ಮಳೆಗಾಲದ ಒಂದು ದಿನ ಕೇಕ್ ಮತ್ತು ಕಾಫಿಗಾಗಿ

ಮಳೆಗಾಲದ ಒಂದು ದಿನ ಕೇಕ್ ಮತ್ತು ಕಾಫಿಗಾಗಿ

ಭಾನುವಾರ ಸಂಜೆ ಇಡೀ ದಿನದ ಮಳೆ ಸ್ವಲ್ಪ ಬಿಡುವುಕೊಟ್ಟಾಗ ಮಕ್ಕಳು MG ರಸ್ತೆಯಲ್ಲಿರುವ ಕೇಕ್ ಶಾಪಿಗೆ ಹೊಗೋಣ ಎಂದರು, ನಾವೆಲ್ಲ ಕಾರಿನಲ್ಲಿ ಹೊರೆಟೆವು. .  ಇನ್ನೇನು ಅಂಗಡಿಗೆ ಸ್ವಲ್ಪವೇ ದೂರವಿರುವಾಗ ನಾವು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಅರಿವು ಆಯಿತು. ಮುಂದೆ ಹೋಗಕ್ಕೆ ಜಾಗ ಇಲ್ಲ ಹಿನ್ನಡೆಯಲು ಸಾದ್ಯ ಇಲ್ಲ.  ಮುವತ್ತು ನಿಮಿಷಗಳ ನಂತರ ಪೋಲೀಸರು   ಟ್ರಾಫಿಕ್  ಡೈವೆರ್ಶ್ ನ್ ಮಾಡಿದರು ಮತ್ತು ನಮ್ಮ ಗಾಡಿ ಮುಂದುವರಿಯಿತು. ನಾನು ಸುಮ್ಮನೆ ಮನೆಗೆ ಹೋಗಿ ನಿಮ್ಮಮ್ಮ ಮಾಡುವ ಕಾಫಿಯನ್ನೇ ಕುಡಿಯೋಣ ಎಂದೆ. ಮಿಕ್ಕವರೆಲ್ಲ ಬೇಡ ಸ್ವಲ್ಪ ದೂರ ಹೋಗಿ ಬಲಕ್ಕೆ ತಿರುಗಿದರೆ ಅಲ್ಲೊಂದು ಕೇಕ್ ಶಾಪ್ ಇದೆ, ಅಲ್ಲಿ ಚಾಕಲೇಟ್ ಕೇಕ್ ತೆಗುದುಕೊಂಡು ಹೋಗೋಣ ಎಂದರು. ಸರಿ ನಾನು ಕಾರ್ ಅತ್ತ ತಿರುಗಿಸಿದೆ. ಈಗ ನಾವು ಮತ್ತೋಂದು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡೆವು. ಮತ್ತೆ  ಪೋಲೀಸರು ಟ್ರಾಫಿಕ್ ಡೈವೆರ್ಶ್ ನ್ ಮಾಡಿದ್ದರು.  ನಾವು ಒಂದು ಗಂಟೆ ಅಲ್ಲೆ ಸಿಕ್ಕಿಹಾಕಿಕೊಂಡಿದ್ದೆವು. ಪೋಲಿಸರು ಕಳಿಸಿದ ದಾರಿಯಲ್ಲಿ ಹೋಗಿ ಜಾಮಿಂದ  ಹೊರಬಂದಾಗ ಎಲ್ಲರಿಗೂ ಮನೆ ಸೇರಿದರೆ ಸಾಕಪ್ಪ ಎನಿಸಿತ್ತು. ಸರಿಯೆಂದು ನಾನು ಮನೆಕಡೆ ಕಾರ್ ತಿರುಗಿಸೆದೆ.  ಸ್ವಲ್ಪ ದೂರ ಹೋದ ಮೇಲೆ ಯಾವಗಲೂ ಹೋಗುವ ಶಾರ್ಟ್ ಕಟ್ ಬಿಟ್ಟು ಮೈನ್ ರೋಡಿನಲ್ಲೇ ಹೋಗೋಣ ಎಂದು ಮೈನ್ ರೋಡಿನ ಕಡೆ ಕಾರ್ ತಿರುಗಿಸಿದೆ. ಒಂದು ಕಿಲೋ ಮೀಟರ್ ಸಹ ಹೊಗಿರಲಿಲ್ಲ ಈಗ ಇನ್ನೊಂದು ಟ್ರಾಫಿಕ್   ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡೆವು ಮತ್ತೆ   ಡೈವೆರ್ಶ್ ನ್ ತೆಗೆದುಕೊಂಡು ನಾವು ಯಾವಾಗಲೂ ಓಡಾಡುವ ರೋಡಿನಲ್ಲೆ ಮನೆಕಡೆ ಹೋರಟೆವು.  ಮನೆ ತಲುಪಿದಾಗ ರಾತ್ರಿ ಹತ್ತಾಗಿತ್ತು.  ಫ್ರಿಡ್ಜಲ್ಲಿ ಹುಡುಕಾಡಿ ಇರುವುದನ್ನೇ ತಿಂದು ಕಾಫೀನೂ ಬೇಡ  ಗೀಫೀನೂ ಬೇಡ ಎಂದು ಬಾಳೆಹಣ್ಣು ತಿಂದು ಮಲಗಿಕೊಂಡೆವು. ಬೆಳೆಗ್ಗೆ ಪೇಪರ್ ನೋಡಿದಾಗ "ನಗರದಲ್ಲಿ ಮೂರುಕಡೆ ಮಳೆ ಕಾರಣದಿಂದ ಟ್ರಾಫಿಕ್ ಅಸ್ತವ್ಯಸ್ತ" .  ಬಹುಶಃ ಎಲ್ಲಾ ಟ್ರಾಫಿಕ್ ಜಾಮ್ ಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ನನ್ನೊಬ್ಬನದೆ.

 

Rating
No votes yet

Comments