ಸೌಖ್ಯ

ಸೌಖ್ಯ

ಕವನ

                    ನಾಳಿನಾ ಕನಸುಗಳ ಕಾಣುತಾ

                    ನೆನ್ನೆಯಾ ಕಹಿಯ ಮರೆಯುತಾ

                    ನಗುತ ಸಾಗಿಸೆ ಬದುಕು ಸೌಖ್ಯ

ಮುಂಬರುವ ಸುಖದ ಅಬ್ಧಿಯಲಿ

ಹಿಂದಿನ ಕಷ್ಟಗಳ ಮುಳುಗಿಸುತ ]

ಇಂದಿನ ಬದುಕ ತೇಲಿಬಿಟ್ಟರೆ ಸೌಖ್ಯ

 ಭವಿಷ್ಯದ ಬಂಗಾರಬಾಳ ನಿರೀಕ್ಷೆಯಲಿ

ಭೂತದ ಬರಡುಬದುಕ ತೂರಿಬಿಡುತಲಿ

ವರ್ತಮಾನವ ಸಿಂಗರಿಸೆ ಬದುಕು ಸೌಖ್ಯ

**********



Comments