ನಂಬಿದರೆ..

ನಂಬಿದರೆ..

 



 

 

 

 

 

 

 

 

 ನಂಬಿದರೆ ನಮ್ಮ ಮನೆ ಕಾವಲಿಗೆ ನಿಲ್ಲುತ್ತಾನೆ ಭಗವಂತ ಎನ್ನುತ್ತಾರೆ ಭಾಗವತರು,

ನನಗು ನಿನಗು ಭೇದವೆಲ್ಲಿ ನಾನು ನೀನು ಒಂದೆ ಎನ್ನುವ ದಾರ್ಶನೀಕರು..



ನಾನು ಕುಳಿತಿರುವೆ. ಇಲ್ಲಿ ಕಂಪ್ಯೂಟರ್ ಎಂಬ ಯಂತ್ರದ ಎದುರು,

ನಮ್ಮ ಮನೆ ಎಂಬ ಅಹಂಕಾರದ ನಡುವಿನ ಸಣ್ಣ ಮೂಲೆಯಲ್ಲಿ

ನಮ್ಮ ಮನೆ ಎನ್ನುವುದು ಇರುವುದಂತೆ ಈ ಮಹಾನಗರದ ಒಂದು ಸಂದಿಯಲ್ಲಿ

ಇಂತ ನಗರ ಪಟ್ಟಣ ಹಳ್ಳಿಗಳು ಇರುವದಂತೆ ನೂರು ಸಾವಿರ ಈ ಭಾರತವೆಂಬ ದೇಶದಲ್ಲಿ

ಭಾರತವನ್ನು ವರ್ಣಿಸುವೆವು ವಿಶಾಲವೆಂದು ಆದರೊ ಭೂಮಿಯಲ್ಲಿನ ನೂರು ನೂರು ದೇಶಗಳಲ್ಲಿ ಇದೊಂದು

ವಸುಧ ಎಂಬ ಈ ಭೂಮಿಯ ಅಳೆಯಲು ನಾವೇನು ತ್ರಿವಿಕ್ರಮರೆ ಆದರೂ ಸೌರವ್ಯೂಹದಲ್ಲಿ ಇದೊಂದು

ಸೂರ್ಯನೆಂತ ದೊಡ್ಡವನೋ ನಮಸ್ಕರಿಸುವೆ ಅವನು  ಹಾಲು ಹಾದಿಯಲ್ಲಿ ಇರುವ ನಕ್ಷತ್ರವಂತೆ

ಎಣಿಸಿದವರುಂಟೆ ಹಾಲುಹಾದಿಯ ನಕ್ಷತ್ರವ ಆಕಾಶದಲ್ಲಿ ಇಂತ ಹಾದಿಗಳು ಹಲವು ಕೋಟಿ

ಅನ್ನುವರು ಇಂತಹ ಕೋಟಿ ಕೋಟಿ ನಕ್ಷತ್ರಗಳು ಸೇರಿ ಆಗಿದೆಯಂತೆ ನಮ್ಮ ಬ್ರಹ್ಮಾಂಡ

ದೈವವನ್ನು ವರ್ಣಿಸುವರು ಇ೦ತಹ ಅನಂತ ಕೋಟಿ ಬ್ರಹ್ಮಾಂಡಗಳಿಗೆ ಅವನು ಒಡೆಯನೆಂದು





ನಂಬಿದರೆ ನಮ್ಮ ಮನೆ ಕಾವಲಿಗೆ ನಿಲ್ಲುತ್ತಾನೆ ಭಗವಂತ ಎನ್ನುತ್ತಾರೆ ಭಾಗವತರು,

ನನಗು ನಿನಗು ಭೇದವೆಲ್ಲಿ ನಾನು ನೀನು ಒಂದೆ ಎನ್ನುವ ದಾರ್ಶನೀಕರು..



ವರ್ಣಚಿತ್ರ : internet ನ child universe ಎಂಬ ಸೈಟ್ ನಿಂದ ತೆಗೆದುಕೊಂಡಿದೆ


 

Rating
No votes yet

Comments