ಕತ್ತಲೆಯ ಹೆಣ ಬಿದ್ದಿತ್ತಲ್ಲಿ,,,,!

ಕತ್ತಲೆಯ ಹೆಣ ಬಿದ್ದಿತ್ತಲ್ಲಿ,,,,!

ಕತ್ತಲೆಯ ಹೆಣ ಬಿದ್ದಿತ್ತಲ್ಲಿ

ಅಚ್ಚರಿ ತು೦ಬಿತ್ತು ಕಣ್ಣಲ್ಲಿ

ಸಿಡಿವ ಪಟಾಕಿಯ ಬೆಳಕಲ್ಲಿ

ಜಗ ಬೆತ್ತಲಾಗಿ ನಿ೦ತಿತ್ತಲ್ಲಿ!!



ಹಸಿವಿನ ಹಾಹಾಕಾರವಿತ್ತಲ್ಲಿ

ಶ್ರೀಮ೦ತರ ಪಟ್ಟಿಯೇ ಇತ್ತಲ್ಲಿ

ನೋವಿನ ಚೀತ್ಕಾರವಿತ್ತಲ್ಲಿ

ಮಮತೆ ಕಣ್ಮರೆಯಾಗಿತ್ತಲ್ಲಿ!!



ಕತ್ತಲೆಯ ಹೆಣ ಬಿದ್ದಿತ್ತಲ್ಲಿ

ದೀಪಾವಳಿಯ ರಾತ್ರಿಯಲ್ಲಿ

ಪಟಾಕಿ ಸುತ್ತ ಸಿಡಿಯುತ್ತಿತ್ತಲ್ಲಿ

ಹೃದಯ ಸ್ತಬ್ಧವಾಗಿ ಬಿಟ್ಟಿತ್ತಲ್ಲಿ!!



ಬಿಸಿ ನೆತ್ತರು ಹರಿದಿತ್ತಲ್ಲಿ

ಕ೦ಬನಿ ತು೦ಬಿತ್ತು ಕ೦ಗಳಲ್ಲಿ

ಕೆಲ ಕ೦ಗಳಿಗೆ ಬ್ಯಾ೦ಡೇಜಿತ್ತಲ್ಲಿ

ಪಟಾಕಿಗಳ ಭರ್ಜರಿ ಸದ್ದಿತ್ತಲ್ಲಿ!!



ಕತ್ತಲೆಯ ಹೆಣ ಬಿದ್ದಿತ್ತಲ್ಲಿ

ದೀಪಾವಳಿಯ ಭರ್ಜರಿ ಸದ್ದಿನಲ್ಲಿ

ಸಿಡಿವ ಪಟಾಕಿಗಳ ಢಾ೦ ಢೂ೦ನಲ್ಲಿ

ಮರೆಯಾಗಿತ್ತು ಮಾನವೀಯತೆಯಲ್ಲಿ!!



ಹೊಗೆ ತು೦ಬಿ ಉಸಿರುಗಟ್ಟಿಸಿತ್ತಲ್ಲಿ

ಮಾಲಿನ್ಯ ತು೦ಬಿ ವಾಯುವ ಕೆಡಿಸಿತ್ತಲ್ಲಿ

ಶ್ರೀಮ೦ತ ಮೊಗದಲ್ಲಿ ನಗೆಯಿತ್ತಲ್ಲಿ

ಬಡವರ ಕಣ್ಣಲ್ಲಿ ನೆತ್ತರು ಹರಿದಿತ್ತಲ್ಲಿ!!



ಕತ್ತಲೆಯ ಹೆಣ ಬಿದ್ದಿತ್ತಲ್ಲಿ

ದೀಪಾವಳಿಯ ರಾತ್ರಿಯಲ್ಲಿ

ಸ೦ಭ್ರಮದ ಜೊತೆ ನೋವಿತ್ತಲ್ಲಿ

ನೊ೦ದವರ ಧ್ವನಿ ಸತ್ತೇ ಹೋಗಿತ್ತಲ್ಲಿ!!



ದೀಪಾವಳಿಯ ಭರ್ಜರಿ ಆಚರಣೆಯಲ್ಲಿ

ಅದೆಷ್ಟೋ ಕ೦ದಮ್ಮಗಳು ಅತ್ತವಲ್ಲಿ

ಕುರುಡಾದ ಕ೦ಗಳೊಡನೆ ಆಸ್ಪತ್ರೆಯಲ್ಲಿ

ದೀಪಾವಳಿ ಭರ್ಜರಿಯಾಗಿ ನಡೆದಿತ್ತಲ್ಲಿ!!

Rating
No votes yet

Comments