ಹೆಣ್ಣ ಮುಂದೆ ಮಂಡಿಯೂರಿ ಕುಳಿತವರೆಲ್ಲ ...

ಹೆಣ್ಣ ಮುಂದೆ ಮಂಡಿಯೂರಿ ಕುಳಿತವರೆಲ್ಲ ...

 


ಹೆಣ್ಣ ಮುಂದೆ ಮಂಡಿಯೂರಿ ಕುಳಿತವರೆಲ್ಲ


 


ಕೈಗೆ ಹೂವನ್ನು ಕೊಡುವವರಲ್ಲ


ಪ್ರೇಮ ನಿವೇದಿಸಿಕೊಳ್ಳುವವರಲ್ಲ


ಬೆರಳಿಗೆ ಉಂಗುರು ತೊಡಿಸುವವರಲ್ಲ


ಕಾಲಿಗೆ ಗೆಜ್ಜೆ ತೊಡಿಸುವವರಲ್ಲ


ಕಾಲ್ಬೆರಳಿಗೆ ಕಾಲುಂಗುರು ತೊಡಿಸುವವರಲ್ಲ


ಪಾದಕ್ಕೆ ಅರಿಶಿಣ ಬಳಿಯುವವರಲ್ಲ


ಪಾದಕೆ ಚುಚ್ಚಿದ ಮುಳ್ಳ ತೆಗೆಯುವವರಲ್ಲ


ಉಟ್ಟ ಸೀರೆಯ ನೆರಿಗೆ ಸರಿ ಮಾಡುವವರಲ್ಲ


ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುವವರಲ್ಲ


ಕೈಪಿಡಿದು ಪ್ರೇಮ ಗೀತೆ ಹಾಡುವವರಲ್ಲ


ನೆಡೆವ ಹಾದಿಗೆ ಹೂವ ಹರಡುವವರಲ್ಲ


ಅಂಗೈ ಮೇಲೆ ಪಾದ ಇಡೆ೦ದು ಹೇಳುವವರಲ್ಲ


ಬಸ್ಸಿನಲ್ಲಿ ನಿಂತು ಬಂದದ್ದಕ್ಕೆ ಕಾಲು ಒತ್ತುವವರಲ್ಲ


ಥಂಡಿ ಏರದಿರಲು ಪಾದಕೆ ಸಾಕ್ಸ್ ತೊಡಿಸುವವರಲ್ಲ


 


ಮತ್ತಿನ್ನೇನ್ರೀ


ಮಂಡಿಯೂರಿ ಕುಳಿತವರು


'ತಲೇ ಕೆರೀತೈತೆ .. ಹೇನು ಐತಾ ಒಸಿ ನೋಡ್ತೀಯಾ'


ಅನ್ನುವವರೂ ಆಗಿರಬಹುದು ಕಣ್ರೀ !!!


 

Comments