ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೨

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೨

 ಬೆಳಗಿನ ಚುಮು-ಚುಮ ಮೈ ಕೊರೆವ ಚಳಿಯಲ್ಲಿ ದೇಹವನ್ನ ಆದಸ್ಟು ಗಟ್ಟಿಯಾಗಿ ಹಿಡಿತದಲ್ಲಿಟ್ಟುಕೊಂಡು  ಮೈ ಒಳಗೆ ಚಳಿ ಪ್ರವೇಶಿಸದಂತೆ ತಡೆದರೂ , ಆದ ಹೇಗೋ ಚಳಿ ಬಡ ಬೋರನ ಮೈ ಹೊಕ್ಕು  ಅವನು ಒಮ್ಮೆ  ಹಯ್ಯ್! ತತ್ಹ್ಹೆರಿಕೆ   'ದರಿದ್ರ  ಚಳಿ ' ಏನಪ್ಪಾ ಮಾಡೋದು? ಅಂತ ಮನಸಲ್ಲೇ ಅಂದ್ಕಳ್ತಾ  ಒಮ್ಮೆ ಮೈ ಕೊಡವಿದ ನೋಡಿ, ದೊಡ್ಡ ಪ್ಲಾಸ್ಟಿಕ್ಕಿನ  ಡಬ್ಬ  ಕೈ ಜಾರಿ ನೆಲಕ್ಕೆ ಬಿದ್ದು  ಡಬ್ಬದಲ್ಲಿದ್ದ  ನೀರೆಲ್ಲ  ಭೂಮಿ ಒಡಲು ಸೇರಿತು!!

 

ಬಡ ಬೋರಂಗೆ  ಮೈ ಎಲ್ಲ ಉರಿದು ಹೋಯ್ತು, ಆದರೇನು ಮಾಡೋದು? ಮಾಡಿದ್ದುಣ್ಣೋ ಮಾರಾಯ!!  ಹೋಗ್ಲಿ ಮನೆಗೋಗಿ ನೀರ್ ತುಮ್ಬಿಸಿಕೊಂಡ್ ಬರೋಣ ಅಂದ್ರೆ ಮನೆ ದೂರ, ಅವ್ನ ಅಧ್ರು ಸ್ಟಕ್ಕೆ  ಅಲ್ಲೇ ಪಕ್ಕದಲ್ಲಿ ಸರಕಾರದವರು  ಅದ್ಯಾವಗಲೋ 'ಜಮಾನದಲ್ಲಿ' ಕೊರೆದ ಕೊಳವೆ ಬಾವಿ ಒಂದಿತ್ತು, ಅಲ್ಲೋಗಿ ಅಲ್ಲಿ  ಲೋಟ ಇಟ್ಟು  ಬೋರ್ವೆಲ್  ಹೊಡೆಯಲು ಶುರು ಮಾಡಿದ. ----...೧೦  ನಿಮಿಷ ಹೊಡೆದರೂ 'ಒಂದು ಹನಿಯೂ' ಬೋರ್ವೆಲ್  ಒಳಗಿಂದ  ಬರದೆ  ಬರೀ 'ಉಸ್ಸ್-ಸಸ್ಸ್ - ಬಸ್ಸ-ಸ್ಸಸ್ ' ಎಂಬ ಶಬ್ದ  ಬಂದಾಗ 'ಬಡ ಬೋರನಿಗೆ' ದಿಗಿಲಾಯ್ತು, ಇಲ್ಲಿ ಎಲ್ಲರ ಪಕ್ಕದಲ್ಲಿ 'ನಾಗರಾಜನೆನ್ನಾರಬಂದ್ನ ಅಂತ? ಆದರೆ ಅದು ಬೋರ್ವೆಲ್ ಒಳಗಿಂದಲೇ ಶಬ್ದ ಅಂತ ಗೊತ್ತಾಗಿ ಮನ ನಿರಾಳವಾಯ್ತು.

ಆಗೊಮ್ಮೆ ನೆಂಟರ ಮನೆಗೆ ಬೆಂಗಳೂರಿಗೆ ಹೋದಾಗ ಅಲ್ಲಿ ಕಾರ್ಪೋರೆಸನ್  ನವರು ಬಿಡುವ ನೀರಿನ ನಲ್ಲಿಯಲ್ಲೂ ನೀರು ಬರುವ ಮುಂಚೆ  ಈ ತರಹದ 'ಹವಾ' ಬರುತ್ತೆ ಅನ್ನೋದು ಅವಂಗೆ ಹೊಳಿತು..ಆ ಬೋರ್ವೆಲ್ಲಿಗೂ   ಅದ್ನ ಸರಿ ಮಾಡದ ಎಲ್ಲರಿಗೂ ಹಿಡಿ ಶಾಪ ಹಾಕ್ತ   ಇನ್ನೊಂದು ಹತ್ತು ನಿಮಿಷ  'ಅದ್ಯಾರ್ದೋ ಮೇಲೆ ' ಸೇಡು ಇರವಂತೆ ಹೊಡೆದ ಮೇಲೆ  'ಭಗೀರಥನ  ತಪಸ್ಸಿಗೆ ಮೆಚ್ಚಿ ಗಂಗೆ ಭೂಮಿಗೆ' ಬಂದಂತೆ  ಆ ಬೋರ್ವೆಲ್ ಇವನ ಇಚ್ಚ ಶಕ್ತಿಗೆ  ಮೆಚ್ಚಿ   ಬಂದು  ಬಡ ಬೋರನ ಲೋಟಕ್ಕೆ ಬಿದ್ದು ಲೋಟ ತುಂಬಿತು  'ಉಸ್ಸಪ್ಪ'' ಅಂತ ಆ ಲೋಟವನ್ನ ಎತ್ಕೊಂಡು ಕಣ್ಣೆವೆ ದೂರದಲ್ಲಿರೋ 'ಆ ಬಯಲು ಜಾಗಕ್ಕೆ' ಹೊರಟ..

 

ಹೆಸರಿಗಸ್ಟೇ ಅದು 'ಬಯಲು'ಹೊಲ' ಆದರೆ  ಅಲ್ಲಲ್ಲಿ  ಸಣ್ಣ -ಪುಟ್ಟ ಗಿಡ ಗಂಟಿ ಬೆಳೆದು   'ಬೇರೇವ್ರ ಕಣ್ಣಿಗೆ ಮರೆಯಾಗಿ ಹಾಯಾಗಿ ಜಗವನ್ನ ಮರೆತು   'ಕಕ್ಕಸು' ಕುಳಿತುಕೊಳ್ಳುವ  ವ್ಯವಸ್ಥೆ ಅಲ್ಲಿತ್ತು :)

ಬಯಲು ಪ್ರದೇಶಕ್ಕೆ 'ಬಲಗಾಲಿಟ್ಟು ಎಂಟ್ರಿಕೊಟ್ಟ 'ಬಡ ಬೋರಕಣ್ಣಿಗೆ  ಕಾಣೋ ದೂರಕ್ಕೆ ನೋಡಿದ ಎಲ್ಲೂ ಯಾರೊಬ್ಬರ ದರ್ಶನವಾಗಲಿಲ್ಲ, 'ಅಹ ನಂದೇ  ಸುದೈವ!! ಯಾರು ಇಲ್ಲ  ಇಲ್ಲೇ ಎಲ್ಲರ ಆರಾಮಾಗಿ 'ಕುಳಿತು' ಹೋದ್ರಾಯ್ತು  ...

'ಬಡ ಬೋರ' ಬೀಡಿ ಒಂದನ್ನ ಅವರಪ್ಪನ ಜೇಬಿಂದ  ಎತ್ಕೊಂಡ್ ಬಂದಿದ್ನ, ಅದ್ನ  ಬಾಯಿಗಿಟ್ಟು ಕಡ್ಡಿ ಪೊಟ್ಟಣದಿಂದ ಕಡ್ಡಿಯೊಂದನ್ನ ತೆಗೆದ. 'ಸರ್ರ್-ಪರರ್'    ಅಲ್ಲ ಕಡ್ಡಿನೆ ಇನ್ನು ಗೀರಿಲ್ಲ ಇದೇನು ಶಬ್ದ? ಸುತ್ತ-ಮುತ್ತಲೇಲ್ಲಾರ ಹಾವೋ-ಹಲ್ಲಿಯೋ-ತೊಂಡಿಕ್ಯಾತಇಲ್ಲ ಹಂದಿಯೋ ಮೈ ಮೇಲೇರಿ ಬಂದ್ರೆ? 'ತತ್ಥೆರಿಕೆ' ಇವಕ್ಕಿಸ್ಟು 'ಸ್ವಲ್ಪ' ನಿಶ್ಚಿಂತೆಯಿಂದ  'ಅದ್ನ' ಮಾಡೋಕು ಬಿಡಲ್ವಲ್ಲ್ಲ 

 

ಕೊನೆಗ್ ಅದು ಹೆಗ್ಗ್ಗಣ ಮತ್ತು ಅದ್ನ ಅಟ್ಟಿಸಿಕೊಂಡು ಬಂದ  ಊರ ನಾಯಿ ಅಂತ ಗೊತ್ತಾಗಿ ಮನ ಹಿಗ್ಗಾಯ್ತು!!  ಬೀಡಿನ  ಮತ್ತ್ತೆ ಬಾಯಿಗಿಟ್ಟು  ಕಡ್ಡಿ ಗೀರಿ ಒಂದು ದೀರ್ಘ ಹೊಗೆ  ಎಳಕೊಂಡ ನೋಡಿ ಒತ್ತರ್ಸಿಕೊಂಡು ಬಂತು ಕೆಮ್ಮು 'ಕ್ವಯ್ಯ ಕ್ವಯ್ಯ'   ಹಾಗೆ ನವರಂದ್ರಗಳಿಂದ ನೀರೂ :) ತತ್!! ಬೀಡೀನ ಬಿಸಾಕಿ

'ಅದ್ನ' ಮುಗಿಸಿ 'ಒಂಥರಾ ಸಮಾಧಾನದಿಂದಎದ್ದು  ಪ್ರದೇಶದಿಂದ ಹೊರಬಂದು ಅಲ್ಲೇ ದಾರಿಯಲ್ಲಿದ್ದ 'ಬೇವಿನ ಮರದಿಂದ' ಬೇವಿನ ಚಿಕ್ಕೊಮ್ಬೇಯೊಂದನ್ನು  ಮುರಿದು ಅದ್ನ ಹಲ್ಲಲ್ಲಿ ಕಚ್ಚುತ್ತ  -ಹಲ್ಲುಜ್ಜುತ್ತ   ಮುನ್ನಡೆದ..

 

ಸ್ವಲ್ಪ ದೂರ ಬಂದಿದ್ದನಸ್ಟೇ ದೂರದಲ್ಲಿ ದಾರಿ ಪಕ್ಕ 'ಅದೇನೋ' ವಸ್ತು ಅಸ್ಪುಸ್ಟವಾಗ ಕಾಣಿಸ್ತು. ಕಣ್ಣನ್ನ  ಅದೆಸ್ಟು ಹಿಗ್ಗಿಸಿ-ಕುಗ್ಗಿಸಿ  ನೋಡಿದರೂ 'ಅದೇನು' ಅಂತ ಗೊತ್ತಾಗ್ಲಿಲ್ಲ, ಪೂರ್ತ ಹತ್ತಿರ ಹೋದಾಗಲೇ ಗೊತ್ತಾಯ್ತು  'ಅದೊಂದು' ಯಾರೋ  ಹೇಳಿಯೇ ತಮಗೆನ್ದೆ   ಮಾಡಿಸಿದ ಹಾಗಿದ್ದ  'ಕುರ್ಚಿ'... ಅದು ಅಲ್ಲಿ ಬಿದ್ದಿರುವ ರೀತಿ ನೋಡಿದರೆ 'ಅದ್ನ' ಯಾರೋ  ಎತ್ತಿ ಎಸೆದು ಹೋದಂತಿತ್ತು...ಸುತ್ತ-ಮುತ್ತ ನೋಡಿದ  ಊಹೂ೦ ಯಾರೊಬ್ಬರೂ ಇಲ್ಲ, ಯಾರದಿರಬಹುದು ಇದು? ನೋಡೋಕೆ ಎಷ್ಟು ಚೆನ್ನಾಗಿದೆ ಅಂಥಾದ್ರಲ್ಲಿ  'ಇದ್ನ' ಇಲ್ಲಿ ಬಿಸಾಡಿದ್ದು ಯಾರು? ಯಾಕೆಒಂದೈದು ನಿಮಿಷ ಕಾಡು ನೋಡಿದರಾಯ್ತು, ಯಾರು ಬರದಿದ್ದರೆ 'ಇದ್ನ' ಎತ್ಕೊಂಡು ಮನೆಗೆ ಹೊತ್ತೊಯ್ದ್ರಾಯ್ತು.

 

ಹತ್ತೇನು - ಇಪ್ಪತ್ತು  ನಿಮಿಷ ಕಾದರೂ ಯಾವೊಂದು ನರ ಪಿಳ್ಳೆ ಬರ್ಲಿಲ್ಲ, 'ಬಡ ಬೋರ' ಖ್ಸುಶಿಯಾಗ್  ಅಹ! ನಂದೇ ಅದ್ರ್ಹುಸ್ಟ :) ಕಾಸಿಲ್ಲದೆ  ಒಂದೊಳ್ಳೆ 'ಚೇರ್' ಸಿಕ್ತಲ್ಲ ಅಂತ ಮನಸಲ್ಲೇ ಅಂಕಳ್ತಾ 'ಅದನೆತ್ತಿ' ಹೆಗಲ ಮೇಲೆ ಇಟ್ಕೊಂಡ ನೋಡಿ ಆಗ 'ಬಡ ಬೋರನಿಗೆ''ಅದ್ರ' ಮಹತ್ವ ' ಗೊತ್ತಿರಲಿಲ ಮತ್ತು  'ಅದರಿಂದ' ತಾನೆಸ್ಟು ಪೇಚಿಗೆ ಸಿಕ್ಕಕೊಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ.  'ಬಡ ಬೋರನ ' ಹೆಗಲು ಹತ್ತಿದ್ದು 'ಚೇರಲ್ಲ' ಅದರ ರೂಪದ 'ಶನಿ' :)  ಮುಂದಿದೆ  'ಬಡ ಬೋರಂಗೆ ಮಾರಿ ಹಬ್ಬ'  :)

 

 ಮುಂದಿನ ಭಾಗದಲ್ಲಿ..ಇನ್ನಸ್ಟು.....

 

 

Comments