ಶ್ರೀಕೃಷ್ಣ ಕನ್ನಡಿಗನೇ?

Submitted by thesalimath on Fri, 10/21/2011 - 00:29

http://sampada.net/blog/savithru/06/12/2008/14402    ಇಲ್ಲಿಂದ ಮುಂದುವರೆದು...

 

ಮಹಾಭಾರತ ರಾಮಾಯನಗಳಸ್ಟು ಇಲ್ಲಿಯವರೆಗೆ ಬೇರೆ ಯಾವ ಕಾವ್ಯಗಳೂ ಜನಜನಿತವಾಗಿಲ್ಲ. ಸಾವಿರಾರು ವರುಷಗಳ ಹಿಂದೆ ಬರೆಯಲಾಗಿರುವ ಮಹಾಕಾವ್ಯಗಳು ಅಷ್ಟೇ ಏಕೆ ಕನ್ನಡದ ಕಾವ್ಯಗಳೂ ಮಹಾಭಾರತ ಕಥೆಯಷ್ಟು ವ್ಯಾಪಕ ಪ್ರಚಾರ ಹೊಂದಿಲ್ಲ. ಜನರ ಬಾಯಲ್ಲಿ ಹರಿದಾದುವಷ್ಟು ಜನಪ್ರಿಯತೆ ಇದೆ ಎಂದರೆ ಈ ಕಥೆಗಳಿಗೆ ಜನಪದ ಹಿನ್ನೆಲೆ ಇರಬೇಕು ಅಂತ ನನ್ನ ಊಹೆ. ಉಪಖಂಡ ಆದ್ಯಂತ ಈ ಕಥೆಗಳು ಬಹುತೇಕ ಒಂದೇ ರೀತಿ ಪ್ರಚಲಿತ ಇರುವುದನ್ನು ನೋಡಿದರೆ ಇದು ನಡೆದ ಘಟನೆಯ ಆಧಾರದ ಮೇಲೆಯೇ ಹುಟ್ಟಿದ ಕಥೆಗಳಿರಬೇಕು. ಹಾಗಾಗಿ ಮಹಾಭಾರತ ಇತಿಹಾಸ/ನಡೆದ ಘಟನೆ ಎಂದೇ ನನ್ನ ಅನಿಸಿಕೆ. ಇದಲ್ಲದೆ ಮಹಾಭಾರತ ನಡೆದ ಘಟನೆ ಎನ್ನುವುದಕ್ಕೆ ಎಸ ಆರ್ ರಾವ್ ಅವರ ಸಂಶೋಧನೆಗಳನ್ನು ಮತ್ತು ಭೈರಪ್ಪನವರ ಪರ್ವ ಕಾದಂಬರಿಯ ಮುನ್ನುಡಿಯ ಟಿಪ್ಪಣಿ ಗಳಲ್ಲಿ ರೆಫರಬಹುದು.

 ಮಹಾಭಾರತ 'ನಡೆದ ಘಟನೆ' ಎಂದಾದ ಮೇಲೆ ಕೃಷ್ಣಾ ದೈವಾಂಶ ಸಂಭೂತ ಎನ್ನುವ ಪ್ರಶ್ನೆ ಏಳುವುದಿಲ್ಲ. ಸಾಧಾರಣ ಮನುಷ್ಯನಾಗಿ ಹುಟ್ಟಿ ತನ್ನ ಅಸಾಧಾರಣ ಸಾಧನೆಯಿಂದ ದೈವತ್ವಕ್ಕೆ ಏರಿದವನು.

೩ಕಂಸನಂತಹ ಮಹಾ ಬಲಶಾಲಿ ಅರಸನ ಸೆರೆಮನೆಯಿಂದ ಮನುಷ್ಯನೊಬ್ಬ ತನ್ನ ಕೈಯ್ಯಲ್ಲಿ ಮಗುವನ್ನು ಎತ್ತಿಕೊಂಡು ಊರನ್ನು ದಾಟಿ ಯಮುನಾ ನದಿಯನ್ನು ದಾಟಿ ಯಾರಿಗೂ ಕಾಣದಂತೆ ಮಗುವನ್ನು ಬದಲ್ಲ್ಯಿಸಿಕೊಂಡು ಬರುವುದು ಕಥೆಯಲ್ಲಿ ಮಾತ್ರ ಸಾಧ್ಯ. ನೂರಾರು ಸೈನಿಕರು ಗಸ್ತು ತಿರುಗುವ ಸೆರೆಮನೆ ದಾಟಿ, ರಾಜಧಾನಿಯ ರಸ್ತೆಗಳ ಮೂಲಕ ಖೈದಿ ಊರು ದಾಟಿ ಹೋಗುವುದು ಅಸಾಧ್ಯವೇ ಸರಿ. ಹಾಗಾಗಿ ಕೃಷ್ಣ ವಸುದೇವನಿಗೆ ಹುಟ್ಟಿ ಸೆರೆಮನೆಯಿಂದ ತಪ್ಪಿಸಿಕೊಂಡು ಹೊರಹೋಗಿ ನಂದ ಗೋಕುಲದಲ್ಲಿ ಬೆಳೆದ ಎಂಬುದು ಕಟ್ಟು ಕಥೆಯಂತೆ ಭಾಸವಾಗುತ್ತದೆ. ಅಲ್ಲದೆ ತನ್ನನ್ನು ಕೊಳ್ಳುವವ ತನ್ನದೇ ರಾಜ್ಯದಲ್ಲಿ ಬೆಳೆಯುವುದು ತಿಳಿದೂ ಕೃಷ್ಣನನ್ನು ಕೊಲ್ಲಿಸುವುದು ಕಂಸನಿಗೆ ದೊಡ್ಡ ವಿಷಯವೇನೂ ಆಗಿರಲಿಲ್ಲ. ಅವನ ಸೈನ್ಯದಲ್ಲಿ ಒಂದು ಭಾಗ ಈ ಕೆಲ್ಸಕ್ಕೆ ಸಾಕಾಗಿತ್ತು! ಹಾಗಾಗಿ ಇತಿಹಾಸವೆಂದು ತಿಳಿದು ನೋಡುವಾಗ ಕೃಷ್ಣನ ಇರುವಿಕೆಯ ಅರಿವು ಕಂಸನಿಗೆ ಇರಲಿಲ್ಲ ಎಂದೇ ತೋರುತ್ತದೆ.

             ಕೃಷ್ಣ ಹಾಗಿದ್ದರೆ ಹುಟ್ಟಿದ್ದು ಯಾದವ ಕುಲದಲ್ಲಿ. ಹಾಲು ಮಾರುವವರ ಕುಲದಲ್ಲಿ! ಆಗ ಯಾದವರು ಅನಾರ್ಯರೆ ಆಗಿದ್ದರು.

            ಸಾಮಾನ್ಯವಾಗಿ ಕಂಡುಬರುವ ಕೃಷ್ಣನ ಚರ್ಯೆಯನ್ನು ನೋಡೋಣ .. ಕಪ್ಪು ಬಣ್ಣ ಗುಂಗುರು ಕೂದಲು.ಕೃಷ್ಣ ಅಜಾನುಬಾಹು, ದೊಡ್ಡ ದೇಹದವನು ಎಂಬ ವರ್ಣನೆಗಳು ಎಲ್ಲೂ ಸಿಗವು. ಹಾಗಾಗಿ ಕೃಷ್ಣ ಕುಳ್ಳ ಸಣಕಲ ಎಂದುಕೊಳ್ಳಲಾಗದಿದ್ದರೂ ಕವಿಗಳು ವರ್ಣಿಸಬಲ್ಲಂತಹ ದೈತ್ಯ ದೇಹಿಯಾಗಿರಲಿಲ್ಲ ಎಂಬುದು ತಿಳಿದು ಬರುತ್ತದೆ. ಆದರೆ ಪಾಂಡವರ ದೇಹದ ಬಗ್ಗೆ ಬಣ್ಣನೆಗಳಿವೆ.ಕುಂತಿಯ ಬಣ್ನ ದೊಡ್ಡ ದೇಹದ ಬಗ್ಗೆ ಹೇಳಿಕೆಯಿದೆ. ಕನ್ನಯ್ಯನ ಬಗ್ಗೆ ಇಲ್ಲ. ಕೃಷ್ಣನ ದೇಹದ ಬಹುತೇಕ ವರ್ಣನೆಗಳು ನಿಗ್ರಾಯಿಡಲ್ ಚರ್ಯೆಯನ್ನು (ನಿಗ್ರಾಯಿಡಲ್ + ಕಕೇಶಿಯನ್) ಹೋಲುತ್ತವೆ. ಮೂಲ ದ್ರಾವಿಡರು ನಿಗ್ರಾಯಿಡಲ್ ಹೋಲಿಕೆ ಇರುವವರು ಎಂದು ಹೇಳಲಾಗುತ್ತದೆ.. ಶಂ ಭಾ ಜೋಷಿ ಯವರ ಪ್ರಕಾರ ಮೂಲತಃ ಕನ್ನಡಿಗರು ಹಾಲು ಮಾರುವ ಕಸುಬಿನವರಿರಬೇಕು. ಕಳ್ ಎಂಬುದರಿಂದ ಕನ್ ಆಗಿ ಕನ್ನಡ ಹುಟ್ಟಿದೆ ಎಂಬುದು ಅವರ ಪ್ರತಿಪಾದನೆ . ಇದನ್ನು ನಾವು ನಂಬುವುದರಿಂದ, ಕೃಷ್ಣ ಆಡುಭಾಷೆಯಲ್ಲಿ ಕನ್ನಯ್ಯ ಆಗಿರುವುದರಿಂದ, ಅವನು ಹಾಲು ಮಾರುವ ಕುಲದವನಾದುದರಿಂದ ಕನ್ನಡಿಗನಿರಬೇಕು. ಅಥವಾ ಕೃಷ್ಣ ಹುಟ್ಟಿದ ಕುಲ ಮುಂದೆ ದ್ರಾವಿಡ ನುಡಿಯ ಕವಲುಗಳಲ್ಲಿ ಕನ್ನಡವನ್ನು ಅಪ್ಪಿಕೊಂಡಿರಬೇಕು.

                     ತನ್ನ ಗುಂಪನ್ನು ಸೇರಿಸಿ ಕಂಸನ ಮೇಲೆ ದಂಗೆಯೆದ್ದು ಗೆದ್ದೋ ಅಥವಾ ಕಥೆಗಳಲ್ಲಿ ಹೇಳಿರುವಂತೆ ಪಂದ್ಯದಲ್ಲಿ ಗೆದ್ದೋ ಕಂಸನನ್ನು ಕೆಳಗಿಳಿಸಿ ಉಗ್ರಸೆನನನ್ನು ಪಟ್ಟಕ್ಕೆ ಕೂರಿಸಿ ವಸುದೇವನನ್ನು ಬಿಡುಗಡೆ ಮಾಡಿದಾಗ ಕೃತಜ್ಞತೆ ಗಾಗಿ ಅಸ್ಸ್ಥಾನದಲ್ಲಿ ಕನ್ನಯ್ಯನು ಒಳ್ಳೆಯ ಸ್ಥಾನಮಾನವನ್ನು ಪಡೆದಿರಬೇಕು. ವಾಸುದೇವ ಅವನನ್ನು ತನ್ನ ಮಗನೆಂದು ಘೋಶಿಸಿರಲಿಕ್ಕೂ ಸಾಕು. ಇಲ್ಲಿಂದ ಕನ್ನಯನಿಗೆ ಪಾಂಡವರ ಸಂಬಂಧ ಬೆಳೆದಿರಬೇಕು ಹಾಗೂ ಕಂಸನಂತಹ ಬಲಶಾಲಿಯನ್ನು ಉರುಳಿಸಿದ ಕನ್ನಯ್ಯನ ಬಗ್ಗೆ ಪಾಂಡವರಿಗೆ ಭಕ್ತಿ ಬೆಳೆದಿರಬಹುದು. ಬಹುಷಃ ಕೃಷ್ಣನನ್ನು ದೇವರೆಂದು ಪೂಜಿಸುವ ಪರಿಪಾಠ ಇಲ್ಲಿಂದ ಆರಂಭವಾಗಿರಬಹುದು. ಕೃಷ್ಣನಿಗೆ ಸ್ಥಾನಮಾನ ದೊರೆಯಿತೇ ಹೊರತು ರಾಜನ ಪಟ್ಟ ಸಿಗಲಿಲ್ಲ (ಬಹಷಃ ಕ್ಷತ್ತಿಯನಲ್ಲದ್ದರಿಂದ?) ದ್ವಾರಕೆಗೆ ತೆರಳಿದ ಮೇಲೂ ಬಲರಾಮ ರಾಜನಾಗಲಿಲ್ಲ. ಉಗರಸೇನ ರಾಜನಾದ.

                   ಕೃಷ್ಣನ ಯುದ್ಧ ತಂತ್ರಗಳನ್ನು ನೋಡಿದರೆ ಅವು ಕ್ಷತ್ರಿಯ ತಂತ್ರಗಳೇ ಅಲ್ಲ. ಅವನ 'ರಣಚೋರ' ಪಾಲಿಸಿಯನ್ನು ಅವನ ಹಿಂದಿನ ಮತ್ತು ಮುಂದಿನ ಕ್ಷತ್ರಿಯರಾರೂ ಪಾಲಿಸಲಿಲ್ಲ. ಕ್ಷತ್ರಿಯರು ಎಲ್ಲದಕ್ಕಿಂತ ಮುಖ್ಯವಾಗಿ ಗರಿಮೆಗಾಗಿಯೇ ಹೊಡೆದಾಡುತ್ತಾರೆ. ಕೃಷ್ಣ ಬಹುತೇಕ ಸಮಯಗಳಲ್ಲಿ ಮುಂದೆ ನಿಂತು ಹೋರಾಡಿಲ್ಲ. ಸಾರಥಿಯಗುವಾಗಲೂ ಅವನಿಗೆ ಕ್ಷತ್ರಿಯನೆಂಬ ಹೆಮ್ಮೆ ಅಡ್ಡ ಬರಲಿಲ್ಲ. ಶಲ್ಯರನ್ನು ಬಿಟ್ಟರೆ ಒಬ್ಬನೇ so callded ಕ್ಷತ್ರಿಯ ಕೃಷ್ಣ.

                  ಧರ್ಮ ಕರ್ಮಗಳ ವಿಚಾರಕ್ಕೆ ಬಂದರೆ ಸುಯೋಧನ ನ್ಯಾಯಯುತವಾಗಿಯೇ ಪಟ್ಟಕ್ಕೇರಿದ್ದ. ಮನೆತನದ ಹಿರಿಯನ ಹಿರಿಮಗನೇ ರಾಜನಾಗಬೇಕಿತ್ತು. ( ಈ ವಾಕ್ಯ ತಪ್ಪಿದ್ದರೆ ಹಿಂತೆಗೆದುಕೊಳ್ಳುತ್ತೇನೆ) ಆದರೆ ಯುಧಿಷ್ಟಿರನಿಗೆ ಚುಚ್ಚಿ ಪಟ್ಟಕ್ಕೇರಲು ಹುರಿದುಂಬಿಸಿದ. ಭಗವದ್ಗೀತೆಯಲ್ಲಿ ಮಾನವ ಸಹಜವಾದ ತಪ್ಪುಗಳಿವೆ. ಇದರ ಬಗ್ಗೆ ಸಾಕಷ್ಟು ಜನ ಬುದ್ದಿಜೀವಿಗಳೆಂದು ಪಟ್ಟ ಪಡೆದವರು ಚರ್ಚಿಸಿದ್ದಾರೆ. ಸಂಬಂಧಿಕರನ್ನು ಕೊಲ್ಲಲು ಹಿಂಜರಿದ ಅರ್ಜುನನಿಗೆ ಬೋಧಿಸಿ ಯುದ್ಧಕ್ಕೆ ಅಣಿಗೊಳಿಸಿದ.

               ಮಹಾಭಾರತ ಯುದ್ಧದ ಬಗೆಗೆ ಹೆಳುವುದಾದರೆ ಅದೊಂದು ಅಪಾರ ಸಾವು ನೋವುಗಳಿಗೆ ಕಾರಣವಾದ ಯುದ್ಧವೇ ಸರಿ. ತಮಿಳು ಮಲಯಾಳಗಳ ಕೃತಿಗಳಲ್ಲಿ ಮಹಾಭಾರತದ ಹೆಚ್ಚಿನ ಚರ್ಚೆ ಇಲ್ಲ. ಹಾಗಾಗಿ ಆ ಜನಪದರು ಮಹಾಭಾರತದ ಸಮಯದಲ್ಲಿ ಹೆಚ್ಚಿನ ಆಸಕ್ತಿ ತೋರಿರರಿಲ್ಲ ಎನಿಸುತ್ತದೆ. ಯುದ್ಧದಲ್ಲಿ ಎರಡೂ ಕಡೆಯೂ ಅಪಾರ ಸಾವು ನೋವುಂಟುಗಳಾದವು. ಪಾಂಡವರ ಕಡೆ ಪಾಂಡವರು ಸಾತ್ಯಕಿ ಕೃಷ್ಟ ನಂತಹ ಕೆಲವೇ ಕೆಲವರು ಉಳಿದರೆ ಕೌರವರ ಕಡೆ ಕೃಪ, ಅಶ್ವತ್ಥಾಮನಂತಹ ಕೆಲವರು ಉಳಿದರು. ಯಾದವರು ಮಹಾಭಾರತ ಯುದ್ಧದಲ್ಲಿ ನಾಶ ಹೊಂದದೆ ನಂತರ ನಡೆದ ಯಾದವೀ ಕಲಹದಲ್ಲಿ ನಾಶವಾದರು. ಸಮಸ್ತ ಸೇನೆ ನಾಶವಾದ ಸಮಯದಲ್ಲಿ ಯಾದವರು ಮಾತ್ರ ಹೇಗೆ ಉಳಿದರು ಎಂಬುದು ಪ್ರಶ್ನೆಯಾಗಿಯೆ ಉಳಿಯುತ್ತದೆ.

           ಕೃಷ್ಣನ ಆಯುಧ ಚಕ್ರ. ಇದೂ ಒಂದು ಆಯುಧವೇ? ದೈವತ್ವವನ್ನು ಅವಲಂಬಿಸಿದರೆ ಆಯುಧವಾಗಿ ತೋರಬಹುದು. ನಾವಿಲ್ಲಿ ಸಾಮಾನ್ಯ ಮನುಷ್ಯನಾಗಿ ಕಣ್ಣನನ್ನು ನೋಡುತ್ತಿರುವಾಗ ಚಕ್ರ ಎಂಬುದು ಯಾತಕ್ಕೂ ಬಾರದ ಆಯುಧ. ಅವನ ಏಕೈಕ ಆಯುಧ ಬುದ್ಧಿ. ಬಲರಾಮನ ಆಯುಧ ನೇಗಿಲು.

           ಹಾಗಾಗಿ ಕೃಷ್ಣ ದ್ರಾವಿಡನೇ ಇರಬೇಕು ಎಂಬುದು ನನ್ನ ತರ್ಕ. ಮಹಾಭಾರತ ಯುದ್ಧದ ನಂತರ ದೈವ ಪಟ್ಟಕ್ಕೇರಿದ ಕೃಷ್ಣ ಕೆಳಜನಾಂಗದವನಾದರೆ ಸಹಿಸಲಾದೀತೆ? ಹಾಗಾಗಿ ಅವನನ್ನು ವಸುದೆವನ ಮಗನಾಗಿ ಕ್ಷತ್ರಿಯನಾಗಿ ಮಾಡಲಾಯಿತು. ದೈವಾಂಶ ಸಂಭೂತ ಎಂದು tag ಕೊಟ್ಟದ್ದರಿಂದ ಜೈಲಿನ ಕಥೆ ಹೆಣೆಯಲು ಸುಲಭವಾಯಿತು.