ಆಮ0ತ್ರಿಸು ಗೆಳತಿ
ಕವನ
ಗೋದೊಳಿ ಹೊತ್ತಲ್ಲಿ ಕೆಂಬಣ್ಣದ ನೆಲದಲ್ಲಿ ದೀಪವಿರಿಸಿದ್ದೇನೆ
ಗೆಳತಿ ನನ್ನ ಹೃದಯದ ಹೊಸ್ತಿಲಲ್ಲಿ,
ನನ್ನ ಹೃದಯಕ್ಕೆ ನೀ ಬರುವೆ ಎಂದು
ಕಾಯುತ್ತಿರುವೆ ನೀ ಬರುವ ದಾರಿಗಳಲ್ಲಿ,
ಬಣ್ಣ ಬಣ್ಣದ ಚಿತ್ತಾರ ಹೊರಗಿನ ಬಾನಲ್ಲಿ
ಘಮ ಘಮ ಪರಿಮಳ ಮನೆಯೂಳಗಿನ ಸಿಹಿಗಳಲ್ಲಿ,
ಹೃದಯವು ಕಾಯುತ್ತಲಿದೆ ಇವುಗಳ ಅರಿವಿಲ್ಲದೆ
ನೀ ಬರುವ ದಾರಿಗಳಲ್ಲಿ,
ಮನಸ್ಸು ಜೊತೆಯಾಗಲು ಬಯಸುತ್ತಿದೆ
ನಿನ್ನ ಹಬ್ಬದ ಸಡಗರದಲ್ಲಿ,
ಒಟ್ಟಿನಲ್ಲಿ ಮನವು ಎದುರು ನೋಡುತ್ತಲಿದೆ
ನೀ ತರುವ ಹಬ್ಬದ ಆಮಂತ್ರಣಕ್ಕಾಗಿ,
ಆಮಂತ್ರಿಸು ಗೆಳತಿ.......
----- ಪ್ರೀತಿಯಿಂದ ನಿನ್ನ ಅಮರ್
Comments
ಉ: ಆಮ0ತ್ರಿಸು ಗೆಳತಿ