ವಿಭಿನ್ನ ಧಾರಾವಾಹಿ
ಕೆಲದಿನಗಳ ಹಿಂದೆ ಗೆಳತಿ ಗೀತಾ ಫೋನಲ್ಲಿ ಮಾತನಾಡುತ್ತಿದ್ದಾಗ ಈ ಟಿವಿಯಲಿ ರಾತ್ರಿ ೮.೩೦ ಕ್ಕೆ ಧಾರವಾಹಿಯೊಂದು ಪ್ರಸಾರವಾಗುತ್ತಿದೆ,ವಿಭಿನ್ನವಾಗಿ ಚೆನ್ನಾಗಿದೆ ಅಂದಿದ್ದಳು. ಧಾರವಾಹಿಗೆ ಜೋತುಬೀಳಬಾರದೆನ್ನುವ ನಾನು ಕೆಲವು ಕಂತುಗಳನ್ನು ನೋಡತೊಡಗಿದೆ. ಸಹಜವೆನಿಸದ ಸಂಭಾಷಣೆ ಆದರು ಒಂಥರಾ ಮೋಡಿ ಇದೆ.ಎಲ್ಲವು ಅರ್ಥಗರ್ಭಿತ ಮಾತುಗಳು,ಪ್ರಶ್ನಾರ್ಥಕ ಉತ್ತರಗಳು.ನಗರ ಬದುಕಿನಲ್ಲಿ ದುಡ್ಡಿನ ಹಿಂದೆ ಬಿದ್ದ ತಂದೆತಾಯಿಗಳು, ದುಡ್ಡು ಕೂಡಿಡುವುದರಲ್ಲೆ ನಿರತರಾಗಿ ತಮ್ಮ ಮಕ್ಕಳಿಗೆ ಪ್ರೀತಿವಾತ್ಸಲ್ಯವನ್ನು ಕೊಡಲು ಸಮಯವಿಲ್ಲದವರು.ಅಪ್ಪನ ಲಂಚದ ದುಡ್ಡನ್ನು ತಿರಸ್ಕರಿಸುವ ಮಗಳು ,ಹೀಗೆ ಮಕ್ಕಳ ಹತಾಶೆ,ತಲ್ಲಣವನ್ನು ಮಾತುಗಳಲ್ಲೆ ತೆರೆದಿಡುತ್ತಾ ಅಜ್ಜ ಅಜ್ಜಿ, ಮಕ್ಕಳು ಮತ್ತು ಮೊಮ್ಮಕ್ಕಳು ಎಲ್ಲರ ಆಂತರ್ಯವನ್ನು 'ಅನಾವರಣ'ಗೊಳಿಸುವ ಉತ್ತಮ ಧಾರವಾಹಿ.ಕೆಲವೊಮ್ಮೆ ಹಗುರವಾಗಿಸಬೇಕಾಗಿತ್ತು ಎನ್ನುವಷ್ಟು ಭಾರವಾದ ಮಾತುಗಳು.ಆದರೂ ಪ್ರತಿ ದೃಶ್ಯವು ನಮ್ಮ ಯೋಚನೆಯನ್ನು ಪರಿಶೀಲಿಸುವಂತೆ ಮಾಡುತ್ತದೆ.ಪ್ರತಿ ಕಂತು ಮುಗಿದರು ನಮ್ಮ ಯೋಚನಾಲಹರಿ ಮುಂದುವರಿದಿರುತ್ತದೆ. ಅನಾವರಣ ಧಾರವಾಹಿಯ ಕತೆ,ಸಂಭಾಷಣೆ ಸೇತುರಾಮ್ ಅವರದು.
Comments
ಉ: ವಿಭಿನ್ನ ಧಾರಾವಾಹಿ
In reply to ಉ: ವಿಭಿನ್ನ ಧಾರಾವಾಹಿ by makara
ಉ: ವಿಭಿನ್ನ ಧಾರಾವಾಹಿ