IIT  ಯಲ್ಲಿ ತಾನು ಬಯಸಿದ್ದ ಕಾಲೇಜ್ ಸಿಗ ಬೇಕೆಂದು ಒಂದು ವರ್ಷ ಸ್ಕಿಪ್ ಮಾಡಿ ಕನಸನ್ನು ಸಿದ್ದಿಸಿದ ಪುಣ್ಯಾತ್ಮ. IIT ಬಾಂಬೆ ಯಲ್ಲಿ ಸೀಟ್ ಸಿಕ್ಕಿದ ಬಳಿಕ ಕೈಗೆ ಸಿಗದ ಹೋರಿಯಂತೆ ಅಡ್ಡಾಡುತಿದ್ದ , ಅವನನ್ನು ಲಗಾಮು ಹಾಕಲು ದೇವರೇ ಬರಬೇಕು  ಎಂದು ಊರಿನವರೆಲ್ಲ ಹೇಳುತಿದ್ದದ್ದು ಇನ್ನೂ ಹಸಿ ಹಸಿ ನೆನಪು.

 

ಅಷ್ಟರಲ್ಲೇ ಅವನು "I'm Getting late ... catch u in the week end , have to attend a meeting now ... sorry buddy .. bye ... :)" ಎಂದು ಕಾಲ್ ಕಟ್ ಮಾಡಿದ.

ನಾನು "Thanks a lot .. nice to hear ur wishes" ಅಂತ ಟೆಕ್ಸ್ಟ್ ಮೆಸ್ಸೇಜ್ ಕಳುಹಿಸಿದೆ.

ಪುನಃ ಕ್ರೂಮ್ ಗೆ ಟ್ಯಾಬ್ ಬದಲಿಸಿದೆ.

ಓದದೆ ಉಳಿದಿರುವ  ಫ್ರೆಂಡ್ ರಿಕ್ವೆಸ್ಟ್ ಗೆ ಕ್ಲಿಕ್ಕಿಸಿದೆ. ಒಂದು ನನ್ನ ಪ್ರೈಮರಿ ಗೆಳೆಯ ರಾಮುನದ್ದಾಗಿತ್ತು. ನನ್ನದು ಅವನದ್ದು ಚೆಡ್ಡಿ ದೋಸ್ತಿ. ಮತ್ತೊಂದು ಬಾರಿ ಕಳೆದು ಹೋದ ಗೆಳೆಯರನ್ನು ಒಟ್ಟು ಮಾಡಿದ ಫಾಸೆಬೂಕ್ ಗೆ ಸಲಾಂ ಹೊಡೆದು ಎರಡನೇ ರಿಕ್ವೆಸ್ಟ್ ನೋಡಿದೆ.

"
ಕೃಪಾ...." ನನ್ನ ಫಸ್ಟ್ ಲವ್ ... ಹೈ ಸ್ಕೂಲ್ ನಿಂದ  ಕಾಲೇಜ್ ವರೆಗೆ ಪ್ರೀತಿಸಿ ಬಳಿಕ ಅವಳಲ್ಲಿ ನಿವೆದಿಸಲಾಗದೇ ನನ್ನಲ್ಲೇ ಸಮಾಧಿ ಕಟ್ಟಿದ ಪವಿತ್ರ ಪ್ರೀತಿ.
   

ಎದುರಿನ ಟೇಬಲ್ ನಲ್ಲಿಟ್ಟ ಕಪ್ ಕಾಫಿ ಹಿಂದಕ್ಕೆ ಎಳೆದೊಯ್ಯುತಿತ್ತು, ಒಂದೆಡೆ ತಲೆ ಮೇಲೆ ಹಾಕಿರುವ  ರೂಂ ವಾರ್ಮಾರ್  ಬಿಸಿ ಗಾಳಿ ಸೂಸುತಿದ್ದರೆ ಕಾಫಿ ಕಪ್ ನಿಂದ ಮೇಲೇರುತ್ತಾ ತನ್ನ ಅಸ್ತಿತ್ವ ಕಳೆದು ಕೊಳ್ಳುತ್ತಿರುವ ಹಬೆ ನನ್ನಲ್ಲಿ ನನ್ನ ಅಸ್ತಿತ್ವದ ಬಗ್ಗೆ ಪ್ರಶ್ನೆ ಎಸೆಯುತಿತ್ತು.


 

ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಸಿಪ್ - ೧

Rating
No votes yet

Comments