ಕರ್ನಾಟಕ 'ಸೀ ಎಮ್ಮು ಆಫೀಸು ಮತ್ತು ವಿಧಾನ ಸೌಧದ' ಕಾರ್ಯವೈಖರಿ ಪ್ರತ್ಯಕ್ಷ ದರ್ಶನ(ಸೀ ಸೀ ಟೀ ವಿ)- ಈ ಆಡಳಿತದಲ್ಲಿ ಕರುನಾಡಿನ ಮತ್ತೊಂದು ಹೆಜ್ಜೆ

ಕರ್ನಾಟಕ 'ಸೀ ಎಮ್ಮು ಆಫೀಸು ಮತ್ತು ವಿಧಾನ ಸೌಧದ' ಕಾರ್ಯವೈಖರಿ ಪ್ರತ್ಯಕ್ಷ ದರ್ಶನ(ಸೀ ಸೀ ಟೀ ವಿ)- ಈ ಆಡಳಿತದಲ್ಲಿ ಕರುನಾಡಿನ ಮತ್ತೊಂದು ಹೆಜ್ಜೆ

 

ಪಕ್ಕದ ಕೇರಳ ರಾಜ್ಯದ ಮುಖ್ಯಮಂತ್ರಿಗಳ ತಮ್ಮ ಕಚೇರಿಗೆ 'ಪಾರದರ್ಶಕತೆಯ'  ಕಾರಣಕ್ಕಾಗಿ  ಅಳವಡಿಸಿದ ಸೀ ಸೀ ಟೀ ವಿ ವ್ಯವಸ್ಥೆ  ಮತ್ತು    ಅದನ್ನ 'ಸಾಮನ್ಯ ಜನತೆ'  ಮುಕ್ತವಾಗಿ ಪ್ರಸಂಶಿಸಿದ್ದು ನಮಗೆಲ್ಲ ಗೊತ್ತೇ ಇದೆ.

ಈಗ ಅದು ನಮ್ಮ ಕರುನಾಡಿನ ಮುಖ್ಯಮಂತ್ರಿಗಳ ಮೆಲೂ ಪ್ರಭಾವವಾಗಿ  ಈಗ ಕೆಲ ದಿನಗಳ ಹಿಂದೆ ಸದಾನಂದ ಗೌಡರು  ನಮ್ಮ ವಿಧಾನ ಸೌಧ ಮತ್ತು ತಮ್ಮ ಗೃಹ ಕಚೇರಿಯ ದ್ರ್ಸುಷ್ಯವನ್ನ ಲೈವ್  ಆಗಿ ನೋಡುವ ವ್ಯವಸ್ಥೆ ಮಾಡಿದ್ದಾರೆ.

 

 

ವಿಧಾನಸೌಧ ಮತ್ತು ಗೃಹ ಕಚೇರಿಗೆ 'ಸಾಮಾನ್ಯ ಜನರಿಗೆ' ಪ್ರವೇಶ ಕಷ್ಟ.  ಅಲ್ಲೇನು ನಡೆಯುತ್ತೆ ಎನ್ನುವ ಕುತೂಹಲ ಸಹಜ

:)) ಈಗ ಅದು ನಮಗೆಲ್ಲ ನೋಡಲು ಲಭ್ಯ. 

ಕ್ಯಾಮೆರಗಳ ದೃಶ್ಯ ಬಹಳ ಸ್ಪುಸ್ಥವಾಗಿದ್ದು  ದೃಶ್ಯವನ್ನ ಚಿಕ್ಕದಾಗಿಯೂ ಮತ್ತು ಸ್ಕ್ರೀನಿಗೆ ತಕ್ಕ ಹಾಗೆ ದೊಡ್ಡದು ಮಾಡಿ ಸಹಾ ನೋಡಬಹುದು/

 

'ಬ್ರಷ್ಟಾಚಾರದ  ಕೆಂಬೂತ'  ಎಲ್ಲೆಡೆ ವ್ಯಾಪಿಸಿದ್ದು ತಾವ್   'ಭಿನ್ನ'  ಎಂದು ತೋರಿಸಿಕೊಳ್ಳುವ  ಗೌಡರ  ನಡೆ ಕುತೂಹಲ ಮೂಡಿಸಿದೆ. ವ್ಯವಸ್ಥೆಯ 'ಸಾಫಲ್ಯತೆ' ಕಾದು  ನೋಡಬೇಕಸ್ಟೇ

 

>> 'ಭೂಮಿ'(ಗಣಕೀಕರಣ)  ವ್ಯವಸ್ಥೆ ಮತ್ತು 'ಮಾಹಿತಿ ತಂತ್ರಜ್ಞಾನದ ತವರಾದ' ನಾವು ಈ ವಿಷಯದಲ್ಲಿ ಮಾತ್ರ ಎರಡನೆಯವರಾಗಿದ್ದು ಸೋಜಿಗ:)೦

ಕೆಳಗೆ ಕೊಟ್ಟಿರುವ  ಲಿಂಕ್  ಕ್ಲಿಕ್ಕಿಸಿದಾಗ ಅಲ್ಲಿ  ಎರಡು ಆಯ್ಕೆ ಬರುವುದು   ಮುಖ್ಯಮಂತ್ರಿಗಳ 

 

ಗೃಹ ಕಚೇರಿ ಮತ್ತು

ವಿಧಾನ ಸೌಧ

ಇದರಲ್ಲಿ ಒಂದನು ಆಯ್ಕೆ ಮಾಡಿಕೊಂಡು ದೃಶ್ಯವನ್ನ ಲೈವ್ ಆಗಿ ನೋಡಬಹುದು. ಸಧ್ಯಕ್ಕೆ ವ್ಯವಸ್ಥೆ  ಇಂಟರ್ನೆಟ್  ಹೊಂದಿರುವವರಿಗೆ ಓಕೆ. ಇಲ್ಲದಿರುವವರು?  

 

http://119.226.79.204/karnatakacm/index.html

 

Rating
No votes yet

Comments