ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಸಂಪದ ಸಂದರ್ಶನಗಳನ್ನು ಕೇಳುವುದು ಈಗ ಇನ್ನೂ ಸುಲಭ!
ಸಂಪದ ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಕಾರ್ಯಶೀಲ ಅಂತರಜಾಲ ಸಮುದಾಯ. ತೀರಾ ವಿರಳವಾದ ಸಂಪಾದಕೀಯ ಹಸ್ತಕ್ಷೇಪವಿರುವ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿಯೇ ಕನ್ನಡದ ಕೆಲಸಗಳನ್ನು ಮಾಡುತ್ತಿರುವ ಸಮುದಾಯ. ಸಂಪದದ ಅನೇಕ ಹೆಮ್ಮೆಯ ಕೊಡುಗೆಗಳಲ್ಲಿ ಒಂದು 'ಸಂಪದ ಶ್ರಾವ್ಯ'. ಸಂಪದದ ಸದಸ್ಯರು ನಾಡಿನ ಖ್ಯಾತನಾಮರ ಜೊತೆ ನಡೆಸಿದ ಸಂದರ್ಶನ-ಸಂವಾದದ ಧ್ವನಿಮುದ್ರಿಕೆಗಳ ಸಂಪುಟವೇ ಸಂಪದ ಶ್ರಾವ್ಯ.
ಪ್ರತಿ ನಿತ್ಯ ಸಂಪದ ಸಂದರ್ಶನಗಳು ನೂರಾರು ಬಾರಿ ಡೌನ್ಲೋಡ್ ಆಗುತ್ತಿವೆ. ಜಗತ್ತಿನ ಯಾವ ಭಾಗದಲ್ಲಿದ್ದರೂ ಇಂಟರ್ನೆಟ್ ಮೂಲಕ ಕೇಳಬಹುದಾದ ಈ ಸಂದರ್ಶನಗಳು ಪ್ರತಿನಿತ್ಯ ಇಷ್ಟೊಂದು ಬಾರಿ ಕೇಳಲ್ಪಡುತ್ತಿವೆ ಎಂಬ ವಿಷಯ ಒಂದು ಪ್ರತ್ಯೇಕ ಮೊಬೈಲ್ ತಂತ್ರಾಂಶವನ್ನೇ ಅಭಿವೃದ್ಧಿಪಡಿಸುವುದಕ್ಕೆ ನಮ್ಮನ್ನು ಹುರಿದುಂಬಿಸಿತು. ಕನ್ನಡದ ಖ್ಯಾತನಾಮ ಸಾಹಿತಿ, ಚಿಂತಕರ ಈ ಸಂದರ್ಶನಗಳನ್ನು ಹೊಂದಿರುವ ಕನ್ನಡದ ಪ್ರಪ್ರಥಮ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ - 'ಸಂಪದ ಶ್ರಾವ್ಯ' ಈಗ ನಿಮ್ಮ ಮುಂದಿದೆ.
'ಸಂಪದ ಶ್ರಾವ್ಯ' ಅಪ್ಲಿಕೇಶನ್ ಬಳಸಿ ಸಂಪದದ ಸಂದರ್ಶನಗಳನ್ನು ನೇರವಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಿಂದಲೇ ಕೇಳಬಹುದು. ಈ ತಂತ್ರಾಂಶಕ್ಕೆ ಯಾವುದೇ ಶುಲ್ಕವಿಲ್ಲ.
ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ 'ಸಂಪದ ಶ್ರಾವ್ಯ'ವನ್ನು ಅನುಸ್ಥಾಪಿಸಿಕೊಂಡರೆ ಸಂದರ್ಶನಗಳನ್ನು ನೇರವಾಗಿ ಅಲ್ಲೇ ಕೇಳಬಹುದಾದ ಇಲ್ಲವೇ mp3 ಫೈಲನ್ನು ನಿಮ್ಮ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯ ಸಿಗುತ್ತದೆ.
ಕನ್ನಡದ ಮೇರು ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎಚ್.ಎಸ್.ವೆಂಕಟೇಶಮೂರ್ತಿ, ಕಯ್ಯಾರ ಕಿಞ್ಞಣ್ಣ ರೈ, ಯು. ಆರ್. ಅನಂತಮೂರ್ತಿ, ನಾಗೇಶ ಹೆಗಡೆ, ಟಿ.ಎನ್. ಸೀತಾರಾಮ್, ಜಿ.ಎಸ್. ಶಿವರುದ್ರಪ್ಪ - ಇವರೊಂದಿಗಿನ ಸಂದರ್ಶನಗಳು ಸೇರಿದಂತೆ ಒಟ್ಟು ೧೩ ಅಮೂಲ್ಯ ಸಂದರ್ಶನಗಳ ಸಂಪುಟ ಈ ತಂತ್ರಾಂಶದ ಮೂಲಕ ಲಭ್ಯವಿದೆ.
ಈ ತಂತ್ರಾಂಶವನ್ನು ಸಾರಂಗ ಇನ್ಫೋಟೆಕ್ ಸಂಪದಕ್ಕಾಗಿ ಅಭಿವೃದ್ಧಿಪಡಿಸಿದೆ.
ಆಧುನಿಕ ತಂತ್ರಜ್ಞಾನದ ಜೊತೆಗೆ ಕನ್ನಡದ ಕಂಪನ್ನು ಬೆಸೆಯುವ ಪ್ರಯತ್ನ ನಮ್ಮದು. ಈ ಪ್ರಯತ್ನದ ವಿಸ್ತರಣೆಯಾಗಿರುವ ಈ ಅಪ್ಲಿಕೇಶನ್ ನಲ್ಲಿ ಸಾಧ್ಯವಾದಲ್ಲೆಲ್ಲ ಕನ್ನಡವನ್ನು ಬಳಸುವ ಪ್ರಯತ್ನ ಮಾಡಿದ್ದೇವೆ. ಯುನಿಕೋಡ್ ಬೆಂಬಲವಿಲ್ಲದ, ಕನ್ನಡ ಫಾಂಟ್ ಇಲ್ಲದ ಆಂಡ್ರಾಯ್ಡ್ ಮೊಬೈಲ್ ಗಳಲ್ಲೂ ಸಹ ಈ ತಂತ್ರಾಂಶವನ್ನು ಬಳಸಬಹುದು.
ಈ ತಂತ್ರಾಂಶ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಅನುಸ್ಥಾಪನೆಯ ವಿಧಾನ:
.apk ಫೈಲನ್ನು ಡೌನ್ ಲೋಡ್ ಮಾಡಿಕೊಂಡು ಇಲ್ಲಿ ಕ್ಲಿಕ್ ಮಾಡಿದರೆ ಸಿಗುವ ಪುಟದಲ್ಲಿ ನೀಡಿರುವ ಸೂಚನೆಗಳನುಸಾರ ಅನುಸ್ಥಾಪಿಸಿ ಬಳಸಬಹುದು.
'ಸಂಪದ ಶ್ರಾವ್ಯ' ಆಂಡ್ರಾಯ್ಡ್ ಮಾರ್ಕೆಟ್ ಮೂಲಕ ಸದ್ಯದಲ್ಲೇ ಲಭ್ಯವಾಗಲಿದೆ.
Comments
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ
ಉ: ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ