ಬೆಂಗಳೂರಿನ ರಸ್ತೆಗಳ ಮೇಲೆಲ್ಲಾ 'ಧುತ್ತೆಂದು' ಕಾಣಿಸಿಕೊಂಡು, ಬೆಂದಕಾಳೂರಿನ ಸಮಸ್ತ ಜನರನ್ನು ಬೆಳಮ್ಬೆಳಗ್ಗೆ ಕಂಗೆಡಿಸಿದ ಸಮಸ್ತ ಪ್ರಾಣಿಗಳು , ತಮ್ಮ ಬೇಡಿಕೆ ಈಡೇರಿಕೆಗೆ 'ವಿಧಾನ ಸೌಧದ' ಕಡೆ ಹೊರಟವು.
ಅದಾಗಲೇ 'ಈ ಪ್ರಾಣಿಗಳ ಬೆಂಗಳೂರು ಚಲೋ-ವಿಧಾನ ಸೌಧ ಜಾಥ' ಪ್ರಪಂಚಾದ್ದ್ಯಾಂತ ಅಧ್ಭುತ ಪ್ರಚಾರ ಹೊಂದಿ,ಭಾರತವಸ್ತೆ ಅಲ್ಲದೆ ಭೂಗೋಳದ ಸಮಸ್ತ ದೇಶಗಳ ಸುದ್ಧಿ ವಾಹಿನಿಗಳ ವರದಿಗಾರರು ಭಾರತಕ್ಕೆ ರಾತ್ರೋ-ರಾತ್ರಿ ಧಾವಿಸಿದ್ದರು ಗಲ್ಲಿ-ಗಲ್ಲಿಗಳಲ್ಲಿ ಕ್ಯಾಮೆರ ಇಟ್ಟುಕೊಂಡು 'ಬ್ರೆಕಿಂಗ್ ನ್ಯೂಸ್ ' ತಾವೇ ಮೊದಲು ಕೊಡಬೇಕು ಎಂಬ ಹಪಾ-ಹಪಿಯಲ್ಲಿದ್ದರು !!
ಮೊಬೈಲುಗಳ ಉಪಯೋಗದಿಂದಾಗಿ ಈ ಸುದ್ಧಿ ಬಹು ಬೇಗ ಎಲ್ಲೆಡೆ ಹರಡಿ ಭಾರತ ಕುತೂಹಲದ ಕಾರಣವಾಗಿ ಎಲ್ಲೆಡೆಯೂ ಈ ವಿಷಯವಾಗಿಯೇ ೨೪/೭ ಸುದ್ಧಿ ವಾಹಿನಿಗಳು 'ಹೇಳಿದ್ದನ್ನೇ ಹೇಳುತ್ತಾ' ಜನರ ನೆಮ್ಮದಿ ಕೆಡಿಸಿದ್ದು ಆಯ್ತು.ಎಲ್ಲೆಡೆಯಿಂದಲೂ ಹತ್ತಿರದ ಪೋಲೀಸ್ಟೇಸನ್ ಗಳಿಗೆ ಫೋನುಗಳ ಸುರಿಮಳೆಯೇ ಆಯ್ತು. ಆದರೇನು ಪೊಲೀಸರೂ ಈ ವಿಷಯದಲ್ಲಿ ಜನರಿಗೆಸಹಾಯ ಮಾಡಲಾಗದೆ ಅಸಹಾಯಕರಾಗಿದ್ದರು.
ಅದಾಗಲೇ ಪೊಲೀಸರಿಗೆ ತಮ್ಮ ತಮ್ಮ ಮನೆಯವರಿಂದ ಈ ಪ್ರಾಣಿಗಳ ವಿಚಾರ ಗೊತ್ತಾಗಿತ್ತು. ಬಗೆಹರಿಸಲು ಆಗದ ಅದೆಸ್ಟೋ ಕೇಸುಗಳು ಅವುಗಳಿಗೆ ಸಂಬಂದಿಸಿದ ಫೈಲುಗಳು ಹುಳು-ಹುಪ್ಪಟೆಗಳಿಗೆ ಆಹಾರವಾಗಿ ಕೊಳೆಯುತ್ತ ಬಿದ್ದಿರುವಾಗ 'ಈ ಹೊಸ ಸಮಸ್ಯೆ ಬೇರೆ'!! ಪೋಲೀಸರ ಗೊಣಗಾಟ..
ಆದರೆ ಪೊಲೀಸರಿಗೆ ಸಮಾಧಾನವಾದ ಅಂಶವೆಂದರೆ , ನರ ಮನುಷ್ಯರ ಹಾಗೆ ಯಾವೊಂದು ತೊಂದರೆ ಯಾರಿಗೂ ಕೊಡದೆ ಶಾಂತಿಯುತವಾಗಿ ಪ್ರತಿಭಟಿಸುತ್ತ ಹೊರಟಿದ್ದ ಪ್ರಾಣಿಗಳು. ಆದರೂ ಜನ ತಾವ್ ಅವಾಗವಾಗೊಮ್ಮೆ ಟೀ ವಿ ಯಲ್ಲಿ ಇಲ್ಲಾ ಜೂಗಳಲ್ಲಿ ನಿರ್ಭೀತಿಯಿಂದ ತಮ್ಮನ್ನು ನೋಡಲಾಗದೆ ತತ್ತರಿಸುವಂತೆ ಮಾಡಿದ ಈ ಪ್ರಾಣಿಗಳನ್ನ ತಮ್ಮ ಕಣ್ಣೆದುರಿಗೆ ಕೆಲವೇ ಅಡಿಗಳ ದೂರದಲ್ಲಿ ನೋಡಿ ಭಯಭೀತರಾಗಿ ಪೊಲೀಸರಿಗೆ ಫೋನಾಯಿಸುವುದು,
ಓಟು ಕೇಳೋಕೆ ಬಂದು ಕೈ-ಕಾಲು ಹಿಡಿದ್ಕೊಂಡು- ತಬ್ಬಿಕೊಂಡು ಗೆಲ್ಲೋಕೆ ಶತಾಯಗತಾಯ ಪ್ರಯತ್ನಿಸೋ 'ರಾಜಕಾರಣಿಗಳು' ಈ ವಿಷಯದಲ್ಲಿ
ಏನು ಮಾಡದೆ 'ತಮ್ಮ ತಮ್ಮ ಜಂಜಾಟದಲ್ಲಿ ಮುಳುಗಿದ ಜನ ಪ್ರತಿನಿಧಿಗಳಿಗೆ' ಹಿಡಿ ಶಾಪ ಹಾಕುವುದು, ಅದ್ಯಾಗ್ಗೂ ಆ ಪ್ರಾನಿಗಳತ್ತ ಧೃ ಸ್ಟಿ ಹಾಯಿಸುತ್ತ ಮುಂದೇನಾಗಬಹುದು ಎಂದು ಕಾತರಿಸುತ್ತಿದ್ದರು.
ಹಿಂದೆ, ಮುಖ್ಯಮಂತ್ರಿಯಾಗಿದು ಜನ ಮನ್ನನೆಗಲಿಸಿ, ತಾವ್ ಮಾಡಿದ್ದೆ ಸರಿ ಅದಕ್ಕೆಲ್ಲರ ಅನುಮತಿಯೂ ಇದೆ ಎಂದುಕೊಂಡು ಯಾವ್ಯಾವುದೋ ಹಗರಣ ಮಾಡಿ ವಿರೋಧಿಗಳು ಮತ್ತು ಪಕ್ಚದವ್ರ ಹೊಟ್ಟೆಗೆ ತಂಪನ್ನು ಕೊಟ್ಟು ,ಜೈಲು ವಾಸ ಮಾಡಬೇಕಾಗಿ ಬಂದದ್ದರಿಂದ ,
ತಾವಾಯ್ತು ತಮ್ಮ ಕೆಲಸವಾಯ್ತು, ಮುಂದೆ ಬಂದರೆ ಹಾಯದ- ಹಿಂದೆ ಬಂದರೆ ಒದೆಯದ ಹಸು ರೀತಿ ಇದ್ದು, ಆ ಗಾದೆ ಮಾತು- ಆಡು ನುಡಿಗೆ ಸಮನಾರಥಕವಾದನ್ತಿದ್ದ ,
ಈ ಹಾಲಿ ಮುಖ್ಯಮಂತ್ರಿಗೆ ಇದ್ದಕ್ಕಿದ್ದಂತೆ ಲಾಟರಿ ಒಡೆದು 'ಧಿಡೀರ್ ಮುಖ್ಯಮಂತ್ರಿಯದ್ರು'..
ಇದ್ದಕ್ಕಿದ್ದಂತೆ ಧುತ್ತೆಂದು ಅರ್ಧ ರಾತ್ರಿ ಐಶ್ವರ್ಯ ಬಂದಂತೆ ಬಂದ 'ಆ ಹುದ್ದೆಯನ್ನು ಕಷ್ಟ ಪಟ್ಟು ನಿಭಾಯಿಸುತ್ತಾ', ಹಿಂದಿನಿಂದ -ಮುಂದಿನಿಂದ ಅಕ್ಕ-ಪಕ್ಕದಿಂದ- ತಮ್ಮದೇ ಪಕ್ಸ್ಸ್ಸದವರಿಂದ- ವಿರೋಧಿಗಳಿಂದ 'ಸದಾ' ದಶ ದಿಕ್ಕುಗಳಿಂದ ಬರುತ್ತಿದ್ದ ಟೀಕೆಗಳನ್ನ 'ನಗು-ನಗುತ್ತಲೇ- ಎದುರಿಸಿ 'ಹೆಂಗಾರ ಅವಧಿ ಮುಗಿಸಿದರೆ' ಸಾಕಪ್ಪ ಎಂಬಂತಿದ್ದ ನಮ್ ಕರುನಾಡಿನ ಮುಖ್ಯಮಂತ್ರಿಗಳಿಗೆ
ಇದೊಳ್ಳೆ ಪೇಚು! ಅನಿಸ್ತು..
ಅಲ್ಲಾ, ಪ್ರಾಣಿಗಳು ಮಾತಾಡೋದು ಅಂದ್ರೇನು ಜಾಥ -ಸ್ಟ್ರೈಕು ಮುತ್ತಿಗೆ ಮಾಡೋದು ಅಂದ್ರೇನು? ಯ್ಯೋ ಡೀ ಆಯಿ ಜಿ ಯಪ್ಪಾ 'ಒಳ್ಳೆವ್ರಿಗೆ ಅದೆನೆನ್ನೋ ಕಷ್ಟ ಬರ್ತವೆ ' ಅನ್ನೋ ಗಾದೆ ಬಹುಶ ನನಗಾಗಿಯೇ ಮಾಡಿರಬೇಕು ಅಂದ್ರು!!...
ಸಾರ್- ಕೇಂದ್ರಕ್ಕೆ ಫೋನಾಯಿಸಿ ಹೆಚ್ಚುವರಿ ಭದ್ರತಾ ಪಡೆಗಳನ್ನ ಕಮ್ಮಾನ್ದೊಗಳನ್ನ ಕರಿಸೋಣವೇ? ಡೀ ಐ ಜೀ ಗಳ ಪ್ರಶ್ನೆ
ಮುಖ್ಯಮಂತ್ರಿಗಳು - ರ್ರೀ ಮೊದ್ಲೇ ನಮ್ ಸರಕಾರವನ್ನ ಹೆಂಗಾರ ಕಿತ್ ಹಾಕೋಕೆ 'ಅವ್ರು' ತುದಿಗಾಲಲ್ಲಿ ನಿಂತವ್ರೆ ನೀವ್ ಹೋಗೋಗಿ 'ಅವ್ರ' ಸಹಾಯ ಕೇಳಿ ಅಂತೀರಲ್ಲ. ಅದರ ಬದಲಿಗೆ ನಮ್ಮ ಪಕ್ಷಿ-ಪ್ರಾಣಿ ಶಾಸ್ತ್ರಜ್ನರನ್ನ ಕರೆಸಿ ಅವರ ಸಲಹೆ ಕೇಳಿ.
ಇಲ್ಲಾ ಬೇರೆ ಬೇರೆ ದೇಶಗಳಲ್ಲಿ ಈ ತರಹದ್ದೆನಾರ ನಡೆದಿದ್ಯ? ಹಾಗಿದ್ರೆ ಅವರೇನು ಮಾಡಿದ್ರು ತಿಳ್ಕೊಳಿ.
ಆದರೆ ಯಾರೊಬ್ಬರೂ ಪ್ರಾಣಿಗಳ ಮುಂದೆ ಹೋಗಿ ಅವುಗಳ 'ದುಮ್ಮಾನ' ಕೇಳಲು ಒಪ್ಪದೇ ಬೇರೆ ಗತ್ತ್ಯಂತರವಿಲ್ಲದೆ ಖುದ್ದು ಮುಖ್ಯಮಂತ್ರಿಗಳೇ ವಿಧಾನಸೌಧ ಮುಮ್ಬಾಗಕ್ಕೆ ದಯಮಾಡಿಸಿ ಪ್ರಾಣಿಗಳ 'ದೂರು-ದುಮಮಾನಕ್ಕೆ' ಕಿವಿ ಕೊಟ್ಟರು.
ಉಭಯ ಕುಶಲೋಪರಿ ನಂತರ 'ಮುಖ್ಯಮಂತ್ರಿಗಳು' ಪ್ರಾಣಿಗಳನ್ನು ಪ್ರಶ್ನಿಸಿದರು ಏನು ನಿಮ್ಮ ಸಮಸ್ಯೆ?
ಗಜರಾಜ ಮುಂದೆ ಬಂದು 'ಮುಖ್ಯಮಂತ್ರಿಗಳ' ಮುಂದೆ ಒಂದು ಸುರುಳಿ ಸುತ್ತಿದ ಬಂಡಲ್ ಅನ್ನು ತನ್ನ ಸೊಂಡಿಲಿಂದ ಇಳಿಸಿದ.
ಆ ಸುರುಳಿ ಸುತ್ತಿದ ದೊಡ್ಡ ಬಂಡಲ್ ಅನ್ನು 'ಧಿಗ್ಬ್ರಮೆಯಿಂದ' ನೋಡಿದರೆಲ್ಲರೂ! ಆ ಸುರುಳಿಯಲ್ಲಿ ಅದೆಸ್ಟು ಬೇಡಿಕೆಗಲಿರಬಹುದು? ಅದನ್ನು ಈಡೇರಿಸಲು ಇನ್ನು ಅದ್ಯಾವ- ಅದೆಷ್ಟು ಶತಮಾನ ಬೇಕಾಗಬಹುದು?
ಆ ಸುರುಳಿ ಬಿಚ್ಚಿ ಅದರಲ್ಲಿನ ಸಮಸ್ಯೆಗಳು- ಅದಕ್ಕೆ ಪರಿಹಾರ ಒಟ್ಟೊಟ್ಟಿಗೆ ಅದಾಗಲೇ ರೆಡಿ ಮಾಡಿ ಇಟ್ಟಿದ್ದ ಪ್ರಾಣಿಗಳ ಬಗ್ಗೆ ಅಧಿಕಾರಿಗಳಿಗೆ- ಮುಖ್ಯಮಂತ್ರಿಗಳಿಗೆ ಆಶ್ಚರ್ಯವಾಯ್ತು.
ಸಮಸ್ಯೆಗಳು:
---------------
೧. ನಮ್ಮ ಪಾಡಿಗೆ ಹೆಂಗೋ 'ಶಿವ' ಅಂತ ಬದುಕೊಂಡಿರೋಣ ಅಂತಂದ್ರೂ, ನಮ್ಮನ್ನು ಬಿಡದೆ ನಾಡಿನ ಜಾಗ ಕಡಿಮೆಯಾಗಿ ಈಗೀಗ ಕಾಡೊಳಕ್ಕೆ ನುಗ್ಗಿ ನಮ್ಮ ವಾಸ ಸ್ಥಾನವನ್ನ ಅತಿಕ್ರಮಿಸಿದ ಮನುಷ್ಯರು.
೨.ಮಾ0ಸ-ಚರ್ಮ ಅದೂ ಸಾಲದೇ ಮೂಳೇಯನ್ನು ಬಿಡದೆ ' ಖಾರ -ಮಸಾಲೆ ಅರೆದು ಎಣ್ಣೆಯಲ್ಲಿ ಕೊರೆದು' ಬೇ ಚಪ್ಪರಿಸಿಕೊಂಡು ತಿಂದು ನಮ್ಮ ಪ್ರಾಣಿಗಳ ಸಂತತಿಯನ್ನು ನಿರ್ಮೂಲನೆ ಮಾಡುತ್ತಿರುವುದು.
ನಮ್ಮ ಹೆಸರು ಹೇಳಿಕೊಂಡು ಅದನ್ನೂ ಕೆಟ್-ಕೆಟ್ಟ ಕೆಲಸಕ್ಕೆ ಉಪಯೋಗಿಸಿಕೊಂಡು ನಮ್ಮ ಹೆಅಸರಿಗೆ ಮಸಿ ಬಳಿಯುತ್ತಿರುವುದು.
ಉದಾ: ಕುದುರೆ ವ್ಯಾಪಾರ!
ಊಸರವಳ್ಳಿ ಗುಣ
ನೀನೊಬ್ಬ ನಾಯಿ, ಕತ್ತೆ -ಹಂದಿ ಮುಂತಾದ ಪ್ರಾಣಿ ಹೆಸರಿನ ಸಂಬೋಧನೆ.
ಕೋತಿ ತರಹ ಆಡಬೇಡ
ನಾಯಿ ನಿಯತ್ತು ಓಕೆ ಆದರೆ ನಾಯ ಬಾಲ ಡೊಂಕು?
ಮೊಸಳೆ ಕಣ್ಣೀರು
ಗೂಬೆ ನನ್ನ ಮಗ
ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು
ಎತ್ತು ಏರಿಗೆ ಕೋಣ ನೀರಿಗೆ
ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ?
ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
ಗಜ ಪ್ರಸವದ ಸಂಪುಟ ವಿಸ್ತರಣೆ ,ಇತ್ತ್ಯಾದಿ ಪದಗಳ ಬಳಕೆ !
ಈ ಎರಡು ಮೂರು ಬೇಡಿಕೆ ಅವುಗಳ ಪರಿಹಾರ ಓದಿಯೇ ಸುಸ್ತಾದ ಅಧಿಕಾರಿ ವೃಂದ 'ಮುಖ್ಯಮಂತ್ರಿಗಳ' ಕಿವಿಯಲ್ಲಿ ಉಸುರಿತು, ಅದಸ್ಟು ಶೀಘ್ರ ನಿಮ್ಮೆಲ್ಲ ಬೇಡಿಕೆ ಈಡೇರಿಸುತ್ತೇವೆ ಅಂತೇಳಿ ಅವುಗಳನ್ನ ಸಾಗ ಹಾಕಿ ಸಾರ್!!
Comments
ಉ: ಪ್ರಾಣಿಗಳ ಬೆಂಗಳೂರು ಚಲೋ-3
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-3 by neela devi kn
ಉ: ಪ್ರಾಣಿಗಳ ಬೆಂಗಳೂರು ಚಲೋ-3
ಉ: ಪ್ರಾಣಿಗಳ ಬೆಂಗಳೂರು ಚಲೋ-3
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-3 by kahale basavaraju
ಉ: ಪ್ರಾಣಿಗಳ ಬೆಂಗಳೂರು ಚಲೋ-3