ಬೆಂಗಳೂರೆಂಬ ಮಾಯಾನಗರಿಯಲ್ಲಿ ರಾತ್ರಿ ಮನೆಗೆ ಲೇಟು- ಬೆಳಗ್ಗೆ ಕೆಲಸಕ್ಕೆ ಹೋಗೋ ಗಡಿಬಿಡಿ-ತರಾತುರಿ- ಹಡಾವುಡಿ ,ಇದು ದಿನ ನಿತ್ಯ ಸಂಗತಿ ಎಲ್ಲರಿಗೂ.. ಅಂತಾದ್ದೆ ಅದೊಂದು ದಿನ-
ಲೇಟಾಗ್ ಎದ್ದು ತರಾತುರಿಯಲ್ಲಿ ಬೆಳಗಿನ ನಿತ್ಯ-ಕರ್ಮ(!)ಗಳನ್ನೆಲ್ಲ ಮುಗಿಸಿ ಹಡಾವುಡಿಯಿಂದ ಟಿಫನ್ ತಿಂದು ಬಾಕ್ಸ್ನ ಬ್ಯಾಗಿಗಾಕಿಕೊಂಡು ಇನ್ನೇನ್ ಆಫಿಸಿಗೆ ಹೊರಡಲನುವಾದರೆ ಒಳಗಡೆಯಿಂದ 'ಪತ್ನಿ' ಕೂಗಿ ಹೇಳ್ತಾಳೆ 'ಮಗೂನ' ಹಂಗೆ ನಿಮ್ ಆಫೀಸಿಗೆ ಹೋಗ್ತಾ- , ಶಾಲೆಗೆ ಬಿಟ್ಟು ಹೋಗಿ...
ಪಾಪ ಆ 'ಮಗುವೋ' ರಾತ್ರಿಯೆಲ್ಲ ಹಿಂದಿನ ದಿನ ಶಾಲೇಲ್ 'ಮಿಸ್' ಕೊಟ್ಟಿದ್ದ 'ಮಣಗಟ್ಟಲೆ' 'ಹೋಂ ವರ್ಕನ' ಮುಗಿಸಿ ಅದ್ಯಾವಗಲೋ ಬೆಳಗ್ಗೆ ನಿದ್ದೆ ಮಾಡ್ ಇನ್ನು ಮಲಕೊಂಡಿದ್ದ್ದಾಗ್ಲೆ ಎಬ್ಬಿಸಿ, ಸ್ನಾನ ಮಾಡಿಸಿ ತಲೆ ಬಾಚಿ ೨ ಜಡೆ ಹಾಕಿ ಸಮವಸ್ತ್ರ ಹಾಕಿ ,ಶೂ ಹಾಕಿಕೊಳ್ಳಲು ಹೇಳಿ ಒಳಗೆ 'ಪತ್ನಿ' ಟಿಫಿನ್ ಬಾಕ್ಸಿಗೆ ಹಾಕುವ ಕೆಲಸದಲ್ಲಿ ಬಿಜಿ..
ಅಯ್ಯೋ!! ಈಗಲೇ ಲೇಟ ಬೇರೆ ಆಗಿದೆ , ಸರೀ ಇನ್ನೇನ್ ಮಾಡಕಾಗ್ತೆ? ಏ 'ಪುಟ್ಟೀ' ಬೇಗ ಬಾ ನಾ ಗಾಡಿ ತೆಗದು, ಗೆಟ್ ಆಚೆಗ್ ಇರ್ತಿನ್.
'ಮಗು' ಟೂ ವ್ಹೀಲರ್ ಹಿಂದೆ ಹತ್ತಿ ಕುಳಿತು 'ತಾಯಿಗ್' ಟಾ-ಟಾ ಮಾಡ್ತಿರ್ವಾಗ್ಲೆ ಗೇರ್ ಚೇಂಜ್ ಮಾಡ್ ರಸ್ತೆಗೆ ಭರ್ರನೆ ನುಗ್ಗಿಸಿ ಮುಖ್ಯ ರಸ್ತೆಗೆ ಬಂದು ,ವೇಗವನ್ನ ಸ್ವಲ್ಪ ಜಾಸ್ತಿ ಮಾಡ್ ಬೆಳ್ -ಬೆಳಗ್ಗೆ ಬೀಸ್ತಿರೋ ಗಾಳಿಯನ್ನು ಆಹ್ಲಾದಿಸ್ತ ಹೊರಟೆ.
ಯಾವ್ದೋ ಲೋಕದಲ್ಲಿ ತೇಲ್ತಾ ಹೊರಟನ್ತಿದ್ದ ನನ್ನನ್ನ ಹಿಂದೆ ಕುಳಿತ 'ಪುಟ್ಟೀ' ತಿವಿದು-ತಿವಿದು ಎಚ್ಚರಿಸ್ತ ಹೇಳಿದಳು 'ಪಪ್ಪಾ' ಅಲ್ನೋಡು ರಸ್ತೆಗೆ 'ಅದೇನೋ' ಅಡ್ಡ ಬರ್ತಿದೆ.
ಧಿಗ್ಗನೆ ಮನಸ್ಸನ ಜಾಗೃತಗೊಳಿಸ್ಕೊಂಡು 'ಅದೇನು' ಅಂತ ನೋಡಿದೆ, ಮೊದಲಿಗೆ 'ಒಂದು ಕಾಣಿಸ್ತು,ನಂತರ ಹತ್ತಿರ ಹೋದಾಗ ನೋಡಿದ್ರೆ ,ಅಲ್ಲಿ ರಸ್ತೆ ಮೇಲೆ ಮಧ್ಯದಲ್ಲಿ ನಿಂತಿದ್ದವು, ಒಂದಲ್ಲ ,ಎರಡಲ್ಲ, ಹತ್ತಿಪ್ಪತ್ತು -'ಕತ್ತೆಗಳ ಹಿಂಡು'!!
ನಂಗೆ ಆಶ್ಚರ್ಯ ಅಲ್ಲಿ -ಇಲ್ಲಿ, ಅದರಲ್ಲೂ ನಾ ದಿನಂಪ್ರತಿ ಓಡಾಡುವ 'ಮಲ್ಲೇಶ್ವರಂನ' ಹಲ ರಸ್ತೆಗಳಲ್ಲ್ಲಿ ಈ 'ಕತ್ತೆಗಳ' ದರ್ಶನ ಮಾಮೂಲಿ. ಆದ್ರೆ ಇದ್ದಕ್ಕಿದ್ದಂತೆ ಹಿಂಡುಗಟ್ಟಲೆ ಕತ್ತೆಗಳು ಅದೆಗ್ ಇಲ್ಲಿಗ್ ಬಂದವು?
ಯೋಚಿಸ್ತಾ ,ಹಾರನ ಮೇಲೆ ಹಾರನ ಮಾಡಿದ್ರು ಸ್ವಲ್ಪವೂ ಅತ್ತಿತ್ತ ಮಿಸುಕದೆ ನಿಂತ್ಕೊಂಡ ಅವುಗಳ ಬಗ್ಗೆ ಕೋಪ ಬಂತು, ಈ ಕತ್ತೆಗಳದ್ದು ಒಳ್ಳೆ ಪ್ರಾಬ್ಲಾಮಾಯ್ತಲ್ಲ! ಅಂತನ್ಕಂಡು ಅತಿತ್ತ ಎಲ್ಲರ ಜಾಗ ಇದ್ಯ ಹೋಗೋಕೆ ಅಂತ ನೋಡ್ತಾ, ಮಲ್ಲೇಶ್ವರಂ ಸರ್ಕಲ್ ಬಸ್ ಸ್ಟಾಪಿನ ಮೂಲೆ ಕಡೆ ಸ್ವಲ್ಪ ಜಾಗ ಕಾಣಿಸಿ ಅಲ್ಲಿ ಬೈಕನ್ನ ನುಗ್ಗಿಸ ಹೋದರೆ ಆ ಎಲ್ಲ ಕತ್ತೆಗಳು ಅಲ್ಲಿಗೂ ಅಡ್ಡ ಬಂದು ನನ್ನನ್ನೇ ಧಿಟ್ಟಿಸಬೇಕೇ?
'ಪುಟ್ಟಿಗ್' ಹೇಳಿದೆ-ಪಾಪ ಬಡಪಾಯೀ ಕತ್ತೆಗಳು! ದಿಕ್ಕಿಲ್ಲ ದೆಸೆಯಿಲ್ಲ, ಇನ್ನು ನನ್ನ ಮಾತು ಮುಗಿದಿಲ್ಲ, ಅಸ್ಟರಲ್ಲಿ ಮುಂದೆ ನಿಂತೀದ ಕಟ್ಟೆಯೊಂದು ನನ್ನನ್ನೇ ಧಿಟ್ಟಿಸಿ ನೋಡ್ತಾ 'ಯಾರಿಗ ಹೇಳ್ತಿದ್ಯ ಪಾಪ-ಬಡಪಾಯಿ ಅಂತ?: ನಮ್ ಈ ಗತಿಗ್ ನೀವೇ ಕಾರಣ, ಅದೂ ಸಾಲದೆಂಬಂತೆ 'ಮಣಗಟ್ಟಲೆ ಭಾರ' ಹಾಕಿ, ದುಡಿಸ್ಕೊಂಡು, 'ಚಾಕರಿ' ಎಂಬ ಪದಕ್ಕೆ ನಮ್ಮನ್ನೇ ಸಮಾನರ್ಥಕವಗಿಸಿ - 'ಕತ್ತೆ ಚಾಕರಿ' ಅಂತ ಹೆಸ್ರನ್ ಇಟ್ಟವರು ನೀವ್.
ನಮ್ಮನ್ನ ದುರ್ಬಳಕೆ ಮಾಡ್ಕೊಂಡು ನಮ್ ಸ್ವಾತಂತ್ರ್ಯ ಕಸಿದ್ಕೊಂಡು 'ಅದೂ' ಸಾಲದೆ -ಜನ ನಾಯಕರ ಬಗ್ಗೆ ಹೆಸರಿಸಲು 'ಕತ್ತೆಗಳ ಖರೀದಿ' ಎಂಬುದನ್ನು ಸೃಸ್ತಿಸಿದವ್ರು ನೀವ್,
ನಾ ಇದು ಕನಸೋ-ನನಸೋ- ಯೋಚಿಸ್ತಾ ನಂಗೆ ನನ್ನೇ ಸಮಾಧಾನ ಮಾಡ್ಕೊಂಡೆ ,
'ಛೆ ಛೆ ಎಲ್ಲರ ಕತ್ತೆ ಮಾತಾಡೋಕ್ ಸಾಧ್ಯವೇ? ನನಗೆಲ್ಲೋ ಭ್ರಾಂತು!
ಮುಂದಿದ್ದ ಕತ್ತೆ ಹೇಳ್ತು 'ಲೋ ಮಾನವ' ಇದು ಕನಸಲ್ಲ, ಭ್ರಮೆನೂ ಅಲ್ಲ, ನಮ್ ಕಷ್ಟ ನೋಡದೆ ದೇವ್ರು ನಂಗ್ ಈಗ ಮಾತಾಡೋ ಶಕ್ತಿ ದಯಪಾಲಿಸವ್ನೆ.
ಮಗೂನ ಶಾಲೆಗ್ ಬಿಟ್ ನೀ ಕೆಲಸಕ್ ಹೋಗು, ನಾವ್ 'ವಿಧಾನ ಸೌಧ ಚಲೋ' ಮಾಡೋಕ್ ಅಲ್ಲಿಗ್ ಹೋಗ್ತಿದಿವ್.. ದಾರಿ ಬಿಡು!!..
ನಾ ಧನ್ಗಾಗ್ 'ಪುಟ್ಟೀ' ಕಡೆ ತಿರುಗ್ ನನ್ನ ಸಂಶಯ ನಿವಾರ್ಸ್ಕೊಲೋಕ್ ಅವಳತ್ತ ನೋಡ್, ಅವಳನ್ನ ನಿಂಗೇನಾರ ಕೇಳಿಸ್ತ? ಅಂದೇ.ಅವ್ಳು ಹೇಳಿದಳು, ಹೌದು ಪಪ್ಪಾ ಕತ್ತೆಗಳು ನಿಜವಾಗಲು ಮಾತಾಡ್ತಿವೆ.
ಮುಂದಿದ್ದ ಕತ್ತೆಗೆ ಹೇಳಿದೆ- 'ಓ ಕತ್ತೆಗಳ ನಾಯಕನೇ-
ನನ್ನ ಮಾತನ್ನು ಮಧ್ಯಕ್ಕೆ ತುಂಡರಿಸಿ ಅಬ್ಬರಿಸ್ತು ಆ ಕತ್ತೆ- ,
ಮೂರ್ಖ ಮಾನವನೇ. 'ನಾಯಕ' ಅನ್ತೆನಿದ್ರೂ ನಿಮ್ಗಲ್ಗೆ-ನಿಮ್ಮಲ್ಲಿ ಮಾತ್ರ.....
ನಾವ್ ಪ್ರಾಣಿಗಳದ್ದೆನಿದ್ರು 'ಸಾಮೂಹಿಕ' ಪ್ರಯತ್ನ-ಸಂಘಟಿತ ಹೋರಾಟ'
ನಿಂಗೆ ಹೆಚ್ಚಿಗ್ ಮಾತಾಡೋಕ್ ಬಿಟ್ಟಿದ್ದೆ ತಪ್ಪು,
ನನ್ನ 'ನಾಯಕ' ಅಂತೇಳಿ ನಮ್-ನಮ್ಮಲ್ಲಿ ಕಚ್ಚಾಟ ಹಚ್ಹೊಕ್ ನೋಡ್ತ್ಯ
? ತೊಲಗಾಚೆ.
ಬೀಸೋ ದೊಣ್ಣೆ ತಪ್ಪಿಸ್ಕೊನ್ದ್ರೆ ೧೦೦೦ ವರ್ಷ ಆಯಸ್ಸು ನೋಡೀ,
ನಾ ಗಾಡೀನ್ ಇದ್ದ ಕೊಂಚವೇ ಜಾಗದಲ್ಲಿ ನುಗ್ಗಿಸ್, 'ಪುಟ್ಟೀನ' ಶಾಲೆಗ್ ಬಿಟ್ ಆಫಿಸಿಗ್ ಹೋಗೋ ದಾರೀಲೆಲ್ಲ, ಎಲ್ ನೋಡಿದರೂ 'ಪ್ರಾಣಿಗಳೇ-ಪ್ರಾಣಿಗಳು'........
ಇದರ ಮುಂದುವರಿಕೆ ಭಾಗ
ನಾಳೆ ಎರಡನೇ ಬರಹದಲ್ಲಿ...
ನಿರೀಕ್ಷಿಸಿ..
ಚಿತ್ರ ಕೃಪೆ: ಗೂಗಲ್ ಇಮೇಜ್ ಸರ್ಚ್
Comments
ಉ: ಪ್ರಾಣಿಗಳ ಬೆಂಗಳೂರು ಚಲೋ............!!
ಉ: ಪ್ರಾಣಿಗಳ ಬೆಂಗಳೂರು ಚಲೋ............!!