ಉಡಿಸಿ ಸೀರೆಯ ನೆರಿಗೆ ಸಿಕ್ಕಿಸುವಾಗ...

ಉಡಿಸಿ ಸೀರೆಯ ನೆರಿಗೆ ಸಿಕ್ಕಿಸುವಾಗ...

ಕವನ


 




 


 


ಅವಳ ಉಗುರಿಗೆ ಬಣ್ಣ ಹಚ್ಚುವ ಘಳಿಗೆ


ಗಡಿಯಾರ ಚಲಿಸು ಮೆಲ್ಲಗೆ!


ಒದ್ದೆ ಕೂದಲನೊರೆಸಿ ಹುಬ್ಬು ತೀಡುವ ಸಮಯ


ಮುತ್ತೊಂದ ಕೊಡು ನೀ ಮೆಲ್ಲಗೆ!


 


ತೆರೆದ ರೆಪ್ಪೆಯ ನಡುವೆ, ನಾ ಹಚ್ಚುವಾಗ ಕಾಡಿಗೆ


ತೆರೆದುಕೊಳ್ಳಲಿ ಹೃದಯ, ತಂತಾನೆ ತನ್ನ ಪಾಡಿಗೆ!


ಉಡಿಸಿ ಸೀರೆಯ ನೆರಿಗೆ ಸಿಕ್ಕಿಸುವಾಗ


ನಗುವಾಗಿ ಬರಲಿ ನಾಚಿಕೆ!



 

Comments