ಬೆಳಗಲಿ ದೀಪಾವಳಿ

ಬೆಳಗಲಿ ದೀಪಾವಳಿ

ಕವನ

ಬೆಳಲಿ ದೀಪಾವಳಿ



ಬೆಳಗಿದೆ ದೀಪವು ಹೃದಯಂಗಳದಿ 

ಹೊಳೆದಿದೆ ಒಳಗಿನ ದಿಟರಂಗದಲಿ

ನಲಿದಾಡಿದೆ ಮನ ಇದು ದೀಪಾವಳಿ

ಒಳಹೊರದಲಿ ಬೆಳಲಿ ದೀಪಾವಳಿ ||



ಮನೆ ಮನ
ಮೂಲೆಯಲೆಲ್ಲಾ  ದೀಪದ

ಬೆಳಕಾಡಲಿ ಪರಿ ಕಾಣಲಿ

ಇರುವಿಕೆಯರಿತು ಒಪ್ಪಿದ ನಡತೆಯ

ಅರಿವಾಗಲಿ ಸರಿ ಮೂಡಲಿ ||



ಕತ್ತಲು ಕಳೆದಿರುಳಲಿ ಸಂಭ್ರಮಿಸಲು

ಊರಕೇರಿಗಳು ಹಣತೆಯಲಿ

ಸುತ್ತಲ ಮುತ್ತಲ ಆಗಸ ಬುಟ್ಟಿಯು

ತಾರೆಗಳನು ಸೋಲಿಸುತಿರಲಿ ||



ಸಿಹಿಸಿಹಿ ಹೋಳಿಗೆ ಸವಿ ರುಚಿಯಡುಗೆ

ಮೆಲ್ಲಲಿ ನಗುತಲಿ ಮನೆಯೊಳಗೆ

ಮಹಿಯಲಿ ಏಳಿಗೆ ಮೂಡಿಸಲೊಟ್ಟಿಗೆ 

ಎಲ್ಲರ ಸ್ನೇಹದ ಬಲದೊಳಗೆ  ||

                                                



                                                          - ಸದಾನಂದ  


Comments