ಜಲ ಸಂರಕ್ಷಣೆ - ನಿಮಗೆಷ್ಟು ಗೊತ್ತು?

ಜಲ ಸಂರಕ್ಷಣೆ - ನಿಮಗೆಷ್ಟು ಗೊತ್ತು?

ದುಡ್ಡು ನೀರಿನಂತೆ ಖರ್ಚು ಮಾಡಬೇಡಿ ಎಂದು ಹಿರಿಯರು ಹೇಳುತ್ತಿರುತ್ತಾರೆ. ಆದರೆ ಇಂದು ನೀರು ದುಡ್ಡಾಗಿದೆಯೇ? ಜನಸಂಖ್ಯೆ ಅತಿಯಾದಂತೆ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯುವ ನೀರಿಗೂ ಹಾಹಾಕಾರ. ಬೆಲೆ ತೆತ್ತು ಟ್ಯಾಂಕು ತುಂಬ ನೀರು ಹೊಡೆಸಿಕೊಳ್ಳುವ ಸಂದರ್ಭ.

ಈ ನಡುವೆ ನಮಗೆ ಲಭ್ಯವಿರುವ ನೀರನ್ನು ನಾವು ಸದುಪಯೋಗಪಡಿಸಿಕೊಳ್ಳುತ್ತಿದ್ದೇವೆಯೇ? ಕೆರೆಯ ನೀರನ್ನು ಎಷ್ಟರ ಮಟ್ಟಿಗೆ ಕೆರೆಗೆ ಚೆಲ್ಲುತ್ತಿದ್ದೇವೆ? ಜಲ ಸಂರಕ್ಷಣೆಯ ಬಗ್ಗೆ ಎಷ್ಟು ತಿಳಿದಿದ್ದೇವೆ?

ಅರ್ಘ್ಯಂ ತಂಡದವರಿಂದ ಸಂಪಾದಿಸಲ್ಪಟ್ಟ [:quiz/india-water-portal|ಕೆಲವು ಪ್ರಶ್ನೋತ್ತರಗಳು ಇಗೋ ನಿಮ್ಮ ಮುಂದಿವೆ].

ಹೆಚ್ಚು ಸರಿ ಉತ್ತರಗಳನ್ನು ನೀಡಿದವರಿಗೆ ಮುಂದಿನ ಶುಕ್ರವಾರ ನಡೆಯಲಿರುವ "ಇಂಡಿಯಾ ವಾಟರ್ ಪೋರ್ಟಲ್"ನ ಕನ್ನಡ ಆವೃತ್ತಿಯ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಣಗಳನ್ನು ವಿತರಿಸಲಾಗುವುದು. ಜೊತೆಗೆ ಅಂದೇ ಹೊಟೆಲ್ ರಿಗಾಲಿಸ್ (ಲ್ಯಾವೆಲ್ಲೆ ರೋಡ್)ನಲ್ಲಿ ನಡೆಯಲಿರುವ "Using today's IT tools in development practice" ಕುರಿತ ಕಾರ್ಯಾಗಾರವೊಂದಕ್ಕೆ ಪ್ರವೇಶ ಕೂಡ.

~

Submitted by ಶ್ಯಾಮ ಕಶ್ಯಪ Thu, 02/14/2008 - 20:03

In reply to by hpn