ಕನ್ನಡಾಂಬೆ

ಕನ್ನಡಾಂಬೆ

ಕವನ
ಪಚ್ಚೆಪೈರು ಗೊನೆತೆನೆಗಳು ದಟ್ಟಕಾಡಿನ ಗಿರಿಶಿಖರಗಳು ನದಿಝರಿ ಜಲಪಾತಗಳು ಕನ್ನಡಾಂಬೆಯೆ ಚೆಲುವು ನಿನ್ನದು ಅಪಾರ... ಕೋಟೆ ಕೊತ್ತಲ ಗುಡಿಗೋಪುರಗಳು ಶಿಲ್ಪಕಲೆಗಳ ಹೊನ್ನಮುಕುಟವು ಸಮೃದ್ಧಿಯ ಲಲಿತಕಲೆಗಳು ಕನ್ನಡಾಂಬೆಯೆ ಹಿರಿಮೆ ನಿನ್ನದು ಅಪಾರ... ಮಲೆನಾಡು ಬಯಲನಾಡು ಕಡಲನಾಡು ಹಲವು ಸಂಸ್ಕೃತಿಯ ಸಕಲ ಧರ್ಮದ ಸಮತೆ ಸಹಬಾಳ್ವೆಯು ಕನ್ನಡಾಂಬೆಯೆ ಪ್ರೀತಿ ನಮ್ಮದು ಅಪಾರ...

Comments