ಸಮಾಧಾನ

ಸಮಾಧಾನ

ಕವನ

ಕಾದು ಕಾದು ಕೊರಗಿತ್ತು
ಕಾದ ಕಂಬನಿ ಕರಗಿತ್ತು
ಕಾವ ಕೈ ಬೀಸಿ ಕರೆದಿತ್ತು
ಇದು
ಖಾರ ಅನುಭವಾಮೃತ
ಎದೆ
ಭಾರ ಬಿರಿದಾದ್ಭುತ
ಮುಂದಿರಲಿ
ಮುಂಬೆಳಕು
ಹಿಂದಿರಲಿ
ಕಾಲದಕೊಳಕು
ಜೊತೆಗಿರುವೆವು
ನಾವು
ಮುಂಜಿಗಿಯಿರಿ
ನೀವು......

 

Comments