ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು ಬಿತ್ತರಗೊಳ್ಳುತ್ತಿತ್ತು. ಅದರ ವಿನೂತನ ಸಂಗೀತ ಸಂಯೋಜನೆ ಜನಪದದ ಧಾಟಿ ಯಾವದೀ ಹಾಡು ಯಾರು ರಾಗ ಸಂಯೋಜಿಸಿದ್ದು ಎಂಬ ಜಿಜ್ಞಾಸೆ ಕಾಡ ತೊಡಗಿತು. ನಿರೂಪಕ ಸಂಶಯ ನಿವಾರಿಸಿದ್ದ. ಚಿತ್ರ ರುಡಾಲಿ, ಸಂಗೀತ ಸಂಯೋಜಕ ಭೂಪೇನ ಹಜಾರಿಕಾ. ಯಾರು ಈ ಹಜಾರಿಕಾ ಎಂಬ ಸಂಶಯ ಕಾಡಿತ್ತು. ಸಿನೆಮಾ ಸಂಗೀತ ತನ್ನ ಮಾಧುರ್ಯ ಕಳೆದು ಕೊಳ್ಳುತ್ತ ರೂಕ್ಷಗೊಳ್ಳುತ್ತ ಸಾಗಿದ್ದ ಕಾಲದಲ್ಲಿ ಯಾರು ಈ ಸಂಗೀತದ ಮೋಡಿಗಾರ ಎಂಬ ಕುತೂಹಲ ಹುಟ್ಟಿತ್ತು, ನಂತರದಲ್ಲಿ ತಿಳಿದು ಬಂದದ್ದು ಆತ ಆಸ್ಸಾಂ ರಾಜ್ಯದ ಸಾದಿಯಾ ಗ್ರಾಮ ದವನು ಎಂದು. ಭೂಪೇನ ಹಜಾರಿಕಾ ಓರ್ವ ಸವ್ಯಸಾಚಿ. ಆತ ಒಬ್ಬ ಗೀತರಚನೆಕಾರ, ಸಂಗೀತ ನಿರ್ದೇಶಕ, ಗಾಯಕ, ಕವಿ, ಪತ್ರಕರ್ತ, ಲೇಖಕ, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ,ಇವೆಲ್ಲಕ್ಕೂ ಮಿಗಿಲಾಗಿ ಆತನೊಬ್ಬ ಸಂವೇದಶೀಲ ವ್ಯಕ್ತಿಯಾಗಿದ್ದ. ಇಷ್ಟೆಲ್ಲ ಒಬ್ಬ ವ್ಯಕ್ತಿಯಲ್ಲಿರಲು ಸಾಧ್ಯವೆ ? ಸಾಧ್ಯ ಹಜಾರಿಕಾ ಇದೆಲ್ಲವನ್ನು ಸಾಧ್ಯಗೊಳಿಸಿದವ. ಈ ಅಪ್ಪಟ ಜಾನಪದ ಸಂಗೀತದ ಗಾರುಡಿಗ 1926ರಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಗೌಹಾಟಿಯಲ್ಲಾಯಿತು. 1944 ರಲ್ಲಿ ಬನಾರಸ ಹಿಂದೂ ವಿಶ್ವ ವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಕೋಲಂಬಿಯಾ ಯುನಿವರ್ಸಿಟಿಯಿಂದ ಮಾಸ್ ಕಮ್ಯುನಿಕೇಶನ್ ನಲ್ಲಿ ಪಿಹೆಷ್ ಡಿ ಪಡೆದರು. ಅಮೆರಿಕಾದ ಶಿಕ್ಯಾಗೊ ಯುನಿವರ್ಸಿಟಿಯಿಂದ ಲೆಸ್ಲೆ ಫೆಲೋಶಿಪ್ ಪಡೆದಿದ್ದರು.
ಇವರ ಸಂಗೀತದ ಆಸಕ್ತಿಗೆ ಪ್ರೇರಣೆ ಆಸ್ಸಾಮಿನ ದಟ್ಟ ಹರಿದ್ವರ್ಣ ವನಸಿರಿ ಅಷ್ಟೆ ದಟ್ಟ ಅನುಭವದ ಜಾನಪದ ಸಂಗೀತ. ಅವರ ಸಂಗೀತ ಸಂಯೋಜನೆಗಳನ್ನು ಕೇಳಿದರ ಅದರಲ್ಲಿ ಮನಮುಟ್ಟುವ ಆರ್ದವಾದ ವಿಶಿಷ್ಟ ಜಾನಪದದ ಸೊಗಡು ಮತ್ತು ಬನಿಗಳು ಕೇಳೂಗನನ್ನು ಸಮ್ಮೋಹನ ಗೊಳಿಸುತ್ತವೆ. ನಂತರ ಇವರು ಮುಂಬೈಗೆ ಪಯಣ ಬೆಳೆಸುತ್ತಾರೆ. ಅಲ್ಲಿ ಇಂಡಿಯನ್ ಪೀಪಲ್ಸ್ ಥಿಯೆಟರ್ ಮೂವಮೆಂಟ್ ಜೊತೆ ತಮ್ಮನ್ನು ಗುರುತಿಸಿ ಕೊಳ್ಳುತ್ತಾರೆ. ಮಂದೆ ಅದನ್ನೆ ತಮ್ಮ ಕರ್ಮಭೂಮಿಯನ್ನಗಿಸಿ ಕೊಳ್ಳುತ್ತಾರೆ. ಅಲ್ಲಿ ಅವರು ಕಲಾ ಲೋಕದ ದಿಗ್ಗಜರಾದ ನಟ ಬಲರಾಜ ಸಹಾನಿ ಮತ್ತು ಸಂಗೀತ ನಿರ್ದೇಶಕ ಸಲೀಲ ಚೌಧುರಿ ಮುಂತಾದ ಗಣ್ಯರ ಗೆಳೆತನ ಸಂಪಾದಿಸುತ್ತಾರೆ. ಹೀಗೆ ಅವರ ಕಲಾ ಪಯಣ ಮುಂದುವರಿಯುತ್ತದೆ. ಹಜಾರಿಕಾ ತಮ್ಮ ಮಾತೃಭಾಷೆ ಆಸಾಮಿಯಲ್ಲಿ ಶಕುಂತಲಾ ಪ್ರತಿಧ್ವನಿ ಇಲಾ ಬಾತುರ ಸುರ ಮುಂತಾದ ಚಲನಚಿತ್ರಗಳನ್ನು ನಿರ್ಮಿಸಿ ಸಂಗೀತ ಸಂಯೋಜನೆ ಮಾಡಿ ನಿರ್ದೇಶಿಸುತ್ತಾರೆ ಕೂಡ. ಅವರು ಹಿಂದಿ ನಾಟಕ ರಂಗದಲ್ಲಿ ಪ್ರಸಿದ್ಧಿಪಡೆದ ಕಲ್ಪನಾಲಾಜ್ಮಿ ಯವರನ್ನು ತಮ್ಮ ಬಾಳ ಸಂಗಾತಿಯಾಗಿ ಪಡೆಯುತ್ತಾರೆ, ಸುಮಾರು ಮೂರು ದಶಕಗಳ ಕಾಲದ ಸಹಜೀವನ ಅವರದು. ನಂತರದಲ್ಲಿ ಲಾಜ್ಮಿಯವರ ಏಕ್ ಪಲ್, ದರ್ಮಿಯಾನ್, ರುಡಾಲಿ, ದಮನ್ ಹಾಗೂ ಸಾಯಿ ಪರಾಂಜಪೆಯವರ ಸಾಜ್, ಮಿಲ್ ಗಯೆ ಮಂಝಿಲ್ ಮುಝೆ, ಪಪಿಯಾ ಹಾಗೂ ವಿವಾದಾತ್ಮಕ ಚಿತ್ರಕಾರ ಎಂ.ಎಫ್.ಹುಸೇನರ ಗಜಗಾಮಿನಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುತ್ತಾರೆ ಅಲ್ಲದೆ ಕೆಲವು ಹಾಡುಗಳನ್ನು ಹಾಡಿದ್ದಾರೆ ಕೂಡ. ಇವರಿಗೆ 1975 ರಲ್ಲಿ ಉತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ತ್ರೀಯ ಪ್ರಶಸ್ತಿ, 1992 ರಲ್ಲಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ, 2001 ರಲ್ಲಿ ಪದ್ಮಭೂಷಣ ಮತ್ತು 2009 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1039 ರಲ್ಲಿ ಆಸಾಮಿ ಚಲನಚಿತ್ರ ಇಂದ್ರ ಮಾಲತಿಗೆ ಸಂಗೀತ ಸಂಯೋಜಿಸುವ ಮೂಲಕ ಪ್ರಾರಂಭವಾದ ಇವರ ಸಂಗೀತ ಪಯಣ ಇತ್ತೀಚೆಗಿನ ಗಾಂಧಿ ಟು ಹಿಟ್ಲರ್ ಚಿತ್ರಕ್ಕೆ ಸಂಗೀತ ನೀಡುವವರೆಗೂ ಅವರ ಸಂಗೀತ ಪಯಣ ನಿರಂತರವಾಗಿ ಸಾಗಿತ್ತು. ಇದು ಅವರ ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ. ಅಸಾಮಿನ ಬುಡಕಟ್ಟು ಜನಾಂಗದ ಜನಪದ ಹಾಡುಗಳ ಧಾಟಿಯನ್ನು ಜಗತ್ತಿಗೆ ಪರಿಚಹಯಿಸಿದ ಸಂವೇದನಾಶೀಲ ವ್ಯಕ್ತಿತ್ವ ಅವರದು. ಇತ್ತೀಚೆಗೆ ಅವರು ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದರು. ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ಐದು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೂತ್ರಪಿಂಡದ ಕಾಯಿಲೆ ಅವರನ್ನು ಹಣ್ಣು ಮಾಡಿತ್ತು. ಕೊನೆಗೆ ನವಂಬರ್ 5 ರಂದು ಸಂಜೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು. ಅವರ ಅಂತ್ಯ ಸಂಸ್ಕಾರ ಗೌಹಾಟಿಯ ರುದ್ರಭೂಮಿಯಲ್ಲಿ ಜರುಗಿತು. ಅದ್ಭುತ ಸಂಗೀತದ ಮೋಡಿಗಾರ ಭೂಪೆನ್ ಗೆ ಎಲ್ಲ ಸಂಗೀತ ಪ್ರೇಮಿಗಳ ಅಶ್ರುತರ್ಪಣ.
ಚಿತ್ರ ಕೃಪೆಃ ಜರ್ಮನ್ ಆರ್ಕೈವ್
Comments
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by kavinagaraj
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by ksraghavendranavada

In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by venkatb83

In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by venkatesh

In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by makara

In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by H A Patil

In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by manju787
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by karthi
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by swara kamath
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by H A Patil
ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
In reply to ಉ: ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ' by rohit kamath