ಧರ್ಮ ಎಂಬ psychopathy

ಧರ್ಮ ಎಂಬ psychopathy

ಇಂದ್ರನಿಂದ ಮಾನ "ಭಂಗ"ವಾಗಿ ಗಂಡನಿಂದ ಕಲ್ಲಾಗುವಂತೆ ಶಾಪಕ್ಕೊಳಗಾಗುವ ಅಹಲ್ಯೆಗೆ ರಾಮನ ಪಾದ ಸ್ಪರ್ಷ ಶಾಪವಿಮೋಚನೆ ಆಗುವುದಾದರೆ. ಸೀತೆ ಅಗ್ನಿ ಪರೀಕ್ಷೆಯಲ್ಲಿ ತಾನು ಪತಿವ್ರತೆ ಎಂದು ಪ್ರೂವ್ ಮಾಡಿ ಗಂಡನನ್ನು ’ಕೂಡಬೇಕಾಯಿತೆ?’ ತಂದೆ ಚಿಕ್ಕಮ್ಮನಿಗೆ ಕೊಟ್ಟ ಮಾತಿಗೆ ಕಟ್ಟುಬಿದ್ದು ಅರಣ್ಯವಾಸ ಮಾಡಿದ ರಾಮ ಅಷ್ಟು ವರ್ಷಗಳ ಸೀತೆಗೆ ತಾಯಿಯಾಗುವ ಭಾಗ್ಯದಿಂದ ತಪ್ಪಿಸಿದವನು, ಅಗಸನ ಮಾತನು ಕೇಳಿ ಸೀತೆಯನ್ನು ಕಾಡಿಗೆ ಅಟ್ಟಿದನು ಸಮಾಜದೆದುರು ತನ್ನ ಪತ್ನಿ ಪತಿವ್ರತೆ ಎಂದು ಧೈರ್ಯವಾಗಿ ಹೇಳಿಕೊಳ್ಳಲಾಗದೆ, ತಾನು ನಿಂದನೆಯಿಂದ ತಪ್ಪಿಸಿಕೊಳ್ಳಲು, ತನ್ನ ರಾಜ್ಯದ ಜನತೆ ಮುಂದೆ ತಾನು ಸಾಚಾ ಎನಿಸಿಕೊಳ್ಲಲು.. ಸೀತೆಗೆ ಅಷ್ಟೆಲ್ಲ ಕಷ್ಟಗಳನ್ನು ಕೊಟ್ಟವನು ಪುರಷೋತ್ತಮನಾಗಲು ಹೇಗೆ ಸಾಧ್ಯ? ಅವನು ಅದು ಹೇಗೆ ಆದರ್ಶ ಪುರುಷನಾಗಲು ಸಾಧ್ಯ ? ತನ್ನ ಹೆಂಡತಿಗೆ ಹೀಗೆಲ್ಲ ಪರೀಕ್ಷೆಗಳನ್ನೊಡ್ಡಿ , ಹಿಂಸೆ , ವಿರಹಗಳನ್ನು ನೀಡುವ ವಿಕ್ಶಿಪ್ತತೆಯನ್ನು ಸಮಾಜದಲ್ಲಿ ಮರ್ಯಾದ ಪುರಷೋತ್ತಮ, ಆದರ್ಶ ಎನ್ನುವುದಾದರೆ ಅದನ್ನು ಒಪ್ಪುವಂತ ಮನಃ ಸ್ಥಿತಿಯನ್ನು ಬೆಳೆಸಿರುವ ಈ ಧರ್ಮ ಎಂಬ psychopathy stage ಮತ್ತೊಂದಿಲ್ಲ.
Rating
No votes yet

Comments