.........................ಗಳು
ಕವನ
ರಕ್ಷಿಸುವವರೆಂದು ರಾಕ್ಷಸರಾಗಿ ಕಾಡುವ ಕೇಡಿಗಳು
ರಕ್ಷಣೆಯ ನೆಪದಿ ದಾರಿಗಡ್ಡಬರುವ ಬೀಡಾಡಿಗಳು
ನಿಜವೆ ಹಾಗೆಂದರೇನೆಂದುಕೇಳುವ ಸೋಗಲಾಡಿಗಳು
ಮಜವೆ ನಿತ್ಯಜೀವನ ಧರ್ಮವೆಂದೆನುವ ಕಿಡಿಗೇಡಿಗಳು
ಕಂಡಕಂಡವರನ್ನೆಲ್ಲ ಬಿಡದೆ ಬೇಡುವ ಎಡಬಿಡಂಗಿಗಳು
ಪುಂಡಪೋಕರಿಗಳ ಜತನದಿ ಪೊರೆಯುವ ಬಿಕನಾಸಿಗಳು
ಉಂಡಮನೆಯ ಋಣವೆನ್ನದೆ ಕನ್ನಕೊರೆಯುವ ಕಪಟಿಗಳು
ಕಿಲುಬುಕಾಸಿಗುಕೀಳುತನದಿಬಾಯ್ಕಿಸಿಯುವಕುಲಗೇಡಿಗಳು
ಅರ್ಧರಾತ್ರಿಯಲಿ ಕೂಡ ಕೊಡೆ ಹಿಡಿಯುವ ಕೋಡಂಗಿಗಳು
ಹೊಣೆಗೇಡಿ ಭಟ್ಟಂಗಿ ಢಂಬಾಚಾರದ ಅಬ್ಬೆಪಾರಿಗಳು
ಸಭ್ಯ ಸಮಾಜಕಂಟಿಕೊಂಡ ಕಳಂಕಿತ ಕೆಟ್ಟಕೀಟಗಳು
Comments
ಉ: .........................ಗಳು
In reply to ಉ: .........................ಗಳು by neela devi kn
ಉ: .........................ಗಳು
ಉ: .........................ಗಳು
In reply to ಉ: .........................ಗಳು by sathishnasa
ಉ: .........................ಗಳು
ಉ: .........................ಗಳು