ರಾಜ್ಯೋತ್ಸವವಾಗಲಿ ನಿತ್ಯೋತ್ಸವ

ರಾಜ್ಯೋತ್ಸವವಾಗಲಿ ನಿತ್ಯೋತ್ಸವ

ಕವನ

 

 

 

 

 

 

 

 

 

 

 

 

 

 

 

ಬರುತಿದೆ ರಾಜ್ಯೋತ್ಸವಗಳು ಮರಳಿ ಮರಳಿ ವರುಷಕ್ಕೊಮ್ಮೆ

ಕನ್ನಡವ ನೆನೆಯುವುದು ಉತ್ಸವವ ಆಚರಿಸುವುದು ಬೇಕೇ ವರುಷಕ್ಕೊಮ್ಮೆ

ನಡೆಯಲಿ ಕನ್ನಡದ ಉತ್ಸವವು ದಿನನಿತ್ಯವೂ

ರಾಜ್ಯೋತ್ಸವವಾಗಲಿ ನಿತ್ಯೋತ್ಸವ...

 

ಬರುತಿರುವವರು ಪರಭಾಷಿಕರು ಕನ್ನಡದ ನೆಲಕೆ ಲೆಕ್ಕವಿಲ್ಲದೆ

ಬಂದವರು ಲೆಕ್ಕಿಸುತ್ತಿಲ್ಲ ನಮ್ಮ ನೆಲದ ಭಾಷೆಯ

ವರುಷಗಳು ಕಳೆದು ನೆಲೆ ನಿಲ್ಲುತಿಹರು ಇಲ್ಲಿಯೇ

ನಮ್ಮ ಭಾಷೆಗೆ ಬೆಲೆ ಕೊಡದವರಿಗೆ ಕೊಡಬೇಕೇ ನೆಲೆ ಇಲ್ಲಿಯೇ...

 

ವರುಷಕೊಮ್ಮೆ ರಾಜ್ಯೋತ್ಸವವ ಆಚರಿಸಿದರಷ್ಟೇ ಸಾಲದು

ಮೂಡಿಸಬೇಕು ಕನ್ನಡದ ಬಗ್ಗೆ ಅರಿವು ಎಲ್ಲರಲ್ಲಿಯೂ

ಎಕ್ಕಡ ಎನ್ನಡ ಎನ್ನುವವರ ಬಾಯಲ್ಲೂ ನಲಿದಾಡಬೇಕು

ನಮ್ಮ ನಾಡಿನ ಸುಂದರ ಕಸ್ತೂರಿ ಕನ್ನಡ

ಚಿತ್ರ ಕ್ರುಪೆ ಃ ಅ೦ತರ್ಜಾಲ

 

Comments