ಚಲೋ ಮಲ್ಲೇಶ್ವರ ೨೧ರ ಜೊತೆಗೆ
ಮಲ್ಲೇಶ್ವರಂ 7ನೇ ಅಡ್ಡರಸ್ತೆಲ್ಲಿರು ಪರಿಸರ ಆರ್ಗ್ಯಾನಿಕ್ ಗೆ ಹೋಗೋಣ ಅಂತ ಆಟೋ ಇಳಿತಾ ಇದ್ದೆ. ಆತುರಾತರವಾಗಿ ಗಣೇಶ್ ಓಡ್ತಿರುವುದನ್ನು ನೋಡಿದೆ. ಏನೋ ತೊಂದರೆ ಆಗಿರ ಬೇಕು ಎಂದು ಒಂದು ನಿಮಿಷ ತಡೆಯಪ್ಪ ನಮ್ಮ ಪರಿಚಯದವರು ಏನೋ ತೊಂದರೆಯಲ್ಲಿ ಇರುವಂತಿದೆ. ಅವರು ಎಲ್ಲಿಗೆ ಹೊರಟಿದ್ದಾರೋ ಅಲ್ಲಿಗೆ ಕರೆದುಕೊಂಡು ಹೋಗ್ತೀಯಾ ಎಂದೆ ಆಟೋದವನಿಗೆ, ಅವನು ಒಪ್ಪಿದ ನನಗೆ ಸಂತೋಷವಾಯ್ತು. ಗಣೇಶ್,ಗಣೇಶ್ ಎಂದೆ ಅವರು ನಿಲ್ಲದೆ ಜನರ ನಡುವೆ ಜಾಗಮಾಡಿಕೊಂಡು ಹೋಗ್ತಲೇ ಇದ್ರು. ಆಟೋದಲ್ಲೇ ಸ್ವಲ್ಪ ಮುಂದೆ ಹೋಗಿ ಅವರಿ ಅಡ್ಡಹಾಕಿದೆ. ನನ್ನ ಅವರು ದುರುಗುಟ್ಟಿ ನೋಡಿದ್ರು. ಎಲ್ರು ಬಿಟ್ಟು ಹೋದ ಕೋಪ ಬೇರೆಇತ್ತು.
ನಾನು ಯಾರು ಅಂತ ತಿಳಿಲಿಲ್ಲ ಅನ್ಸುತ್ತೆ ಸಂಪದ ಬಳಗದ ಪದ್ಮ ಕ್ಷಮಿಸಿ ನಿಮ್ಮ ಚಲೋ ಮಲ್ಲೇಶ್ವರಂನಲ್ಲಿ ನಿಮ್ಮ ಅನುಮತಿ ಇಲ್ದೆ ಪ್ರವೇಶಮಾಡಿಬಿಟ್ಟೆ ಎಂದೆ.
'ಸಂಪದ ಬಳಗ' ಅಂದೊಡನೆ ಗಣೇಶ್ ಮುಖ ಅರಳಿತು. ಪಾರ್ಥಸಾರಥಿ,ಮಂಜಣ್ಣ,ಜಯಂತ್,ಗೋಪಾಲ್.ಸತೀಶ್, ನಾವಡರು ರಾಮಮೋಹನರ ಕಾರು ಹತ್ತಿಹೋದ ವಿಚಾರನ ವಿವರಿಸಿದ್ರು. ಶ್ರೀಧರ್ ಸಹ ನನ್ನ ಬಿಟ್ಟು ಹೋದ್ರು ಟೈಮ್ ಆಯ್ತು ನಾನು ಬರ್ತಿನಿ ಅಂದ್ರು. ನಾನು ಬರ್ತಿನಿ ಬಾಬಾ ಮಂದಿರಕ್ಕೆ, ಹತ್ತಿ ಆಟೋ. ಅವ್ರು 13ನೇ ಅಡ್ಡರಸ್ತೆಲಿ ಇಳ್ದಿರ್ತಾರೆ ಅಂದ್ರಿ ಬಾಬಾ ಮಂದಿರ ಇರೋದು 14ನೇ ಕ್ರಾಸ್ನಲ್ಲಿ ಅಂದೆ. ಗಣೇಶ್ನ ಆಟೋ ಹತ್ತಿಸಿಕೊಂಡು ಬೇಗ ಸಾಯಿ ಮಂದಿರದ ಬಳಿ ಹೋಗುವಂತೆ ತಿಳಿದೆವು. ನಮ್ಮ ಆತುರ ಆತನಿಗೂ ತಿಳಿಯಿತು. ಅವನು ಬೇಗ ಹೊರಟ. ಆಟೋ ಇನ್ನೂ ಒಂದು ಮಾರು ಹೋಗಿಲ್ಲ ಜಿ.ಪಿ.ಆರ್.ಎಸ್., ಯಸ್. ಟಿ.ಯು. ವಿ.ನ ಫಾರ್ಮುಲಾ ಒನ್ ಕಾರು ಗಣೇಶ್ಗಾಗಿ ಅಲ್ಲೇ ಕಾಯ್ತಾನಿಂತಿತ್ತು.
ಗಣೇಶ್ ಕಾರು ನೋಡಿದ್ದೆ ತಡ ನೀವೆಲ್ಲರೂ ಬೇಗ ಬೇಗ 14ನೇ ಕ್ರಾಸ್ಗೆ ಶಿರ್ಡಿ ಸಾಯಿ ದೇವಸ್ಥಾನಕ್ಕೆ ಬನ್ನಿ..ನಾವು ಹೋಗಿರ್ತಿವಿ ಟಾ..ಟಾ.ಎಂದ್ರು ಆಟೋ ವೇಗವಾಗಿ ಮುಂದೆ ಚಲಿಸಿತು.
ಆಟೋ ಹಿಂದೆನೆ ಕಾರು ಬಂದು ನಿಲ್ತು.
ಅವತ್ತು ಗುರುವಾರ ಮೇಲಾಗಿ ಹುಣ್ನೀಮೆ, ವಿಶೇಷ ಪೂಜೆ ಬೇರೆ. ರಶೋ, ರಶ್ಶು.
ಸೆಕ್ಯುರಿಟಿಗೆ ಸೆಲ್ಯೂಟ್ಹೊಡ್ದು, ಮೇಡಂಗೆ ಫೋನ್ಮಾಡ್ದೆ ಫೋನ್ ತೆಗಿತಾಯಿಲ್ಲ ಎಂದೆ.
ಮೇಡಂ ಸತ್ಯನಾರಾಯಣನ ಪೂಜೆನಲ್ಲಿದಾರೆ ಬಿಜಿ ಅವ್ರು ಅಂದ.
ಮೇಡಂ ಹೆಸರು ಹೇಳಿ ವಿಶೇಷ ದ್ವಾರ ತೆಗೆಸಿ ವಿಶೇಷ ದರ್ಶನಕ್ಕೆ ಒಳಗೆ ಹೋದೆವು.
ತಮ್ಮ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಬಂದವರು. ತಮ್ಮ ಇಷ್ಟಾರ್ಥಗಳನ್ನು ಇಡೇರಿಸಿದ್ದಕ್ಕೆ ಕೃತಜ್ಞತೆ ಅರ್ಪಿಸಲು ಬಂದವರು. ಬಾಬಾನ ದರುಶನ ಭಾಗ್ಯವನ್ನು ಬಯಸಿ ಬಂದವರು ಹೀಗೆ ಅಲ್ಲಿದ್ದ ಜನಸಾಗರವನ್ನು ನೋಡಿ ಎಲ್ಲರಿಗೂ ಸೋಜಿಗವೆನಿಸಿತು.
ಅಂತು ಬಾಬಾನಿಗೆ ನಮಿಸಿ ಸರದಿಯಲ್ಲಿ ನಿಂತು ತೀರ್ಥಪ್ರಸಾದವನ್ನು ಪಡೆದೆವು. ವಿಶೇಷ ಪೂಜೆಯ ಸಲುವಾಗಿ ಬಿಸಿಬೇಳೆ ಬಾತ್, ಮೊಸರನ್ನ ಜೊತೆಗೆ ಬಿಸ್ಕತ್ತು , ಕೇಕ್ ಬೇರೆ ಕೊಟ್ರು.
ಹುರಿದ ಗೋಡಂಬಿ ,ಅಮೆರಿಕನ್ ಕಾರ್ನ್, ಬೇಲ್ಪೂರಿ, ಜೋಳ. lays, ಕುರ್ಕುರೆ,ಬಾದಾಮಿ ಎಲ್ಲಾ ತಿಂದವರ ಮುಖ ನೋಡಬೇಕಿತ್ತು. ಮೊದಲೇ ಇಲ್ಲಿಗೆ ಬಂದಿದ್ರೆ ಚೆನ್ನಾಗಿತ್ತು ಆ ಜಂಕ್ ಫುಡ್ ಎಲ್ಲಾ ತಿನೋದು ತಪ್ತಿತ್ತು ಅಂದ್ರು ಶ್ರೀಧರ್. ಈಗಲೂ ಅಡ್ಡಿ ಇಲ್ಲ. ಇದು ಒಳಗೆ ಹೋಗುತ್ತೆ ಅಂದ್ರು ಗಣೇಶ್ ಮತ್ತು ಪಾರ್ಥಸಾರಥಿ.
ಇಲ್ಲೇ ಎರಡನೇ ಮಹಡಿಯಲ್ಲಿ ಇವತ್ತು ಸತ್ಯನಾರಾಯಣನ ಪೂಜೆ ಆಗಿರುತ್ತೆ ಬನ್ನಿ ನಮಸ್ಕಾರ ಹಾಕಿ ಹೋಗೋಣ, ನಮ್ಮ ಮೇಡಂ ಪರಿಚಯ ಮಾಡುಸ್ತಿನಿ ಅಂದೆ.
ಎಲ್ಲ ತಿಂದು ಸತ್ಯನಾರಾಯಣನ ಪೂಜೆಗೆ ಹೋಗೋದೆ ಅಂದ್ರು ನಮ್ಮ ಗೋಪಾಲ್ ಮತ್ತು ಸತೀಶ್.
ಹಣ್ಣು ಹೂವು ತಗೋಳೋದು ಬ್ಯಾಡ್ವ ಅಂದ್ರು ಶ್ರೀಧರ್.
ಪೂಜೆ ಮುಗಿದು ಬಾಗಿಲು ಹಾಕು ಸಮಯವಾಯ್ತು ದೇವರಿಗೂ ಗೊತ್ತು ನಡಿರಿ ಅಂದ್ರು ಗಣೇಶ್.
ಎಲ್ಲರೂ ಲಿಫ್ಟ್ ಹತ್ತಿ ಎರಡನೇ ಮಹಡಿಗೆ ಹೋದೆವು. ಜನ ಕ್ಯೂನಲ್ಲಿ ನಿಂತು ತೀರ್ಥ ಪ್ರಸಾದ ಸ್ವೀಕರಿಸುತ್ತದ್ದರು. ದೇವರ ಸಮೀಪವೇ ಇದ್ದ 80ರ ಹರಯದ ಉತ್ಸಾಹದ ಚಿಲುಮೆ ಮಂಗಳಾ ಮೇಡಂ ,
ಬನ್ನಿ ಪದ್ಮ ಬನ್ನಿ ಯಾಕೆ ತಡವಾಯ್ತು. ಓ ಯಾರ್ಯಾರೋ ಜೊತೆಲಿ ಇರುವಹಾಗಿದೆಅಂದ್ರು
ಸಂಪದದ ಪರಿಚಯ ಹೇಳಿ, ಇವರೆಲ್ಲಾ ನಮ್ಮ ಸಂಪದ ಬಳಗದವರು ಎಂದು ಎಲ್ಲರನ್ನೂ ಪರಿಚಯಿಸಿದೆ. 5 ನಿಮಿಷ ಟೈಮ್ ಇದ್ಯಾ ಸ್ವಲ್ಪ ರಶ್ ಕಡಿಮೆಯಾಗಲಿ ಎಲ್ಲ ಕುಳಿತು ಕೊಳ್ಳಿ ಎಂದ್ರು. ಸುಮಧುರವಾಗಿ ಹಾಡುತ್ತಿದ್ದ ಭಕ್ತಿಗೀತೆನ ಕೇಳ್ತಾ ಕೂತೆವು.
ಹೊಟ್ಟೆಗೆ ಬೇರೆ ಸರಿಯಾಗೆ ಬಿದ್ದಿತ್ತು , ಜೊತೆಗೆ ಸಂಗೀತ ಬೇರೆ, ಎಲ್ಲರನ್ನೂ ಯಾವುದೋಲೋಕಕ್ಕೆ ಕೊಂಡೊಯ್ಯುವಂತಿತ್ತು.
ಅಷ್ಟ್ರಲ್ಲೇ ಮೇಡಂ ಕರೆದು ಎಲ್ಲರಿಗೂ ಸತ್ಯನಾರಾಯಣನ ಪ್ರಸಾದ ಮತ್ತು ವಾಂಗಿಬಾತ್ ತುಂಬಿದ ಎರಡು ಡಬ್ಬಿಗಳ ಜೊತೆಗೆ, ತೆಂಗಿನಕಾಯಿ ಮತ್ತು ಹೂವಿನ ಪ್ರಸಾದವನ್ನು ಕೊಟ್ಟರು.ಒಬ್ಬರ ಮುಖ ಒಬ್ಬರು ನೋಡಿಕೊಂಡ್ರು. ಆಗ ಶ್ರೀಧರ್ ಪ್ರಸಾದ ಇಲ್ಲೇ ತಿನ್ನ ಬೇಕು ಅಂತೇನಿಲ್ಲ ಮನೆಗೆ ತೆಗೆದುಕೊಂಡು ಹೋಗ ಬಹುದು ಎಂದ್ರು. ಎಲ್ಲರೂ ನಕ್ಕರು
ಮತ್ತೊಮ್ಮೆ ಎಲ್ಲರೂ ದೇವರಿಗೆ ನಮಿಸಿ ಹೊರಗೆ ಬಂದೆವು
ಕಾರು ಕಾಯುತ್ತಿತ್ತು. ಎಲ್ಲರಿಗಿಂತ ಮೊದಲು ಗಣೇಶ್ ಕಾರು ಹತ್ತಿದರು.
Comments
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
In reply to ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ by ಗಣೇಶ
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
In reply to ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ by padma.A
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
In reply to ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ by kavinagaraj
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
In reply to ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ by makara
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
In reply to ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ by sathishnasa
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ
In reply to ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ by manju787
ಉ: ಚಲೋ ಮಲ್ಲೇಶ್ವರ ೨೧ರ ಜೊತೆಗೆ