ಔಷಧಿಗಳ ಬೆಲೆಗಳಿಂದ ಬಳಲಿದ್ದೀರಾ?

ಔಷಧಿಗಳ ಬೆಲೆಗಳಿಂದ ಬಳಲಿದ್ದೀರಾ?

ಮೊನ್ನೆ ಪ್ರಸಿದ್ಧ ವೈದ್ಯೆಯೊಬ್ಬರು ಬರೆದುಕೊಟ್ಟ ಗುಳಿಗೆ ಖರೀದಿಸಿ ಸುಸ್ತಾದೆ. ೧೦ರ ಒಂದು ಪಟ್ಟಿಗೆ ೬೦  ರೂಪಾಯಿ - ಫ್ರೆಂಚ್ ಕಂಪೆನಿ ಸಾನೋಫಿ-ಅವೆನ್ ಟಿಸ್ ನ ತಯಾರಿಕೆ.

ಮನೆಗೆ ಬಂದು ಅಂತರ್ಜಾಲದಲ್ಲಿ ನೋಡಿದಾಗ ಅದೇ ಗುಳಿಗೆ ಕೆಡಿಲಾ ಕಂಪೆನಿಯವರ ಬ್ರಾಂಡಿಗೆ ಕೇವಲ ೧೮ ರೂಪಾಯಿ.

ಹಾಗೆಂದು, ಕೆಡಿಲಾ ಕಂಪೆನಿ, ಅವೆನ್ ಟಿಸ್ ಗಿಂತ ಸಣ್ಣದೇನಲ್ಲ - ಭಾರತದ ದೊಡ್ಡ ಕಂಪೆನಿಗಳಲ್ಲಿ ಐದನೇ ಸ್ಥಾನದಲ್ಲಿದೆ.

 

ಸಾಮಾನ್ಯವಾಗಿ, ಅನೇಕ (ಎಲ್ಲರೂ ಅಲ್ಲ) ವೈದ್ಯರು ಮತ್ತು ಔಷಧಿ ಕಂಪೆನಿಗಳ ನಡುವೆ ಒಂದು ಅಲಿಖಿತ ಒಪ್ಪಂದವಿರುತ್ತದೆ.

ಕಂಪೆನಿಗಳು ವೈದ್ಯರಿಗೆ ಬೆಲೆ ಬಾಳುವ ಅನೇಕ ಉಡುಗೊರೆಗಳನ್ನು ಆಗಾಗ ಕೊಡುತ್ತಿರುತ್ತಾರೆ.  (ನನ್ನ ನೆರೆಯಲ್ಲಿ ವಾಸವಾಗಿರುವ ಚರ್ಮವೈದ್ಯರ ಲಾನ್ಸರ್ ಕಾರು ಕೂಡ ಹೀಗೆ ಉಡುಗೊರೆ ಬಂದಿದ್ದಂತೆ).

ಈ ಋಣ ಸಂದಾಯವೆಂದು ವೈದ್ಯರು ಇವೇ ಕಂಪೆನಿಗಳ ತಯಾರಿಕೆಗಳನ್ನೇ ಹೆಚ್ಚುಹೆಚ್ಚು ಬರೆದುಕೊಡುತ್ತಾರೆ.

ನಿಜ, ಎಲ್ಲ ವೈದ್ಯರೂ ಕಾರ್ ಉಡುಗೊರೆ ಪಡೆಯುವಷ್ಟು ವ್ಯವಹಾರಿಗಳಾಗಿರುವುದಿಲ್ಲ

ಆದರೂ, ಕಂಪೆನಿ ಪ್ರತಿನಿಧಿಗಳ ಮಾರಾಟಕಲೆಗೆ ಮನಸೋತು ಅಥವಾ ಕಾನ್ ಫರೆನ್ಸ್ ಸ್ಪಾನ್ಸರ್ ಶಿಪ್, ಜಾಹಿರಾತು ಇತ್ಯಾದಿಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಲ್ಲದಿದ್ದರೂ, ತಮ್ಮ ವೃತ್ತಿಯ/ಸಂಸ್ಥೆಯ  ಬೆಳವಣಿಗೆಗಾಗಿ ಪಡೆದು, ಆ ಋಣ ಪಾವತಿಗಾಗಿ  ಒಂದೇ ಕಂಪೆನಿಯ ತಯಾರಿಕೆಗಳನ್ನು ಶಿಫಾರಸು ಮಾಡುವದುಂಟು.

 

ಇದಕ್ಕೆ ಸುಲಭ ಪರಿಹಾರವೆಂದರೆ ಮೊದಲೇ ನಿಮ್ಮ ವೈದ್ಯರಲ್ಲಿ ಕಡಿಮೆ ಬೆಲೆಯ ಬ್ರಾಂಡ್ ಅನ್ನೇ ಬರೆಯಲು ವಿನಂತಿಸುವುದು.

 

ಅಂತರ್ಜಾಲದಲ್ಲಿ ಅನೇಕ ತಾಣಗಳಲ್ಲಿ ಬೇರೆ ಬೇರೆ ಬ್ರಾಂಡುಗಳ ಹೋಲಿಕೆ ಸಿಗುತ್ತದೆ.  ಉದಾ:

 


 

ಹಾಗೆಯೇ, ನಿಮ್ಮ ಖರೀದಿ ರೂಪಾಯಿ ಇನ್ನೂರಕ್ಕೂ ಹೆಚ್ಚಾಗಿರುವದಾದರೆ, ಒಂದೆರಡು ಔಷಧಿ ಚಿಲ್ಲರೆ ಅಂಗಡಿಗಳು ಶೇಕಡಾ ಹತ್ತರಷ್ಟು ಡಿಸ್ಕೌಂಟ್ ಕೊಡುತ್ತವೆ.  ಉದಾ: MEDPLUS ಫಾರ್ಮಸಿ, ಅಪೋಲೋ ಫಾರ್ಮಸಿ (ಕ್ಲಿನಿಕ್ ಅಲ್ಲ), ಇತ್ಯಾದಿ

Comments