ಉಡುಗೊರೆ

ಉಡುಗೊರೆ

ಕವನ

ಕೊಡಬೇಕಿದೆ ಉಡುಗೊರೆ, ಕೊಡಬೇಕಿದೆ

ಭುವಿಗೆ ಬಂದ ಸಮಯದಿಂದ,

ಮರಳಿ ಭುವಿಯಿಂದ ಹೊರಡುವುದರೊಳಗೆ,

ಕೊಡಬೇಕಿದೆ ಉಡುಗೊರೆ....

 

ಕಂಬನಿ ಮಿಡಿದಾಗ ಕಣ್ಣೊರಿಸಿದ ಕರಗಳಿಗೆ,

ಕರವನು ಮುಗಿದಾಗ ದೇವನು ನೀಡಿದ ವರಗಳಿಗೆ

ದಾರಿ ತಪ್ಪಿದಾಗ ತಿದ್ದಿ ಹೇಳಿದ ಗುರುಗಳಿಗೆ

ಸಹನಾಮಯಿಯಾದ ಭೂಮಾತೆಯ ಮಗಳಿಗೆ.........

 

ನಿದ್ದೆಯಲ್ಲಿದ್ದಾಗ  ಖುಶಿ ನೀಡಿದ ಕನಸಿಗೆ

ಕನಸನು ನನಸು ಮಾಡೆಂದು ಹೇಳಿದ ಮನಸಿಗೆ

ಅರಳಿ ನಗುವುದನು ಕಲಿಸಿದ ಸ್ರುಶ್ಟಿ ಸೊಗಸಿಗೆ

ನಾಕದಲ್ಲಿಯೂ ಅಮ್ಮನ ಕೈತುತ್ತನು ನೆನಪಿಸುವ ಹಸಿವೆಗೆ.............

 

ಕೊಡಬೇಕಿದೆ ಉಡುಗೊರೆ,ಕೊಡಬೇಕಿದೆ...

 

 
 
 

 

Comments