ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!

ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!

ನ್ನ ಸ್ನೇಹಿತ ಅನಿಲ್ ಮನೆಯಲ್ಲಿ ಹರಟುತ್ತಾ ಕುಳಿತ್ತಿದ್ದೆ   ಹಾಗೆ ನನ್ನ ಕಣ್ಣಿಗೆ ಒಂದು  ಹೊಸ ವರುಷಕ್ಕೆ ನೀಡಿದ ಶುಭಾಷಯ ಪತ್ರ ಸಿಕ್ಕಿತು ,ಪತ್ರದಲ್ಲಿನ ಮಾಹಿತಿ ನನ್ನ ಮನ ಕಲಕಿ  ವಿಷಯದ ಬೆನ್ನತ್ತಿದಾಗ ತೆರೆದುಕೊಂಡಿದ್ದು ಈ ಮನಕರಗುವ  ಸಂಗತಿ ನಿಮ್ಮೊಡನೆ ಹಂಚಿ ಕೊಳ್ಳಲು ಇಲ್ಲಿ ದಾಖಲಿಸಿದ್ದೇನೆ.1994  ರ ಲ್ಲಿ ಸುಡಾನ್ ನ ಬರಗಾಲದ ಭೀಕರತೆ  ವಿಶ್ವಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ  ಇದರ ಚಿತ್ರಣ ನೀಡಲು  ವಿಶ್ವಾದ್ಯಂತ ಹಲವು ಫೋಟೋ ಜರ್ನಲಿಸ್ಟ್ ಗಳು  ಸುಡಾನ್ ಗೆ ತೆರಳಿದ್ದರು.ಅವರಲ್ಲಿ ಪ್ರಮುಖ ನಾದವ  ಈ ಕೆವಿನ್ ಕಾರ್ಟರ್. ಕೆವಿನ್  ಕಾರ್ಟರ್ ದಕ್ಷಿಣ ಆಫ್ರಿಕಾ ದ ಜೋಹಾನ್ಸ್ಬರ್ಗ್  ನವನು 

ವಿಶ್ವ ವಿಖ್ಯಾತ ಘಟನೆಗಳ ಫೋಟೋಗಳು ಇವನ ಕ್ಯಾಮರದಲ್ಲಿ ಸೆರೆಯಾಗಿದ್ದವು  ಬರದ ದೇಶದಲ್ಲಿ ತೆಗೆದ ಈ ಕೆಳಗಿನ  ಒಂದು

ಫೋಟೋ ಜಗತ್ತಿಗೆ ಸುಡಾನ್ ದೇಶದ ಬರದ ಭೀಕರತೆ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿ ತಲ್ಲಣ ಗೊಳಿಸಿತು.ಈ ಚಿತ್ರಕ್ಕಾಗಿ  ಕೆವಿನ್ ಕಾರ್ಟರ್ ಗೆ ಪುಲಿಟ್ಜರ್ 1994 ರ ಪ್ರಶಸ್ತಿ ಗಿಟ್ಟಿಸಿದ !!!ಈ  ಚಿತ್ರ  ಸುಡಾನ್ ದೇಶದ ಬರಗಾಲದ ಒಂದು ದಿನ  ಹಸಿವಿನಿಂದ ನರಳುತ್ತಾ  ಹತ್ತಿರ ವಿಶ್ವ ಸಂಸ್ತೆ ತೆರೆದಿದ್ದ  ಆಹಾರ ಕೇಂದ್ರಕ್ಕೆ ತೆವಳಿಕೊಂಡು ತೆರಳುತ್ತಿರುವ  ಆನಾಥ ಮಗು ,......... ಪಕ್ಕದಲ್ಲೇ ತನ್ನ ಆಹಾರ ಕ್ಕಾಗಿ  ಈ ಮಗು ಸಾಯುವುದನ್ನು ಕಾದು ಕೂತ  ರಣಹದ್ದು !!!! ಬದುಕು ಸಾವಿನ ಮಧ್ಯೆ ತೂಗುಯ್ಯಾಲೆಯಲ್ಲಿರುವ  ಒಂದು ಜೀವದ ಚಿತ್ರಣ !!!ಈ ಚಿತ್ರವನ್ನು ಸೆರೆ ಹಿಡಿಯಲು ಕೆವಿನ್ ಪಟ್ಟ ಸಾಹಸ ಬಹಳಷ್ಟು. ಹದ್ದು ಹಾಗು ಮಗುವಿನಿಂದ  ಅತ್ಯಂತ ಸನಿಹದಿಂದ ಹತ್ತು ಮೀಟರ್  ದೂರದಲ್ಲಿ  ತನ್ನ ಚಾಣಾಕ್ಷತನದಿಂದ  ಈ ಘಟನೆ ಸೆರೆ ಹಿಡಿದು  ಎಲ್ಲರ ಮನ ಕಲಕಿ ಬಿಟ್ಟ !!! ಸುಡಾನ್ ದೇಶದ ಬರದ ಚಿತ್ರಣವನ್ನು ಜಗತ್ತು  ಅರ್ಥೈಸಿಕೊಂಡಿದ್ದು  ಇದೆ ಚಿತ್ರದಿಂದ .ದುರಂತವೆಂದರೆ ಈ ಘಟನೆ ಇಂದ ಹೊರ ಬರಲಾರದ ಕೆವಿನ್ ಕಾರ್ಟರ್ ಜೀವನದಲ್ಲಿ ನಿರಾಶೆಗೊಂಡು ಆತ್ಮ ಹತ್ಯೆಗೆ  ಶರಣಾದ. ಜಗತ್ತಿಗೆ  ಅದ್ಭುತ ಚಿತ್ರಗಳ ಮೂಲಕ ವಿಚಾರ ಮುಟ್ಟಿಸುತ್ತಿದ್ದ ಒಬ್ಬ ಅದ್ಭುತ ಫೋಟೋ ಗ್ರಾಫಾರ್  ಜಗತ್ತಿನಿಂದ ಮರೆಯಾದ.  ನಮ್ಮ ದೇಶದಲ್ಲಿ ಆನ್ನ, ನೀರಿಗೆ ಬರವಿಲ್ಲ  ಪ್ರತಿಷ್ಠೆಗೆ  ಮದುವೆ ಮನೆಗಳಲ್ಲಿ, ಹಲವಾರು ಸಂದರ್ಭಗಳಲ್ಲಿ  ನಾವು ಚೆಲ್ಲುವ ಆಹಾರದ ಬಗ್ಗೆ ಯೋಚಿಸಿದರೆ  ನಮಗೆ .............ನಾಚಿಕೆ ಆಗುವುದಿಲ್ಲವೇ????ಇನ್ನಾದರೂ  ಆನ್ನ ತಿನ್ನುವ ಮೊದಲು  ಈ ಚಿತ್ರ ನೋಡಿ  ಆಹಾರ ,ನೀರು  ಪೋಲಾಗದಂತೆ ಎಚ್ಚರ ವಹಿಸಲು  ಇಂದೇ ತೀರ್ಮಾನಿಸೋಣ .  ಈ ಮೂಲಕ ಕೆವಿನ್ ಕಾರ್ಟರ್ ಗೆ  ನಮನ ಸಲ್ಲಿಸೋಣ

Comments