ಮರುಬಳಕೆಗೆ ಪ್ಲಾಸ್ಟಿಕ್ ಬಾಟಲ್,ಕಾಗದ,ಇಂಕ್ ಕಾಟ್ರಿಜ್ ಇತ್ಯಾದಿ ವಸ್ತುಗಳನ್ನು ಮರಳಿಸಲು ಅಮೆರಿಕಾದ ಮಸಾಚ್ಯುಸೆಟ್ಸ್ನ ಎಂಐಟಿಯ ಕ್ಯಾಂಪಸ್ಸಿನಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.ಇದು ಜನರು ತಂದ ವಸ್ತುಗಳನ್ನು ಸ್ವೀಕರಿಸುತ್ತದೆ. ಮರುಬಳಕೆ ಸಾಮಗ್ರಿ ಮರಳಿಸಿದ ಬಳಿಕ,ಯಂತ್ರದ ಸ್ಪರ್ಶಸಂವೇದಿ ತೆರೆಯಲ್ಲಿ ತಮ್ಮ ಸೆಲ್ಫೋನ್ ನಂಬರ್ ನೀಡಿದರೆ,ಯಂತ್ರವು,ಆತನ ವಿವರಗಳನ್ನು ಅಂತರ್ಜಾಲ ಪುಟವೊಂದರಲ್ಲಿ ಪ್ರದರ್ಶಿಸ ತೊಡಗುತ್ತದೆ,ವ್ಯಕ್ತಿ ಎಷ್ತು ಐಟಮುಗಳ ಮರುಬಳಕೆಗೆ ಕಾರಣನಾಗಿದ್ದಾನೆ ಎನ್ನುವ ವಿವರಗಳಿಲ್ಲಿ ಸಿಗುತ್ತವೆ.ಮಾತ್ರವಲ್ಲದೆ ಹೆಚ್ಚು ಮರುಬಳಕೆ ಮಾಡಿದವರಿಗೆ ಬಹುಮಾನಗಳು ಮತ್ತು ಪ್ರೋತ್ಸಾಹಧನ ಇಲ್ಲಿ ಸಿಗುತ್ತದೆ.ಗ್ರೀನ್ಬೀನ್ ರಿಸೈಕಲ್ ಎನ್ನುವ ಕಂಪೆನಿಯ ಹೊಸ ಯೋಜನೆ ಇದಾಗಿದೆ.ಇದರ ಹೊಸತನಕ್ಕೆ ಶಿಕ್ಷಣಸಂಸ್ಥೆಯೊಂದು ಪ್ರಶಸ್ತಿಯನ್ನೂ ನೀಡಿದೆ.ಸದ್ಯ ಈ ಯಂತ್ರ ಹದಿನಾಲ್ಕು ಸಾವಿರ ಮರುಬಳಕೆಯ ವಸ್ತುಗಳನ್ನು ಒಟ್ಟು ಮಾಡಿದೆ. ಯಾವುದೇ ಬಹುಮಾನ ಅಥವಾ ಪ್ರೋತ್ಸಾಹ ಧನ ಸಂಬಂಧಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆಯೂ ಇಲ್ಲಿದೆ.
ಭೂಮಿಯಿಂದ ಹನ್ನೆರಡು ಜ್ಯೋತಿರ್ವರ್ಷ ದೂರದಲ್ಲಿ ಹೀಲಿಯಂ,ಜಲಜನಕದ ಶುದ್ಧ ಅನಿಲರಾಶಿಯನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ.ಸಾಮಾನ್ಯವಾಗಿ ಇಂತಹ ಅನಿಲರಾಶಿಯಲ್ಲಿ ಭಾರದ ಧಾತುಗಳಾದ ಇಂಗಾಲ.ಸಿಲಿಕಾನ್ ಇತ್ಯಾದಿಗಳು ಕಾಣಬರುತ್ತವೆ.ವಿಶ್ವವು ಆಸ್ತಿತ್ವಕ್ಕೆ ಬಂದಾಗ ನಡೆದ ಭಾರೀ ಸ್ಫೋಟದಲ್ಲಿ ಅನಿಲರಾಶಿಗಳು ಬೇರ್ಪಟ್ಟು,ನಕ್ಷತ್ರ,ಗ್ರಹಗಳು ಆಸ್ತಿತ್ವಕ್ಕೆ ಬಂದುವು ಎನ್ನುವ ವಾದವಿದೆ.ಈಗ ಕಂಡು ಬಂದಿರುವ ಅನಿಲ ರಾಶಿಯಲ್ಲಿ ಹೀಲಿಯಂ ಮತ್ತು ಜಲಜನಕ ಬಿಟ್ಟರೆ ಬೇರೆ ಧಾತುಗಳ ಕುರುಹು ಕಂಡು ಬಾರದ್ದು ಆಶ್ಚರ್ಯ ಹುಟ್ಟಿಸಿದೆ.ಅನಿಲರಾಶಿಗಳು ತಣಿದು ನಕ್ಷತ್ರವಾಗಲು ಇತರ ಧಾತುಗಳು ಬೇಕೇಬೇಕು.ಇದರ ಶುದ್ಧತೆಗೆ ಕಾರಣವೇನು,ಇದು ನಕ್ಷತ್ರವಾಗಿ ಬದಲಾಗುವ ಪ್ರಕ್ರಿಯೆ ಯಾಕಾಗಿ ನಡೆಯುತ್ತಿಲ್ಲ ಎನ್ನುವುದ್ ಚೋದ್ಯದ ಸಂಗತಿಯಾಗಿದೆ.
ವಿದೇಶಗಳಲ್ಲೀಗ 4ಜಿ ಸೇವೆಗಳು ಆರಂಭವಾಗುತ್ತಲಿವೆ.3ಜಿ ಸೇವೆಗಳ ನಂತರ 4ಜಿ ಸೇವೆಗಳನ್ನು ಆರಂಭಿಸುವಾಗ,ಸೇವಾದಾತೃಗಳು ಮೂಲಸೌಕರ್ಯದಲ್ಲಿ ಬಹಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಕಾರಣ,ಬಹಳ ಹೂಡಿಕೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಅಲ್ಲದೆ ಸ್ಪೆಕ್ಟ್ರಮ್ ಪಡೆಯಲು ಲೈಸೆನ್ಸ್ ಶುಲ್ಕ ಇತ್ಯಾದಿ ಪಾವತಿಗಳನ್ನೂ ಮಾಡುತ್ತಾರೆ.ಹೀಗಾಗಿ,ಸೇವಾದಾತೃಗಳು ತಮ್ಮ ಹೂಡಿಕೆಯು ಬಹಳ ಬೇಗ ವಸೂಲಾಗ ಬೇಕೆಂಬ ನಿರೀಕ್ಷೆಯಲ್ಲಿರುವುದು ಸಾಮಾನ್ಯ.ಹೊಸ ಸೇವೆಗಳ ಮೂಲಕ ಜನರನ್ನು ಆಕರ್ಷಿಸಿ,ಅದರ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಯತ್ನಿಸುವುದು ಒಂದು ಬಗೆ.4ಜಿಯಲ್ಲಿ ದತ್ತಾಂಶ ಅಧಾರಿತ ಸೇವೆಗಳಿಗೆ ಇನ್ನಷ್ಟು ಒತ್ತು ಸಿಗಲಿವೆ.ಶರವೇಗದ ಜಾಲವಿದಾದ್ದರಿಂದ,ದತ್ತಾಂಶ ಅಧಾರಿತ ಸೇವೆಗಳು 3ಜಿ ಜಾಲಕ್ಕಿಂತಲೂ ಇಲ್ಲಿ ಗ್ರಾಹಕನಿಗೆ ಹೆಚ್ಚು ತೃಪ್ತಿದಾಯಕವಾಗ ಬಹುದು.ಟಿವಿ ವೀಕ್ಷಣೆಯನ್ನು ಹೆಚ್ಚಿಸುವಂತೆ ಗ್ರಾಹಕನ ಅಭ್ಯಾಸ ಬದಲಾಯಿಸುವಂತೆ ಮಾಡುವುದು ಸೇವಾದಾತೃಗಳ ಮುಖ್ಯ ಯೋಜನೆಯಾಗಿದೆ.ಧ್ವನಿ ಕರೆಗಳು 4ಜಿಯಲ್ಲೂ ಮುಂದುವರಿಯಲಿವೆ.ಗ್ರಾಹಕರ ಮಟ್ಟಿಗೆ ಧ್ವನಿ ಕರೆಗಳು ಯಾವ ಜಾಲದಲ್ಲೂ ಬೇಕಾದ ಪ್ರಧಾನ ಸೇವೆ.4ಜಿಯಲ್ಲಿ ಹೊಸ ತಂತ್ರಜ್ಞಾನದ ಮೂಲಕ ಇನ್ನಷ್ಟು ಸ್ಪಷ್ಟ ಕರೆಗಳನ್ನು ಏರ್ಪಡಿಸಲು ಅವಕಾಶ ಕಲ್ಪಿಸಿ,ಗ್ರಾಹಕನನ್ನು ಅಕರ್ಷಿಸುವುದು ಸೇವಾದಾತೃಗಳ್ಳ ಇನ್ನೊಂದು ಯೋಜನೆಯಾಗಿದೆ.ಗ್ರಾಹಕನ ಖಾಸಗಿ ವಿವರಗಳನ್ನು ಇತರರಿಗೆ ನೀಡಿ ಹಣ ಮಾಡುವುದೂ ಸಾಧ್ಯ-ಆದರೆ ಹೀಗೆ ಮಾಡಿದಾಗ,ಖಾಸಗಿತನದ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಸಾಮಾಜಿಕ ಜಾಲತಾಣಗಳ ಸದಸ್ಯರಾಗುವವರು ವಯಸ್ಕರಾಗಿರಬೇಕು.ಆದರೆ,ಫೇಸ್ಬುಕ್ ತಾಣದಲ್ಲಿ ಏಳೂವರೆ ದಶಲಕ್ಷ ಮಕ್ಕಳು ಸದಸ್ಯರಾಗಿದ್ದಾರೆ.ಕೆಲವು ಮಕ್ಕಳ ಹೆತ್ತವರೇ ಅವರನ್ನು ಇಲ್ಲಿ ಸೇರಿಸಲು ಮುತುವರ್ಜಿ ವಹಿಸುತ್ತಾರೆ.ಅಮ್ದರೆ ಹೆತ್ತವರು ಅಂತರ್ಜಾಲದಲ್ಲಿ ಮಕ್ಕಳ ಬಗ್ಗೆ ವಹಿಸ ಬೇಕಾಗಿರುವ ಎಚ್ಚರಿಕೆಯ ಬಗ್ಗೆ ಗಮನ ಕೊಡದಿರುವುದು ಸ್ಪಷ್ಟ.ಎರಡು ಮತ್ತು ಐದು ವರ್ಷ ನಡುವಿನ ವಯಸ್ಸಿನ ಮಕ್ಕಳು ಅಂತರ್ಜಾಲ ಬಳಸುವುದು ಎರಡು ವರ್ಷಗಳಲ್ಲಿ ಅತ್ಯಧಿಕವಾಗಿ ಬೆಳೆದಿದೆ.ವಿಡಿಯೋ ಆಟಗಳನ್ನು ಆಡುವ ಮಕ್ಕಳ ಸಂಖ್ಯೆಯೂ ಬಹು ದೊಡ್ಡದು.ಮಕ್ಕಳು ಅಂತರ್ಜಾಲ ಬಳಸುವಾಗ ಅವರು ತಮ್ಮ ವಿವರಳನ್ನು ನೀಡದಂತೆ ಅವರಿಗೆ ತಿಳುವಳಿಕೆ ನೀಡಬೇಕು.ಹಾಗೆಯೇ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುವಾಗಲೂ ಎಚ್ಚರಿಕೆ ಬೇಕು-ಅವು ದುರ್ಬಳಕೆ ಆಗಲೂ ಬಹುದು.ಮಕ್ಕಳನ್ನು ಬೆದರಿಸುವ-ಸೈಬರ್ ಬುಲ್ಲಿ ಎನ್ನುವ ಸಮಸ್ಯೆ ಅಂತರ್ಜಾಲದಲ್ಲಿದೆ.ಇಂತಹುದರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು.ಮಕ್ಕಳು ಅಂತರ್ಜಾಲದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎನ್ನುವ ಬಗ್ಗೆ ಕಣ್ಣಿಡಬೇಕು.ಅಂತರ್ಜಾಲವು ಚಟವಾಗಿ ಬಿಡುವ ಅಪಾಯದಿಂದ ಮಕ್ಕಳನ್ನು ರಕ್ಷಿಸುವುದಗತ್ಯ.
ಐಫೋನ್ 4Sನ ಅಧಿಕ ಬ್ಯಾಟರಿ ಖರ್ಚಿನ ಸಮಸ್ಯೆಯನ್ನು ಆಪಲ್ ನಿವಾರಿಸಿದೆ.ಇದಕ್ಕೆ ತಂತ್ರಾಂಶ ಪರಿಹಾರವನ್ನದು ಅವಲಂಬಿಸಿದೆ.ಸಮಸ್ಯೆ ನಿವಾರಿಸಿದ್ದು ಹೇಗೆ ಎಂಬುದು ಸ್ಪಷ್ಟವಿಲ್ಲವಾದರೂ,ಐಫೋನಿನ ಆಪರೇಟಿಂಗ್ ವ್ಯವಸ್ಥೆ ಐಓಎಸ್ನಲ್ಲಿ ಬದಲಾವಣೆ ಮಾಡುವ ಮೂಲಕ ಬ್ಯಾಟರಿ ಖರ್ಚು ತಗ್ಗಿಸಲು ಆಪಲ್ ಶಕ್ತವಾಗಿದೆ.ಟ್ವಿಟರ್ ಸಂದೇಶಗಳಲ್ಲಿ ಕೆಲವು ಗ್ರಾಹಕರು ತಮ್ಮ ಸಮಸ್ಯೆ ನಿವಾರಣೆಯಾಗಿ ಬರೆದಿದ್ದರೂ,ಇನ್ನು ಹಲವರು ಈಗಲೂ ಸಮಸ್ಯೆ ಮುಂದುವರಿದಿದೆ ಎಂದು ಪ್ರತಿಕ್ರಿಯಿಸಿದವರಿದ್ದಾರೆ.
ಗೂಗಲ್ ಯುಟ್ಯೂಬ್ ಮತ್ತು ಗೂಗಲ್+ ಸೇವೆಗಳಲ್ಲಿ ಗೂಗಲ್ ವೆಟರನ್ಸ್ ಎನ್ನುವ ವಿಭಾಗವನ್ನು ತೆರೆದಿದೆ.ಅಮೆರಿಕಾದ ಸೈನಿಕರು ಇರಾಕ್,ಅಪಘಾನಿಸ್ತಾನ ಮುಂತಾದೆಡೆಯಿಂದ ತಮ್ಮ ಸೇವೆ ಮುಗಿಸಿ,ಮನೆಗೆ ಮರಳಿದ ಬಳಿಕ,ಅವರಿಗೆ ನೆರವಾಗುವಂತಹ ವಿಡಿಯೋ,ಹಾಡು ಮತ್ತಿತರ ಮನರಂಜನೆಯ ಅಂಶಗಳಿಲ್ಲಿ ಲಭ್ಯವಾಗಿವೆ.ಸೈನಿಕರಿಗೆ ಏಕಾಂತ ಅನುಭವಕ್ಕೆ ಬರದಂತೆ ಮಾಡುವುದು,ಮತ್ತು ಅವರನ್ನು ಉಲ್ಲಸಿತರನ್ನಾಗಿ ಇಡಲು ಬೇಕಾದ ಐಟಂಗಳಿಗೆ ಇಲ್ಲಿ ಒತ್ತು.
ಉದಯವಾಣಿ
*ಅಶೋಕ್ಕುಮಾರ್ ಎ
Comments
ಉ: ಮರುಬಳಕೆ:ಟಾಪ್ ಯಾರು?
In reply to ಉ: ಮರುಬಳಕೆ:ಟಾಪ್ ಯಾರು? by kavinagaraj
ಉ: ಮರುಬಳಕೆ:ಟಾಪ್ ಯಾರು?
In reply to ಉ: ಮರುಬಳಕೆ:ಟಾಪ್ ಯಾರು? by kavinagaraj
ಉ: ಮರುಬಳಕೆ:ಟಾಪ್ ಯಾರು?
ಉ: ಮರುಬಳಕೆ:ಟಾಪ್ ಯಾರು?
In reply to ಉ: ಮರುಬಳಕೆ:ಟಾಪ್ ಯಾರು? by kavinagaraj
ಉ: ಮರುಬಳಕೆ:ಟಾಪ್ ಯಾರು? -ಟೈ ಆಗಿದೆ!
In reply to ಉ: ಮರುಬಳಕೆ:ಟಾಪ್ ಯಾರು? -ಟೈ ಆಗಿದೆ! by ಗಣೇಶ
ಉ: ಮರುಬಳಕೆ:ಟಾಪ್ ಯಾರು? -ಟೈ ಆಗಿದೆ!