ಕವನ
ಜಗವನು ನಲಿಸಿ, ಕುಣಿಕುಣಿದಾಡಿಸಿ
ಆನಂದದಿ ಮೆರೆಯುವ ಶಕ್ತಿಯೇ!
ಕಷ್ಟವ ಸುರಿಸಿ, ಜೀವನ ನಲುಗಿಸಿ,
ಕರುಣವ ಮರೆಯುವ ಯುಕ್ತಿಯೇ!
ನಿನ್ನ ಕಣ್ಣ ಆಟದ ಬೊಂಬೆಗಳು
ಆಡುವ ಓಡುವ ಜೀವಿಗಳು!
ಕೊನೆ ಮೊದಲಿಲ್ಲದ ಈ ಆಟದಲಿ
ಪಡೆವರು ಎಷ್ಟೋ ಅಂಕಗಳು!
ಜೀವನ ನಾಟಕವಾಡಿಸುತ
ಸೂತ್ರವ ಹಿಡಿಯುವೆ ಕೈಯ್ಯಲ್ಲಿ!
ನೀನಾಡಿಸುವ ವಿಚಿತ್ರ ನಾಟಕದೆ
ಬರೀ ಪಾತ್ರಗಳೆ ನಾವಿಲ್ಲಿ!
ನಿನ್ನ ಸಾಮ್ರಾಜ್ಯದೆ ಪ್ರಜೆಗಳು ನಾವು
ನಮ್ಮೆಲ್ಲರನಾಳುವ ಪ್ರಭುಗಳು ನೀವು।
ನಿನ್ನ ಆಜ್ಞೆಗೆ ತಲೆಬಾಗುವೆವು।
ನಿನ್ನ ಸೃಷ್ಟಿಗೆ ತಲೆದೂಗುವೆವು।
ಆದಿಯು ನೀನೆ, ಅಂತ್ಯನೂ ನೀನೆ,
ಅನಾದಿಯೂ ನೀನೆ, ಅಮರನೂ ನೀನೆ,
ಆನಂದಿಯೂ ನೀನೆ, ಅವಿನಾಶಿಯೂ ನೀನೆ,
ಪ್ರತಿ ಜೀವಿಯ ಬಾಳಿನ ಜ್ಯೋತಿಯೂ ನೀನೆ,
ಎಲ್ಲರ ಕಾಯುವ ಪ್ರೀತಿಯೂ ನೀನೆ!
Comments
ಉ: ವಿಶ್ವಶಕ್ತಿ
ಉ: ವಿಶ್ವಶಕ್ತಿ