ಸುಬ್ಬನ ಕಂತೆ ಪುರಾಣ !!
ಮೊನ್ನೆ ಇದ್ದಕ್ಕಿದ್ದ ಹಾಗೆ, ನಾನಿರದ ವೇಳೆಯಲ್ಲಿ, ಪ್ರಾಣಿ ದಯಾ ಸಂಘದವರು ಕರೆ ಮಾಡಿದ್ದರಂತೆ ! ನಾನು ಮನೆಗೆ ಬಂದ ಕೂಡಲೆ ನನ್ನ ಹೆಂಡತಿ ವಿಷಯವನ್ನು ಅರುಹಿದಳು. ನನಗೇಕೆ ಕರೆ ಮಾಡಿದ್ದರು ಎಂದು ಅರ್ಥವಾಗಲಿಲ್ಲ !! ನಮ್ಮ ಮನೆಯಲ್ಲಿ ಯಾವ ಪ್ರಾಣಿಗಳೂ ಇಲ್ಲ ! ಅಲ್ಲಾ, ನಾನೇ ಒಂದು ಪ್ರಾಣಿ, ನನ್ನೊಂದಿಗೇಕೆ ಮತ್ತೊಂದು ಪ್ರಾಣಿ? ಅಲ್ಲದೇ ನನಗೂ ಪ್ರಾಣಿಗಳಿಗೂ ಸ್ವಲ್ಪ ದೂರ. ಇದೇ ರೀತಿ ಬೇರೆ ಯಾರಿಗಾದರೂ ಕರೆ ಬಂದಿತ್ತೇನೋ ಎಂದು ಕೇಳುವಾ ಅಂದರೆ, ಮತ್ತೆ ಆರು ಘಂಟೆಗೆ ಕರೆ ಮಾಡುತ್ತೇವೆ ಎಂದು ಹೇಳಿದ್ದರಂತೆ ... ಹಾಗಾಗಿ ಮನೆಯಲ್ಲೇ ಕಾದು ಕುಳಿತೆ.
ಏಕಿರಬಹುದು ಎಂದು ಯೋಚನೆಯೋ ಯೋಚನೆ. ಮೊನ್ನೆ ನನ್ನ ಬಾಸ್’ನನ್ನು ’ಬುಲ್ ಡಾಗ್’ ಎಂದು ಮನಸ್ಸಿನಲ್ಲೇ ಬೈದುಕೊಂಡಿದ್ದಕ್ಕೆ, ’ಬುಲ್ ಡಾಗ್’ ಕೇಸ್ ಹಾಕಿರಬಹುದೇ? ಅಥವ ರಸ್ತೆ ಕೊನೆಯ ಕಜ್ಜಿ ನಾಯಿಗೆ ಹಳಸಿದ ಅನ್ನ ಹಾಕಿದ್ದಕ್ಕೇನಾದರೂ ಕರೆ ಮಾಡಿರಬಹುದೇ? ಇತ್ತೀಚೆಗೆ ಸಿಕ್ಕಾಪಟ್ಟೆ ಕೆಲ್ಸ ಇರೋದ್ರಿಂದ ಅದೂ ಅಲ್ಲದೇ ಕಾನೂನು ಟೈಟ್ ಆಗಿರೋದ್ರಿಂದ ಹುಲಿ, ಸಿಂಹ ಬೇಟೆಯಾಡಲೂ ಬಿಡುವಿಲ್ಲ ... ಹೋಗ್ಲಿ ಬಿಡಿ ....
ಕರೆ ಬರುವವರೆಗೂ ಆಂಜನೇಯ, ಗಣೇಶ, ನಾರಸಿಂಹ ಶ್ಲೋಕಗಳನ್ನು ಹೇಳಿಕೊಂಡೆ ... ದೈವತ್ವ ಇರುವಂತಹ ಪ್ರಾಣಿದೇವರುಗಳು ನೋಡಿ ಅದಕ್ಕೇ !!
ಸರಿಯಾಗಿ ಆರು ಘಂಟೆಗೆ ಕರೆ ಮಾಡಿಯೇಬಿಡೋದೇ? ಕರೆ ಸ್ವೀಕರಿಸಿದ್ದು ನಾನು ಎಂದ ಕೂಡಲೆ ಎದುರು ಮನೆ ಆಲ್ಸೇಷನ್ Doggy ರೀತಿ, ನನ್ನ ಮೇಲೆ ಹಾರಿ ಬೀಳೋದೇ? ಕೊನೆಗೆ ’ಪುರಾವೆ ಒದಗಿಸುತ್ತೇನೆ’ ಎಂದು ಕರೆ ಮುಗಿಸಿದೆ.
ಇಂತಹ ಕರೆ ಮೊದಲ ಬಾರಿಗೆ ಬಂದಿದ್ದರಿಂದ ಇವಳಿಗೂ ಯೋಚನೆಯಾಗಿತ್ತು. "ಏನು?" ಎಂಬಂತೆ ನೋಡಿದಳು. "ದೀಪಾವಳಿಯ ವಿಶೇಷ ಅಂತ ಹೇಳಿ ’ಸುಬ್ಬ’ನ ಬಗ್ಗೆ ಬರೆದಿದ್ದೆನಲ್ಲ, ಅದರ ಬಗ್ಗೆ ಮಾತನಾಡಲಿಕ್ಕೆ ಕರೆ ಮಾಡಿದ್ದರು" ಎಂದೆ. ನಾನು ಟೆನ್ಷನ್’ಗೆ ಏನೇನೋ ಮಾತನಾಡುತ್ತಿದ್ದೇನೆ ಎಂದುಕೊಂಡು ನನ್ನಾಕೆ ಗಾಭರಿಯಾದಳು.
"ಸ್ವಲ್ಪ ಹೊತ್ತು ಕೂತ್ಕೊಳ್ಳೀ ಅಂದ್ರೆ. ಕುಡೀಲಿಕ್ಕೆ ಏನಾದ್ರೂ ಕೊಡ್ಲೇ? ನೋಡಿ, ಟೆನ್ಷನ್ ಮಾಡಿಕೊಂಡು ಏನೇನೋ ಪೆದ್ದು ಪೆದ್ದಾಗಿ ಮಾತನಾಡಬೇಡಿ" ಎಂದು ಆತಂಕ ತೋರಿದಳು.
"ನನಗೆ ಏನೂ ಆಗಿಲ್ಲ ಕಣೆ. ಪ್ರಾಣಿ ದಯಾ ಸಂಘದವರು ಕರೆ ಮಾಡಿ ’ಸುಬ್ಬ’ ಎಂಬೋ ಪ್ರಾಣಿ ಬಗ್ಗೆ ಬಹಳ ನಿಕೃಷ್ಟವಾಗಿ ಬರೆದಿದ್ದೀರ. ಇದು ಸಲ್ಲದು ಅವನು ಹೀಗೆ ಎನ್ನಲಿಕ್ಕೆ ಪುರಾವೆ ನೀಡಿ ಅಂದರು. ಅದಕ್ಕೆ ನಾನು ಬರೆದು ಕಳಿಸಬೇಕು" ...
ಸಂಘದವರ ಚಟುವಟಿಕೆ ಮೂಕ ಪ್ರಾಣಿಗಳನ್ನು ದಾಟಿದೆ ಎನ್ನಿಸಿದ್ದೇ ಅಲ್ಲದೇ, ಬೆಟ್ಟದಂತೆ ಬಂದಿದ್ದು ಹತ್ತಿಯಂತೆ ಹಾರಿಹೋದಂತೆ ಹಾಯೆನಿಸಿತು ಅವಳಿಗೆ ... "ಹೈ ಲೈಟ್ಸ್ ಬರೀಬೇಕಾ ಅಥವಾ ಕಾದಂಬರೀನಾ?" ಅಂದಳು ... "ನಾನು ಬರೆದು ಕೊಡ್ತೀನಿ, ಅದನ್ನು ಯಾವ ವಿಭಾಗಕ್ಕೆ ಸೇರಿಸ್ತೀಯೋ ನಿನಗೆ ಬಿಟ್ಟಿದ್ದು" ಎಂದೆ ....
--------
ಸುಬ್ಬ ... ಆ ಹೆಸರು ಮನಕ್ಕೆ ಬಂದೊಡನೆ ಮನಕ್ಕಿಂತಲೂ ವೇಗವಾಗಿ ಲೇಖನಿ ಓಡುತ್ತದೆ ...
ಸುಬ್ಬ ತನ್ನ ವಿಚಿತ್ರ ಅಭ್ಯಾಸಗಳಿಂದ ಯಾವ ರೀತಿ ಆಭಾಸಗಳನ್ನು ಮಾಡುತ್ತಾನೆ ಎಂಬುದಕ್ಕೆ ಇದೊಂದು ನಿದರ್ಶನ ... ಕಳೆದ ವರ್ಷ ನೆಡೆದ ಘಟನೆ ....
ರಾಜ್ಯೋತ್ಸವದ ದಿನ ಪತಾಕೆ ಹಾರಿಸಿ, ದೀಪಾವಳಿ ಹಬ್ಬದಿ ಪಟಾಕಿಗಳ ಹಾರಿಸಿ/ಉರಿಸಿ ಸಂಭ್ರಮ ಮುಗಿದ ಮೇಲಿನ ಒಂದು ಶುದ್ದ ಭಾನುವಾರ. ಬಿಸಿ ಬಿಸಿ ಕಾಫೀ ಹೀರುತ್ತ ಪೇಪರ್ ಓದುತ್ತ ಕುಳಿತಿದ್ದೆ ... ಆಗ ಬಂದಿತ್ತೊಂದು ಕರೆ ... ಖರೆ, ಅದು ಸುಬ್ಬನ ಕರೆ ... ’ಅನ್ನಕಂಟಕರಾಯ’ ಅನ್ನೋ ಹಾಗೆ ಸುಬ್ಬ ’ಕಾಫಿಕಂಟಕರಾಯ’ !!!
ಹಾದಿ ಬದಿಯ ಅಂಗಡಿಯಲ್ಲಿ ಕಾಯಿನ್ ಬಳಸಿ ನನಗೆ ಕರೆ ಮಾಡಿ, ಅಂದಿನ ಕಾಲದ ’ಟೆಲಿಗ್ರಾಮ್’ ಮೆಸೇಜ್’ನಂತೆ "ನಾವು ಬರ್ತಿದ್ದೀವಿ. ಮನೇಲಿ ಇರ್ತೀ ತಾನೇ" ಎಂದ. ನಾನು ’ಹೂ’ ಎಂದ ಕೂಡಲೆ ಲೈನ್ ಕಟ್ಟಾಗಿತ್ತು. ಇದ್ದೀಯಾ? ಹ್ಯಾಗಿದ್ದೀಯಾ? ಯಾಕಿದ್ದೀಯ? ಎಂಥದ್ದೂ ಇಲ್ಲ ... ಪಾಪಿ !!
ವಿಷಯ ಪತ್ನಿಗೆ ತಲುಪಿಸಿದೆ. ಆಕೆ ಕೇಳಿದಳು "ಸರಿ, ಈ ’ನಾವು’ ಎಂದರೆ ಯಾರ್ಯಾರು"? ಇವಳು ಯಾವಾಗ್ಲೂ ಹೀಗೆ ... ನನಗೆ ಗೊತ್ತಿಲ್ಲದೇ ಇರೋದನ್ನೇ ಕೇಳೋದು ! ನನಗೇನು ಗೊತ್ತು? ಹಾಗೆ ಹೇಳಿದ್ರೆ "ಕೇಳಬಾರದಿತ್ತೇ?" ಅಂತಾಳೆ ... ಇವನ ಬಳಿ ಮೊಬೈಲ್ ಇದ್ದಿದ್ದ್ರೆ ಮತ್ತೆ ಕರೆ ಮಾಡಬಹುದಿತ್ತು. ಅದೂ ಇಲ್ಲ.
ನನಗೆ ತಿಳಿದಂತೆ, ಅವನು ದೀಪಾವಳಿಗೆ ಮಾವನ ಮನೆಗೆ ಹೋಗಿದ್ದ. ಈಗ ವಾಪಸ್ ಬರ್ತಿದ್ದಾನೆ ಅನ್ನಿಸುತ್ತೆ. ವಿಶೇಷ ಏನಪ್ಪಾ ಅಂದರೆ, ಸುಬ್ಬನ ಹೆಂಡತಿ ಸುಬ್ಬಿಯನ್ನು ಬಿಡಲು ಅಪ್ಪ-ಅಮ್ಮ ಇವರ ಮನೆಗೆ ಬಂದು ಆರು ತಿಂಗಳಿದ್ರೆ, ಅವರನ್ನು ಬಿಡಲು ಇವಳು ಅವರಲ್ಲಿಗೆ ಬಂದು ಆರು ತಿಂಗಳಿರುತ್ತಾಳೆ. ಹಾಗಾಗಿ ನನ್ನ ಊಹೆಯ ಪ್ರಕಾರ ನಾಲ್ಕೂ ಜನ ಬರುತ್ತಿದ್ದಾರೆ.
ನನ್ನಾಕೆ ನುಡಿದಳು "ಒಂದು ಕೆಲ್ಸ ಮಾಡ್ತೀನಿ . ಎರಡು ಪಾವು ಅವಲಕ್ಕಿ ನೆನೆ ಹಾಕಿ ಒಗ್ಗರಣೆ ಹಾಕ್ತೀನಿ". ನಾನು "ಅದು ಸುಬ್ಬನಿಗೆ ಅಯ್ತು. ಮಿಕ್ಕವರಿಗೆ ?" ಎಂದೆ. ಸ್ನೇಹಿತರಲ್ಲ ಒಂದೇ ಎನ್ನೋ ಹಾಗೆ ದುರುಗುಟ್ಟಿ ನೋಡಿದಳು ... ಎರಡಿದ್ದುದು ನಾಲ್ಕಾಯ್ತು. ಜೊತೆಗೆ ಹಪ್ಪಳ, ಸಂಡಿಗೆ ಅಂತೆಲ್ಲ ಆಗಿ ಭಾನುವಾರ ಬರೀ ಅಡುಗೆಮನೆ ಕೆಲಸ ಎಂಬಂತಾಯ್ತು.
ಅಂತೂ ಇಂತೂ ಹನ್ನೊಂದಕ್ಕೆ ಅತಿಥಿ (ಆ ತಿಥಿ)ಯ ಆಗಮನ. ಅದೆಲ್ಲಿಂದ ನೆಡೆದು ಬಂದರೋ ಏನೋ ಒಟ್ಟಿನಲ್ಲಿ ಬೆವರಿಳಿಸುತ್ತ ಬಂದಿದ್ದರು ... ಸುಬ್ಬನವರು ... ಒಬ್ಬರೇ !!!
ಮನೆಹಾಳ ... "ಮಿಕ್ಕವರು ಎಲ್ಲೋ?" ಅಂದರೆ, ಪಿಳಿ ಪಿಳಿ ಅಂತ ಕಣ್ಣು ಬಿಡುತ್ತ "ನಾವು ಒಬ್ಬರೇ ಬಂದಿದ್ದು" ಎಂದ ... ತನಗೇ ತಾನೇ ಮರ್ಯಾದೆ ಕೊಟ್ಟುಕೊಳ್ಳೋದನ್ನು ಯಾವ ಸ್ವಾಮಿಗಳನ್ನು ನೋಡಿ ಕಲಿತಿದ್ದನೋ ಗೊತ್ತಿಲ್ಲ .. ಬೆಳಿಗ್ಗೆ ಬೆಳಿಗ್ಗೆ ನಾಲ್ಕು ಪಾವು ಒಗ್ಗರಣೆ ಅವಲಕ್ಕಿ ಮಾಡಿಸಿದ್ದ, ಪುಣ್ಯಾತ್ಮ !!
ಮಧ್ಯಾನ್ನದ ಹೊತ್ತಿಗೆ ಊಟದಷ್ಟೇ ಅವಲಕ್ಕಿ ಕತ್ತರಿಸಿದ ಮೇಲೆ, ಅವನನ್ನು ಸಾಗಹಾಕಿ ಬಾಗಿಲು ಬಡಿದುಕೊಂಡು, ಅಂತೂ ’ರೈಟ್’ ಹೇಳಿದರು ಸುಬ್ಬನವರು ಎಂದು ನಕ್ಕೆ. ನನ್ನಾಕೆ "ಅಂದ ಹಾಗೆ, ಸುಬ್ಬನವರು ಕಂಡಕ್ಟರ್ ಕೆಲಸಕ್ಕೆ ಅಂತ ಇಂಟರ್ವ್ಯೂ’ಗೆ ಹೋಗಿದ್ರಲ್ಲ. ಏನಾಯ್ತಂತೆ?" ಎಂದು ರಾಗವಾಗಿ ಕೇಳಿದಳು.
"ಅದೊಂದು ಕಥೆ. ಇಂಟರ್ವ್ಯೂ’ನಲ್ಲಿ ನಡುವಳಿಕೆಯ ಬಗ್ಗೆ ಪ್ರಶ್ನೆ ಕೇಳಿದರಂತೆ. ಕಂಡಕ್ಟರಾದ ನಿಮ್ಮ ಬ್ಯಾಗ್’ನಲ್ಲಿ ಒಂದು ಪೈಸವೂ ಚಿಲ್ಲರೆ ಇರದೇ ಹೋದ ಸಮಯದಲ್ಲಿ, ಯಾರೋ ಒಬ್ಬರು ಸರಿಯಾದ ಚಿಲ್ಲರೆ ನೀಡಿ ಟಿಕೆಟ್ ಕೊಂಡರೆ, ನಿಮ್ಮ ಪ್ರತಿಕ್ರಿಯೆ ಏನು?" ಅಂತ. ಇವಳು "ಏನದ್ರಂತೆ ಸುಬ್ಬನವರು?" ಅಂದ್ಲು. "ನಿಮ್ಮಂತಹ ಚಿಲ್ಲರೆ ಮನುಷ್ಯರೇ ನಮಗೆ ಬೇಕು ಅಂತ ಪ್ರಶಂಸೆ ಮಾಡ್ತೀನಿ ಅಂತ ಇವನು ಹೇಳಿದನಂತೆ" !!
ಕಂಡಕ್ಟರ್ ಕೆಲಸ ಸಿಗಲಿಲ್ಲಾಂತ ಬೇರೆ ಹೇಳಬೇಕಿಲ್ಲವಲ್ಲ !
ನನ್ನಾಕೆ ಮತ್ತೊಂದು ಪ್ರಶ್ನೆ ಎಸೆದಳು "ಅಲ್ಲಾ, ಆಟೋ ಇಳಿದು ಬಂದೆ ಅಂತ ಹೇಳಿ ಮನೆಗೆ ಬರೋ ಅಷ್ಟರಲ್ಲಿ ಉಸ್ ಬುಸ್ ಅಂತ ಒದ್ದಾಡ್ತಿದ್ರಲ್ಲ, ಡಾಕ್ಟರ್ ಹತ್ತಿರ ತೋರಿಸಬಾರದೇ?". ನಾನೆಂದೆ "ಅಯ್ಯೋ, ಅದೇನ್ ಹೇಳ್ತೀ. ಅದಕ್ಕೂ ಒಂದು ಕಥೆ ಇದೆ. ಹೋದ ತಿಂಗಳು ಸುಬ್ಬಿ’ಗೆ ಜ್ವರ ಬಂದಿತ್ತಂತೆ. ಮೈಯೆಲ್ಲ ಸಿಕ್ಕಾಪಟ್ಟೆ ಸುಡ್ತಿತ್ತಂತೆ. ಇವನ ಮನೆ ಹತ್ತಿರೋ ಇರೋ ಮುದಿ ಡಾಕ್ಟರ್’ಗೆ ಮೈ ಹುಷಾರಿಲ್ಲ ಅಂತ ಕ್ಲಿನಿಕ್ ಬಾಗಿಲು ಹಾಕಿತ್ತಂತೆ. ಹಾಗಾಗಿ, ಆರು ತಿಂಗಳು ಅಮೇರಿಕದಲ್ಲಿದ್ದು ಟಸ್ ಪುಸ್ ಅಂತ ಬರೀ ಇಂಗ್ಲೀಷ್ ಮಾತಾಡೋ ಮರಿ ಡಾಕ್ಟರ್ ಹತ್ತಿರ ಹೋದನಂತೆ. ಇವನೋ ಪಾಪ ತನಗೇ ಗೊತ್ತಿರೋ ಇಂಗ್ಲೀಷಿನಲ್ಲೇ ವಿಷಯ ಒದರಿದ. ಇವನು ಹೇಳಿದ ವಿಷಯ ಕೇಳಿ ಮರಿ ಡಾಕ್ಟರ್’ಗೇ ಜ್ವರ ಬಂದುಬಿಡ್ತು !! ಇವಳು ಕುತೂಹಲದಿಂದ "ಅದೇನು ಹೇಳಿದರು ಸುಬ್ಬನವರು?" "ಸುಬ್ಬೀನ್ನ ತೋರಿಸಿ Doctor, my subbi is hot. see ಅಂದನಂತೆ. ನಿಂತ ನಿಲುವಲ್ಲೇ ಸುಬ್ಬಿ ಬಾಯಲ್ಲಿ ಮಂಗಳಾರತಿ ಮಾಡಿಸಿಕೊಂಡು ಬಂದ ಮೇಲೆ, ಇನ್ಯಾವ ಡಾಕ್ಟರ್ ಬಳಿಯೂ ಹೋಗೋದಿಲ್ಲ ಅಂತ ತೀರ್ಮಾನ ಮಾಡಿದ್ದಾನೆ".
"ಒಳ್ಳೇ ಕಥೆಯಾಯ್ತು ರ್ರೀ ನಿಮ್ ಸುಬ್ಬನದು. ಬಸ್ ಹತ್ತಲ್ಲ, ಡಾಕ್ಟರ್ ಹತ್ತಿರ ಹೋಗೋಲ್ಲ .... ಬಸ್’ನಲ್ಲಿ ನೆಡೆದ ಘಟನೆ ಆದ ಮೇಲೆ ಸುಬ್ಬ ಹುಡುಗೀರನ್ನ ನೋಡೋಲ್ಲ ಸರಿ. ಯಾವುದಾದರೂ ಹುಡುಗಿ ಸುಬ್ಬನ ಹಿಂದೆ ಬಿದ್ದಿದ್ಲಾ?" "ಹುಡುಗಿ ಬೀಳಲಿಲ್ಲ. ಹುಡುಗಿಯಿಂದ ಬಿತ್ತು. ಅದು ಏನಾಯ್ತೂ ಅಂದರೆ ..."
ಸುಬ್ಬ ಯಾವುದೋ ಪಾರ್ಟಿಗೆ ಹೋಗಿದ್ದ.... ಸುಂದರವಾಗಿ ಬಿಳೀ ಡ್ರಸ್ ಹಾಕಿದ್ದ ಉತ್ತರ ಭಾರತೀಯ ಯುವತಿ ಒಬ್ಬಳು ಊಟದ ಟೇಬಲ್’ಗೆ ಹೋಗಿ ಎಣ್ಣೆ ಭರಿತ ಗೋಬಿ ಮಂಚೂರಿಯನ್ ಹಾಕಿಕೊಳ್ಳಬೇಕಾದರೆ ಭಯಂಕರ ಸೀನು ಬಂತು. ಅದನ್ನು ತಡೆಯುವ ಪ್ರಯತ್ನದಿ, ಮುಖವನ್ನು ಬೇರೆಡೆ ತಿರುಗಿಸುವ ಯತ್ನದಿ, ಏನಾಯ್ತೋ ಏನೋ ಒಟ್ಟಿನಲ್ಲಿ ಸೌಟಿನಲ್ಲಿ ಹಿಡಿದ ಆ ಎಣ್ಣೆ ಭರಿತ ಗೋಬಿ ಡ್ರಸ್ ಮೇಲೆ ಬಿದ್ದು, ಬಿಳೀ ವಸ್ತ್ರವೆಲ್ಲ ರಾಡಿಯಾಯಿತು ... ಮಿಕ್ಕವರು ಸ್ಕೋಪ್ ತೆಗೆದುಕೊಳ್ಳಲು, ಅವಳ ಬಗ್ಗೆ ಮರುಕಪಡುತ್ತ ಸಹಾಯಕ್ಕೆ ಹೋದರೆ, ನಮ್ಮ ಭೂಪತಿ ಏನಂದ ಗೊತ್ತೇ" "ಏನಂದ್ರು?"
ಅವಳು ಮೋಹವಾಗಿ ಶಬ್ದವಾಗದೆ ಸೀನಿದ್ದಕ್ಕೆ ಮೆಚ್ಚಿಕೊಂಡ ಸುಬ್ಬ, ಅರೆಬರೆ ಹಿಂದಿಯಲ್ಲಿ ’ಕ್ಯಾ ಸೀನ್ ಹೇ...’ ಅಂದ !!! ಆ ಸಮಯದಲ್ಲಿ ಅವನಿಗೆ ’ಸೀನು’ ಎಂಬ ಪದಕ್ಕೆ ಹಿಂದಿಯಲ್ಲಿ ಏನು ಹೇಳ್ತಾರೆ ಅಂತ ಗೊತ್ತಾಗಲ್ಲಿ ... ಹಿಂದೀ ಜೊತೆ ಕನ್ನಡ ಸೇರಿಸಿ ಹಾಗೇ ಡೈಲಾಗ್ ಬಿಟ್ಟಿದ್ದ ನಮ್ ಸುಬ್ಬ ... ತನ್ನನ್ನು ನೋಡಿ ಆಡಿಕೊಳ್ತಿದ್ದಾನೆ ಎಂದುಕೊಂಡು ಹುಡುಗಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಳು.
"ಅಯ್ಯೋ ಪಾಪ. ಈ ನಿಮ್ ಸುಬ್ಬ ಆಫೀಸಿನಲ್ಲಿ ಹೀಗೇನಾ?" "ಅದು ಇನ್ನೊಂದ್ ಕಥೆ. ಇನ್ನೊಂದು ಕಛೇರಿಯಿಂದ ಇಲ್ಲಿಗೆ ವರ್ಗಾವಣೆ ಆದ ಕಥೆ ಅದು"
"ಅಲ್ಲಿ ಟೈಪಿಸ್ಟ್ ಹುಡುಗಿ ಒಬ್ಬಳು ಇದ್ಲಂತೆ. ಬಲೇ ಬಿನ್ನಾಣಗಿತ್ತಿ. ಅದು ಪ್ರಧಾನ ಕಛೇರಿ. ಶನಿವಾರ ಅರ್ಧ ದಿನ. ಹೀಗೇ ಒಮ್ಮೆ ಕಛೇರಿಯ ಪಾರ್ಟಿಯೊಂದರಲ್ಲಿ ತನ್ನ ಡ್ರೆಸ್ ಬಗ್ಗೆ ಕೊಚ್ಚಿಕೊಳ್ಳುತ್ತಿದಳು. ನಾನು ವಾರಕ್ಕೆ ಐದು ದಿನ ಸೀರೆ / ಚೂಡಿದಾರ್ / ಪ್ಯಾಂಟು ಅಂತೆಲ್ಲ ಡ್ರೆಸ್ ಮಾಡಿಕೊಂಡು, ಶನಿವಾರ ಮಾತ್ರ ಸ್ಕರ್ಟ್ ಹಾಕ್ತೀನಿ. ಅರ್ಧ ದಿನ ರಜ ಅಲ್ವಾ ಅಂದ್ಲಂತೆ.
ಸುಮ್ಮನಿರಲಾರದೆ ನಮ್ ಸುಬ್ಬ ಕೇಳಿದ್ನಂತೆ ..." ನನ್ನಾಕೆ "ಅಯ್ಯೋ, ನೀವ್ಯಾಕ್ರೀ ನಾಚಿಕೊಳ್ತಿದ್ದೀರ? ಸುಬ್ಬ ಏನಂದ್ರು?"
"ಸುಬ್ಬ ಕೇಳಿದ್ನಂತೆ ’ರ್ರೀ, ಸ್ಟೆಲ್ಲ, ನೀವು ಭಾನುವಾರ ಯಾವ ರೀತಿ ಇರ್ತೀರಾ ಅಂತ’ !!!!!
ಯದ್ವಾತದ್ವ ರೇಗಿದ ಪತ್ನಿ "ಥತ್ !! ಪ್ರಶ್ನೆ ಕೇಳೋದಕ್ಕಿಂತ ಮುಂಚೆ ಯೋಚನೆ ಮಾಡೋದು ಬೇಡ್ವಾ?" ನಾನೆಂದೆ "ಹೌದು ಅನ್ನು. ಅದಕ್ಕೇ ಅವನನ್ನ ಅಲ್ಲಿಂದ ವರ್ಗಾವಣೆ ಮಾಡಿ ಇಲ್ಲಿಗೆ ಹಾಕಿದ್ದು"
ನಂತರ ನಾನೆಂದೆ "ಇಷ್ಟೆಲ್ಲ ಆದರೂ, ನಮ್ ಸುಬ್ಬ ನಗ್ ನಗ್ತಾ ಇರ್ತಾನೆ ಕಣೆ. ಅದಕ್ಕೇ ಕಣೆ ಅವನು ಸ್ಪೆಶಲ್ ಸುಬ್ಬ. ಇಷ್ಟು ಹೊತ್ತೂ ಹೇಳಿದ ಕಥೆಗಳನ್ನು ಬರೆದು ಪ್ರಾಣಿ ದಯ ಸಂಘದವರಿಗೆ ಈ-ಮೈಲ್ ಮಾಡಿಬಿಡುತ್ತೇನೆ" ಎಂದು ಮುಂದಿನ ಕೆಲಸದತ್ತ ನೆಡೆದ.
ಮತ್ತೆರಡು ದಿನಕ್ಕೆ ಸಂಘದವರಿಂದ ಕರೆ ಬಂತು "ಸುಬ್ಬನಂಥವರೊಂದಿಗೆ ಏಗುತ್ತಿರುವ ನಿಮ್ಮ ಬಗ್ಗೆ ನಮಗೆ ದಯೆ ಬಂದಿದೆ" ಅಂತ !!
ಅಂದ್ರೇ, ನಾನೂ ಒಂದು ರೀತಿ ಪ್ರಾಣಿಯೇ?
Comments
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by kavinagaraj
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by Chikku123
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by venkatb83
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by sathishnasa
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by manju787
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by neela devi kn
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by makara
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by bhalle
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by ಗಣೇಶ
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by partha1059
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by Jayanth Ramachar
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by spr03bt
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by Premashri
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by spr03bt
ಉ: ಸುಬ್ಬನ ಕಂತೆ ಪುರಾಣ !!
ಉ: ಸುಬ್ಬನ ಕಂತೆ ಪುರಾಣ !!
In reply to ಉ: ಸುಬ್ಬನ ಕಂತೆ ಪುರಾಣ !! by prasannakulkarni
ಉ: ಸುಬ್ಬನ ಕಂತೆ ಪುರಾಣ !!