ಇಂಗ್ಲಿಶ್ ಬರೊಲ್ಲ ಅಂದ್ರೆ ಆತ್ಮಹತ್ಯೆ ಮಾಡ್ಕೊಳ್ಳಿ!

ಇಂಗ್ಲಿಶ್ ಬರೊಲ್ಲ ಅಂದ್ರೆ ಆತ್ಮಹತ್ಯೆ ಮಾಡ್ಕೊಳ್ಳಿ!

ಎನ್ಸಿಆರ್ಟಿ ನಡೆಸುವ ಮೈಸೂರಿನ ಪ್ರಾದೇಶಿಕ ಶಿಕ್ಶಣ ಸಂಸ್ಥೆ (Regional Institute of Education – RIE)ಯಲ್ಲಿ ಶಿಕ್ಶಣದಲ್ಲಿ ಮೊದಲನೇ ವರ್ಶದ ಬಿಎಸ್ಸಿ ಓದುತ್ತಿದ್ದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರಣ,  ಏನು ಅಂತ ಕೇಳ್ತೀರಾ? ಇಂಗ್ಲಿಶ್ ಕಣ್ರೀ. ಅದೇ ಇಂಗ್ಲಿಶ್. ಇಂದು ಬಹಳಶ್ಟು ಜನ ವಿದ್ಯಾರ್ಥಿಗಳನ್ನ ಪ್ರತಿದಿನ ಮಾನಸಿಕವಾಗಿ ಕೊಲ್ತಾ ಇರೋ ಇಂಗ್ಲಿಶ್. ಇಂದು ಈ ಹುಡುಗಿ ಪ್ರಾಣಾನಾ ಬಲಿತೆಗೆದುಕೊಂಡ

ಈ ಹುಡುಗಿ ತನ್ನ ತಾಯ್ನುಡಿ ತೆಲುಗಿನಲ್ಲಿ ಬರೆದಿರೋ ತನ್ನ ಆತ್ಮಹತ್ಯಾ ನೋಟ್ನಲ್ಲಿ ಇಂಗ್ಲಿಶ್ ಮಾಧ್ಯಮದಲ್ಲಿ ಓದ್ತಾ ಇದ್ದ ನಾನು ಅದನ್ನ ನಿಭಾಯಿಸೋಕಾಗ್ದೆ ಇಂಥಾ ದೊಡ್ಡ ನಿರ್ಧಾರ ತಗೊಂಡೆಅಂತ ಬರ್ಕೊಂಡಿದಾಳೆ.

ಪಿಯುಸಿವರೆಗೆ ತೆಲುಗು ಮಾಧ್ಯಮದಲ್ಲಿ ಓದ್ತಾ ಇದ್ದ ಈ ಹುಡುಗಿ ದಿವ್ಯವಾಣಿ, ಅತ್ಯುನ್ನತ ದರ್ಜೆಯಲ್ಲಿ ಪಾಸಾಗಿದ್ದೋಳು. ತನಗೆ ಇಂಗ್ಲಿಶ್ ಬಾರದ ಕಾರಣ, ಯಾರೊಂದಿಗೂ ಬೆರೆಯಲಾಗದೆ, ಏಕಾಂಗಿಯಾಗಿ ಮನೋಯಾತನೆಯನ್ನು ಅನುಭವಿಸ್ತಾ ಇದ್ಳು. ಇದಲ್ಲದೆ. ಅವಳ ರೂಂಮೇಟ್ಗಳಾಗಿದ್ದೋರು ಸಹ ಪಶ್ಚಿಮ ಬಂಗಾಳ ಹಾಗೂ ಹರ್ಯಾಣದಿಂದ ಬಂದೋರಾಗಿದ್ರು.

ಇತ್ತೀಚೆಗೆ ತಾನೆ ತನ್ನ ತಂದೆತಾಯಿಯರನ್ನ ನೋಡ್ಕೊಂಡು ಬಂದಿದ್ದ ಈ ಹುಡುಗಿ, ಇಂಗ್ಲಿಶ್ ನಿಭಾಯಿಸೋಕಾಗ್ದೆ ತಾನೆಶ್ಟು ಒದ್ದಾಡ್ತಿದ್ದೀನಿ ಅಂತ ಹೇಳಿ ಬಂದಿದ್ಳು. ಈಕೆಯ ತಂದೆ ಕೂಡ ಮೇಶ್ಟ್ರು.

ಈಗ ಹೇಳಿ, ಇಂಗ್ಲಿಶ್ ಕಲೀಬೇಕೋ ಬೇಡ್ವೊ?

ನಮ್ಮ ಶಿಕ್ಶಣ ತಜ್ಞರು ಹೇಳ್ತಾರೆ. ಇಂಗ್ಲಿಶನ್ನ ಒಂದು ಭಾಶೆಯಾಗಿ ಕಲಿಸಿ. ಅಡ್ಡಿಯಿಲ್ಲ. ಆದ್ರೆ, ಇಂಗ್ಲಿಶ್ ಮಾಧ್ಯಮ ಬೇಡ. ಇದರಿಂದ, ಮಗುವಿನ ಆಂತರಿಕ ವಿಕಾಸಕ್ಕೆ ತೊಂದ್ರೆಯಾಗುತ್ತೆ ಅಂತ.

ಯಾವುದು ಸರಿ, ಯಾವುದು ತಪ್ಪು? ಯಾವುದೇ ಶಿಕ್ಶಣ ಪದ್ಧತಿ ಒಬ್ಬ ವಿದ್ಯಾರ್ಥಿಯ ಪ್ರಾಣ ತೆಗೆಯೋ ಹಾಗಂತೂ ಇರ್ಬಾರ್ದು ಅಶ್ಟೆ!!!

Rating
No votes yet

Comments