ಅ ಕಪ್ ಓಫ್ ಕಾಫಿ ... ಸಿಪ್ - ೧೭
ಸಿಪ್ - ೧೭
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಪುಣೆಗೆ ತಲುಪಿದ ಒಂದು ವಾರದಲ್ಲಿ ಲಕ್ಷ್ಮಿ ನಾರಾಯಣ್ ನನ್ನಲ್ಲಿ ಬಂದು "ನಿನ್ನನ್ನು ಜೀವನ್ ನ ಮೊಡ್ಯುಲ್ ಗೆ ಸೇರಿಸುತಿದ್ದೇನೆ, ಮೊದಲಿಗೆ ನೀನು ಅವನಲ್ಲಿ ಕೆ.ಟಿ ತೆಗೆದುಕೋ, ಹದಿನೈದು ದಿನದಲ್ಲಿ ನಿನ್ನ ಹೆಸರನ್ನು ಬಿಲ್ಲಿಂಗ್ ಲಿಸ್ಟ್ ನಲ್ಲಿ ಹಾಕಲಾಗುತ್ತದೆ" ಎಂದು ಹೇಳಿದರು.
ನಾನು ಮೌನದಲ್ಲಿ ಇದ್ದೆ, ಅವರು "ನಿಂಗೆ ಇದೆ ಸ್ಟ್ರೀಮ್ ಅದೇ ಸ್ಟ್ರೀಮ್ ಬೇಕು ಅಂತ ಇದೆಯಾ ...?"
"ಇಲ್ಲ ಹಾಗೇನು ಇಲ್ಲ, ಪರವಾಗಿಲ್ಲ" ಎಂದು ಉತ್ತರಿಸಿದೆ.
ಅದಕ್ಕೆ ೧೫ ವರ್ಷ ಐಟಿ ಯಲ್ಲಿ ಅನುಭವ ಇರುವ ಅವರು "ನೋಡು, ಇದು ನೀನು ನಿನ್ನ ಜೀವನವನ್ನು ರೂಪಿಸುವ ಸಮಯ, ಈಗ ಜೀವನ್ ಅನ್ನೇ ನೋಡು, ಅವನು ಹಿಡಿ ಮೊಡ್ಯುಲ್ ನ ಕೆಲಸ ಮಾಡುತಿದ್ದಾನೆ, ಪುಣೆ ಇಂದ ಹಿಡಿದು ಚೆನ್ನೈ ನ ಮೇನ್ ಬಿ.ಯು ಸೆಂಟರ್ ವರೆಗೆ ಅವನ ಐಡೆಂಟಿಟಿ ಕ್ರಿಯೇಟ್ ಮಾಡ್ಕ್ಕೊಂಡಿದ್ದಾನೆ, ಜೋಯಿನಿಂಗ್ ಆಗಿ ಒಂದು ವರ್ಷದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದಾನೆ ! ನಿನ್ನಲ್ಲೂ ಆ ಸಾಮಾರ್ಥ್ಯ ಇದೆ ಅಂದ್ಕೊಳ್ತೇನೆ.. ಏನಂತೀಯ..?"
"ಶೂರ್ ಸರ್" ಅಂದೆ.
ಎದುರಿನ ಸಾಲಿನಲ್ಲಿ ಕೂತಿದ್ದ ಜೀವನ್ ಅನ್ನು ಕರೆದು "ಇಟ್ಸ್ ವೈಭವ್ ಫ್ರೆಷೆರ್, ಯು ಅಸ್ಕಡ್ ಫೋರ್ ನ್ಯೂ ರಿಸೋರ್ಸ್ ನ , ಹಿ ಇಸ್ ಫೈನ್ ಟು ಡು ವರ್ಕ್ ವಿಥ್ ಯು".
' ಐ. ಟಿ ಜೀವನದ ವಿಚಿತ್ರವೇ ...? ಇಲ್ಲಿ ಉದ್ಯೋಗಿಗಳನ್ನು ಒಂದು ಸಂಪನ್ಮೂಲ ಎಂದು ಸಂಭೋದಿಸುತ್ತಾರೆ, ತಪ್ಪಿಲ್ಲ ಬಿಡಿ; ಕಂಪೆನಿಯ ಉದ್ಯೋಗಿಗಳೇ ಅಲ್ಲಿನ ಸಿ.ಇ.ಓ ಗಳ ಸಂಪತ್ತಿನ ಮೂಲ ಅಲ್ಲವೇ ..?'
ಜೀವನ್ "ಎಸ್ ಲಕ್ಷ್ಮಿ ಥ್ಯಾಂಕ್ಸ್ ! ಐ ಕ್ನೋ ವೈಭವ್ ಪೆರ್ಸೋನಲಿ ವೆರಿ ವೆಲ್ ! ಹೇ ಇಸ್ ಫ್ರೊಂ ಮೈ ನೇಟಿವ್"
"ಥಾಟ್ಸ್ ಟೂ ಗುಡ್, ಇನ್ನು ನೀವಿಬ್ಬರು ಈ ಮೊಡ್ಯುಲ್ ನ ಜವಾಬ್ದಾರಿ ಹೊರಬೇಕು ಈಗ ಮೂರು ಜನರ ಬಿಲ್ಲಿಂಗ್ ಇದೆ ಅದು ಆರಕ್ಕೆ ಏರಬೇಕು ಇನ್ನು ಹದಿನೈದು ದಿನದಲ್ಲಿ !"ಎನ್ನುತ್ತಾ ಆ ಕಿಷ್ಕಿಂದ ಆಫೀಸ್ ನಲ್ಲಿದ್ದ ತನ ಪ್ರಾಜೆಕ್ಟ್ ಮೆನೇಜೆರ್ ರೂಂ ನ ಕಡೆಗೆ ತಿರುಗಿದರು ಲಕ್ಷ್ಮೀನಾರಾಯಣ್.
ಅವರು ಆಚೆ ನಡೆಯುತಿದ್ದಂತೆ ಜೀವನ್ ನನ್ನಲ್ಲಿ "ವೈಭು ಬಾ ಪ್ರಾಜೆಕ್ಟ್ ಬಗ್ಗೆ ಡಿಸ್ಕುಸ್ ಮಾಡೋಣ"
ನಾನು "ಸರಿ, ನಾನು ನಿನ್ನ ಡೆಸ್ಕ್ ಗೆ ಬರ್ತೇನೆ"
"ಅ ಕಪ್ ಆಫ್ ಕಾಫಿ ಜೊತೆ ಮಾತಾಡೋಣ !!"
"ಸರಿ" ಎನ್ನುತ್ತಾ ಸೀಟ್ ಇಂದ ಎದ್ದೆ ಅವನು "ಸಿಸ್ಟಮ್ ಲೋಕ್ ಮಾಡು ಇದು ನಿನ್ನ ಮೊದಲ ಪಾಠ " ಆಲ್ಟ್ ಎಲ್ ಒತ್ತಿದ.
ಎರಡು ಕಪ್ನಲ್ಲಿ ಕಾಫಿ ಹಿಡಿದು ಜೀವನ್ ನನ್ನ ಎದುರು ಬಂದು ಕುಳಿತ, ಇನ್ನೂ ಚೆನ್ನೈ ನ ಟ್ರೇನಿಂಗ ರೂಂನ ಗುಂಗಲ್ಲಿದ್ದ ನನಗೆ ಪುಣೆಯ ಈ ಕಿಷ್ಕಿಂದ ಪರಿಸರ ಅಷ್ಟೇನೂ ಹಿಡಿಸಿರಲಿಲ್ಲ.
"ವೈಭು , ನೀನು ತುಂಬಾ ಲುಕ್ಕಿ ಕಣೋ, ಟ್ರೇನಿಂಗ ಮುಗಿದು ಇಲ್ಲಿ ಜೋಇನ್ ಆಗಿ ಬರೇ ೨ ದಿನದಲ್ಲಿ ನಿನಗೆ ಪ್ರಾಜೆಕ್ಟ್ ಎಲೋಕೆಟ್ ಆಗಿದೆ, ನಾನು ಟ್ರೇನಿಂಗ ಮುಗಿದು ಮೂರು ತಿಂಗಳು ಇವರ ಇನಿಶಿಯೇಟಿವ್, ಬೆಂಚ್, ಬೊಜ್ಜ ಹೇಳಿ ದೂಡಿದ್ದೆ"
"ಹುಂ, ನಿನ್ನ ಹೆಲ್ಪ್ ಇದ್ರೆ ನನ್ನ ಗ್ರೌತು ಒಳ್ಳೆ ರೀತಿಯಲ್ಲಿ ಆಗಬಹುದು, ಅದಕ್ಕಾಗಿಯೇ ನಾನು ನಿನ್ನ ಮೊಡ್ಯುಲ್ ಸ್ಪೆಷಲ್ ಸ್ಕಿಲ್ಲ್ಸ್ ನಲ್ಲಿ ಇದ್ದರೂ ಅದನ್ನು ಸೇರಲು ಒಪ್ಪಿದ್ದು"
"ಸ್ಪೆಷಲ್ ಸ್ಕಿಲ್ಸ್ ! ಅದನ್ನೇಕೆ ನೀನು ಟೀಕಿಸ್ತಿದ್ದಿಯಾ..? ನೋಡು ಈಗ ನಾನು ಇಲ್ಲಿ ನನ್ನ ಐಡೆಂಟಿಟಿ ಕ್ರಿಯೇಟ್ ಮಾಡಲು ನಂಗೆ ಈ ಸ್ಪೆಷಲ್ ಸ್ಕಿಲ್ಲೇ ಕೈ ಹಿಡಿದದ್ದು, .ನೆಟ್, ಜಾವ ಹೇಳಿ ಕುಳಿತಿದ್ದರೆ ಇನ್ನು ಬೆಂಚ್ ನಲ್ಲಿ ಕೊಳಿ ಬೇಕಿತ್ತು"
"ನಿನ್ ಲುಕ್ ಚೆನ್ನಾಗಿತ್ತು, ನೀನು ಗೆದ್ದಿ"ನಾನೆಂದೆ.
ಜೀವನ್ "ಏನಿಲ್ಲಾ, ಬರಿ ನಿಂಗೆ ನಿನ್ನ ದಾರಿ ಮಾಡ್ಬೇಕಿರುತ್ತೆ, ಎದುರು ಬಂದವರನ್ನು ಹಿಂದೆ ತಳ್ಳಿ ನೀನು ಮುಂದೆ ಹೋಗ್ಬೇಕು ಅಷ್ಟೇ,ಅದು ಬಿಟ್ಟು ಹಿಂದೆ ಬಂದವರ ಕಾಲಿಂದ ತುಳಿದು ಕೊಳ್ಳಬಾರದು, ನೋಡು ನಿನಗೆ ಸಿಂಪಲ್ ಲಾಜಿಕ್ ಹೇಳ್ತೇನೆ, ನಾನು ಪುಣೆ ಜೋಯಿನ್ ಆದ ಹೊಸತರಲ್ಲಿ ಈ ಮೊಡ್ಯುಲ್ ಅನ್ನು ಅಮಿತ್ ದೇಶಪಾಂಡೆ ಅನ್ನುವ ೫ ವರುಷ ಸೇನಿಯರ್ ಟೆಕ್ಕಿ ನಡೆಸುತಿದ್ದ, ಮೊದಲಿಗೆ ಅವನಿಂದ ಏನು ಈ ಮೊಡ್ಯುಲ್ ಎಂಬುದನ್ನು ತಿಳಿದುಕ್ಕೊಂಡೆ, ಅವನ ಲೂಪ್ ಹೊಲ್ಸ್ ಏನೇನು ಎಂದು ತಿಳಿದುಕ್ಕೊಂಡೆ, ಮುಂದಿನ ದಿನಗಳಲ್ಲಿ ನಾನು ಆ ಲೂಪ್ ಹೊಲ್ಸ್ ಗಳನ್ನೇ ನನ್ನ ಗೆಲುವಿನ ತೋರಣ ಕಟ್ಟಲು ಉಪಯೋಗಿಸಿಕ್ಕೊಂಡೆ, ಬರೇ ಐದು ತಿಂಗಳಲ್ಲಿ ಅವನನ್ನು ಮೀರಿಸುವ ಡೆವೆಲೋಪರ್ ಆದೆ, ಕ್ಲೈಂಟ್ ಗಳನ್ನೂ ಡೈರೆಕ್ಟ್ ಹೆಂಡಲ್ ಮಾಡಲು ಕಲಿತೆ, ಅಲ್ಲಿಂದ ಶುರುವಾಯಿತು ನೋಡು ನನ್ನ ಒಳ್ಳೆ ದಿನ... ಇಷ್ಟೇ ಗುಟ್ಟು"
"ನೀನೆನ್ನುವುದು, ನಾನೂ ನಿನ್ನನ್ನು ದಿಟ್ಚ್ ಮಾಡಬೇಕು ಅಂತನಾ..?"
"ಆ ಸೀನ್ ನಿನ್ನಲ್ಲಿಲ್ಲಾಪ್ಪಾ.. ನೀನಿನ್ನೂ ಸಣ್ಣವ, ಅದಕ್ಕಾಗಿಯೇ ಈ ಲಾಜಿಕ್ ಹೇಳಿದ್ದು, ಪೊಲಿಟಿಕ್ಸ್ ಸಲ್ಪ ಗೊತ್ತಿರ ಬೇಕು, ಆ ತೆಲೆಂತ್ ನಿನ್ನಲ್ಲಿಲ್ಲಾ.."
"ಇಲ್ಲ ಜೀವನ್ ಸುಮ್ನೆ ತಮಾಷೆಗೆ ಹೇಳಿದಷ್ಟೇ, ನೀನೆ ಗುರು ನನಗೆ, ಗುರುವಿಗೆ ಸಮನಾದ ಶಿಷ್ಯ ನಾದರೆ ಸಾಕು, ಆತನನ್ನು ಮೀರಿಸುವ ಛಲ ನನ್ನಲ್ಲಿಲ್ಲ"
"ಹಮ್, ಸರಿ ಒಟ್ಟಿಗೆ ಕೆಲಸ ಮಾಡುವ ಕ್ರೆಡಿಟ್ ಏನಿದ್ರೂ ಇಬ್ಬರೂ ಹಂಚಿಕ್ಕೊಳುವ"
"ಓಕೆ , ಅದು ಸರಿ ಆದ್ರೆ ಲಕ್ಷಿಮಿನಾರಾಯನ್ ಹೇಳಿದರಲ್ಲ ಮೂರು ಜನರ ಬಿಲ್ಲಿಂಗ್ ಅನ್ನು ಆರು ಮಾಡಬೇಕು ಹೇಳಿ .. ಸಾದ್ಯಾನಾ ಅದು..?"
"ಯಾಕೆ ಸಾದ್ಯ ಇಲ್ಲ ಖಂಡಿತವಾಗಿ ಸಾದ್ಯವಿದೆ"
"ಅಂದ್ರೆ ನನಗಿನ್ನೂ ನಾಲ್ಕು ಕೊಂಪಿಟಿಟರ್ ಬರ್ತಾರೆ ಅಂತಾಯ್ತು"
"ಫಿಸಿಕಲ್ ಆಗಿ ಯಾರು ನಿಂಗೆ ಕೊಂಪಿಟಿಟರ್ ಇಲ್ಲ, ಬರಿ ಬಿಲ್ಲಿಂಗ್ ಅಲ್ಲಿ ಅಷ್ಟೇ"
"ಅಂದ್ರೆ ..?"
"ಮಂಗಾ, ಇದೆ ಅರ್ಥ ಆಗಿಲ್ಲ ನಿಂಗೆ ಇನ್ನು ನೀನು ನನಗೆ ಹೇಗೆ ಡಿಟ್ಚ್ ಮಾಡ್ತೀಯ..?"
"ನಿನ್ ಯಾವ ಟರ್ಮು ನಂಗೆ ಅರ್ಥ ಅಗಲಪ್ಪಾ.. ಆಫ್ಟ್ರೋಲ್ ನಾನು ಬರಿ ಬಿ.ಇ ..ನೀನು ಐ.ಐ.ಟಿ, ನಿನ್ನಲ್ಲಿ ಮನೆಜಿಂಗ್ ಸ್ಕಿಲ್ ಬಂದಿರಬಹುದು ನಿನ್ನ ಡಿಗ್ರಿಯಿಂದ, ನಾನಿನ್ನು ಕಲಿಬೇಕು ಅಷ್ಟೇ..!"
"ಹೇಳ್ತೇನೆ ಕೇಳು.. ಈ ಪ್ರಾಜೆಕ್ಟ್ ನಡೆಸೋದು ನಾನೊಬ್ಬನೇ, ಆದ್ರೆ ಲಕ್ಷ್ಮಿ ಇದರ ಪ್ರಾಜೆಕ್ಟ್ ಮೆನೇಜೆರ್, ಫಿಸಿಕಲಿ ಅವರು ಇದರಲ್ಲಿ ಇನ್ವೊಲ್ವ್ ಆಗಲ್ಲ, ಆದ್ರೆ ಬಿಲ್ಲಿಂಗಲ್ಲಿ ಅವರ ಹೆಸರಿರುತ್ತೆ"
"ಹೇಗೋ ಸಾದ್ಯ ನೀನು ಎಲ್ಲ ಕೆಲಸ ಮಾಡಿ ಅವರ ಹೊಟ್ಟೆ ತುಂಬಿಸೋದು..?"
"ಕೆಲಸ ಮಾಡದೆ ಸಂಬಳ ತಿನ್ಲಿಕ್ಕೆ ಅಂತಲೇ ಈ ಮೇನೇಜ್ಮೆಂಟ್ ಲೆವೆಲ್ ನವರು ಇರೋದು "
"ಕಾಮಿಡಿ ಒಳ್ಳೆ ಮಾಡ್ತಿ ನೀನು.. ಮತ್ತೆ ಆ ಮೂರನೇ ವ್ಯಕ್ತಿ..?"
"ಅಮಿತ್ ದೇಶಪಾಂಡೆ ಅಂದೆನಲ್ಲ ಅವನೇ ಆ ಮೂರನೇ ವ್ಯಕ್ತಿ"
"ಅವ ನಿನ್ನ ದಾರಿಯಿಂದ ದೂರ ಹೋದ ಅಂದೆ, ಮತ್ತೆ ಇಲ್ಲಿ ಹೇಗೆ ಬಂದ..?"
"ಬರಿ, ಬಿಲ್ಲಿಂಗ್ನಲ್ಲೋ.. ಅವನಿಗೆ ಕೆಲಸ ಮಾಡುವುದು ಬೇಕಿರಲಿಲ್ಲ, ಅವನದು ನಿನ್ನಂತೆ ಸ್ಪೆಷಲ್ ಸ್ಕಿಲ್ ಮೇಲೆ ತಾತ್ಸಾರದ ಭಾವನೆ ಇತ್ತು, ಬೇರೆ ಕೋರ್ ಪ್ರಾಜೆಕ್ಟ್ ಗೆ ಟ್ರೈ ಮಾಡ್ತಿದ್ದ, ಸರಿ ಸಮಯಕ್ಕೆ ನಾನು ಮೊಡ್ಯುಲ್ ಗೆ ಬಂದೆ, ಜವಾಬ್ದಾರಿ ನಂಗೆ ಕೊಟ್ಟ, ಅವ ಇನ್ನೊಂದಕ್ಕೆ ಹೊರಟು ಹೋದ, ನನ್ನ ಲೈನ್ ಕ್ಲಿಯರ್ ಆಯಿತು, ಕ್ಲೈಂಟ್ ಬಿಲ್ಲಿಂಗ್ ನಲ್ಲಿ ನನ್ನ ಹೆಸರು ಬಂತು, ಅವನೂ ಇದ್ದ"
"ಮತ್ತೆ ..? ಇಬ್ಬರ ಕೆಲಸ ನೀನು ಮಾಡ್ಬೇಕು ಆಲ್ವಾ ..?"
"ಇಲ್ಲ, ಬರುವ ಕೆಲಸ ಒಬ್ಬಂದೆ, ಆದ್ರೆ ಎಸ್ಟಿಮೇಶನ್ ಕೊಡುವ ಸಮಯದಲ್ಲಿ ಡಬ್ಬಲ್ ಕೊಟ್ರೆ ಆಯಿತು"
"ಕ್ಲೈಂಟ್ ಬೊಬ್ಬೆ ಹಾಕಲ್ವಾ..?"
"ಅದಕ್ಕೆ, ಹೇಳಿದಪ್ಪಾ ಯಾವಾಗಲು ಸ್ಪೆಷಲ್ ಸ್ಕಿಲ್ ಸ್ಪೆಷಲ್ ಹೇಳಿ!! ಇಲ್ಲಿ ಯಾರಿಗೂ ಯಾವುದರ ಬಗ್ಗೆ ಮಾಹಿತಿ ಇರಲ್ಲ, ನಾವು ೧೦ ಗಂಟೆ ಹಿಡಿಯುತ್ತೆ ಅಂದ್ರೂ ನಂಬ ಬೇಕು ೧೦ ದಿನ ಅಂದ್ರೂ ನಂಬಬೇಕು ಆ ಬಿಳಿ ಕ್ಲೈಂಟ್ಗಳು; ಅದೇ ಕೋರ್ ಸಬ್ಜೆಕ್ಟ್ ಆದ್ರೆ ಅವರಿಗೆ ಅಲ್ಪ ಸಲ್ಪ ಗೊತ್ತಿರುತ್ತೆ, ಮತ್ತು ಕೆಲಸಕ್ಕೆ ಪೈಪೋಟಿನೂ ಇರುತ್ತೆ, ಅಲ್ಲಿ ಅವರು ಏನು ಹೇಳ್ತಾರೆ ಹಾಗೆ ನಾವು ನಡಿಬೇಕಾಗುತ್ತೆ, ಇಲ್ಲಾಂದ್ರೆ ಪ್ರಾಜೆಕ್ಟು ಹೋಗುತ್ತೆ, ರೆವೆನ್ಯುನೂ ನಿಲ್ಲುತ್ತೆ."
"ಇದರಿಂದ ನಿನಗೇನು ಲಾಭ..?"
"ಕಂಪೆನಿಗೆ ನಾವು ಚಿನ್ನದ ಮೊಟ್ಟೆ ಇಡುವ ಕೋಳಿ, ಬೇಕಾದ ಸತ್ಕಾರ್ ಕೊಡ್ತಾರೆ. ಇನ್ನೇನು ಬೇಕು"
"ತುಂಬಾ ಕಲ್ತು ಬಿಟ್ಟಿದ್ದೀಯಾ ಒಂದು ವರ್ಷದಲ್ಲಿ !! ಇಬ್ಬರು ಸೇರಿ ಟೋಪಿ ಹಾಕುವ ಕೆಲಸ ಶುರು ಮಾಡುವ .. ಆದ್ರೆ ನಿಜವಾಗಲು ಇಬ್ಬರ ಕೆಲಸ ಬರುತ್ತಾ ಇನ್ನು ಹದಿನೈದು ದಿನದಲ್ಲಿ ...?"
"ಬರುತ್ತದೆ, ಅದಕ್ಕಾಗಿಯೇ ಅಲ್ಲ ನಾನು ಇನ್ನೊಬ್ಬ ರಿಸೋರ್ಸ್ ಬೇಕು ಹೇಳಿ ಲಕ್ಷ್ಮಿ ಸರ್ ಗೆ ರೆಕ್ವೈರ್ಮೆಂಟ್ ಕೊಟ್ಟಿದ್ದು, ಅಷ್ಟರಲ್ಲಿ ನೀನು ರೆಡಿ ಆಗು"
ಹೀಗೆ ಶುರುವಾದ ಜೀವನ್ ನೊಂದಿಗಿನ ವ್ಯವಹಾರ ಒಂದು ತಿಂಗಳಿಂದ ನಡಿಯುತಿತ್ತು. ಅವ ಕೊಟ್ಟ ಡಾಕ್ಯುಮೆಂಟ್ಸ್ ಗಳನೆಲ್ಲ ಓದಿ ನನಗೆ ತಯಾರು ಮಾಡಲು ಹೆಚ್ಚು ಸಮಯ ಹಿಡಿಯಲಿಲ್ಲ, ಲಕ್ಷ್ಮಿ ಸರ್ ಹೇಳಿದಂತೆ ೧೫ ದಿನದಿಂದ ಬಿಲ್ಲಿಂಗ್ ನಲ್ಲಿದ್ದೆ. ಕೆಲಸ ಮಾಡುತಿದ್ದದ್ದು ಇಬ್ಬರು, ಆದರೆ ೪ ಜನರ ಬಿಲ್ಲಿಂಗ್ Dream - Tech ನ ಬೊಕ್ಕಸ ತುಂಬಿಸುತಿತ್ತು.
ಮೇಲಿನ ಸಭಾ ಕಾರ್ಯಕ್ರಮ ಮುಗಿಸಿ ಕೆಳಗೆ ಬರುವಾಗ ಲಕ್ಷ್ಮಿ ಸರ್ ನಡುವಲ್ಲಿ ಸಿಕ್ಕಿದರು "ವೈಭವ್ ಪ್ರೊಗ್ರಾಮ್ ಚೆನ್ನಾಗಿ ನಡೆಸಿಕ್ಕೊಟ್ಟೆ , ಇಟ್ ವಿಲ್ ಎಡ್ ಪಾಯಿಂಟ್ಸ್ ಟು ಯುವರ್ ಅಪ್ರೈಸಲ್ !" ಅಂದರು.
ನಾನು "ಯು ವೆಲ್ಕಮ್ ಸರ್ "
"ನೀನು ಪ್ರಾಜೆಕ್ಟ್ ನಲ್ಲೂ ಒಳ್ಳೆ ಕೆಲಸ ಮಾಡುತ್ತಿ ಅಂತ ಜೀವನ್ ಅನ್ನುತಿದ್ದ, ಗುಡ್ ಗೋಯಿಂಗ್ ... " ಅಂದರು.
"ಎಸ್, ಇನ್ನು ಸದ್ಯದಲ್ಲೇ ಬಿಲ್ಲಿಂಗ್ ಅನ್ನು ಆರಕ್ಕೆ ಏರಿಸಬಹುದು !!!" ಅಂದೆ.
ಅದಕ್ಕವರು "ತುಂಬಾ ಕಲ್ತಿದ್ದಿಯಾ !!!" ಎನ್ನುತ್ತಾ ನಗೆ ಬಿಟ್ಟರು.
ಅಷ್ಟರಲ್ಲೇ ಪ್ರತ್ಯಕ್ಷ ಆದ ಜೀವನ್ "ಏನು ಸರ್ ನನ್ನ ಶಿಷ್ಯನಿಗೆ ಟಾರ್ಚರ್ ಕೊಡ್ತಾ ಇದ್ದೀರಿ..?" ಅಂದ.
ಅವರು "ಇಲ್ಲ, ಅವನನ್ನು ಅಟ್ಟಕ್ಕೆರಿಸುತಿದ್ದೆ, ಅವನು ಚಿನ್ನದ ಮೊಟ್ಟೆ ಇಡುವ ಕೋಳಿ ಅಗ್ತಿದ್ದಾನೆ" ಎನ್ನುವಷ್ಟರಲ್ಲಿ ಅವರನ್ನು ಸೆಂಟರ್ ಹೆಡ್ ಮಹೆಂದೆರ್ ಮೆಹ್ತಾ ಕರೆದರು. ನಾವಿಬ್ಬರು ಕೆಳಗಿಳಿದು ಲಿಫ್ಟ್ ಕಡೆಗೆ ಹೋಗಲು ಆಗಲೇ ಅಲ್ಲಿ ಒಳಗಿನ ನಲವತ್ತು ಮಂದಿ ಜಮಾಯಿಸಿದ್ದರು.
ಜೀವನ್ "ಬಾ ನಡೆದೇ ಹೋಗೋಣ" ಅಂದ.
ನಾನು ಸರಿ ಎಂದು ಅವನನ್ನು ಹಿಂಬಾಲಿಸಿದೆ ಅವನು "ಚೆನ್ನಾಗಿ ಕಾಣ್ತಿದ್ದಿಯಾ, ಎಲ್ಲ ELTP ಫಿದಾ ನಿನ್ಮೇಲೆ .."
"ಸಾಕು ಸಾಕು ಅಟ್ಟಕ್ಕೆರಿಸಿದ್ದು, ಇನ್ನು ಗಾಳಿ ಹೆಚ್ಚಾದರೆ ನಾನು ಮೇಲೆ ಹೋಗುವೆ, ಆ ಕ್ರಿಸ್ ಹೇಳಿದ ಮೆನ್ಯುಲೈಫ್ ಪ್ರಾಜೆಕ್ಟ್ ಗೆ ಡೆಡ್ ಲೈನ್ ಯಾವಾಗ ಫೈನಲ್ ಮಾಡ್ಕೊಂಡಿ ..?" ಎನ್ನುತ್ತಾ ಅವನ ಮಾತನ್ನು ಬೇರೆ ದಿಕ್ಕಿಗೆ ತಿರುಗಿಸಲು ಪ್ರಯತ್ನಿಸಿದೆ.
ಅವನು "ಕೆಲಸದ ಮಾತು ಡೆಸ್ಕ್ನಲ್ಲಿರ ಬೇಕಾದ್ರೆ, ಹೊರಗೆ ಅದರ ಬಗ್ಗೆ ಮಾತಾಡ್ಬಾರದು !! ಇಲ್ಲಿ ಪೆರ್ಸನಲ್ ಲೈಫ್ , ಅಲ್ಲಿ ಪ್ರೋಫ್ಫೆಶನಲ್ ಲೈಫ್ !!"
"ಸರಿ ಗುರುವೇ .."
"ಯಾರೋ ಅದು ಇವತ್ತಿನ ಬರ್ತ್ಡೇ ಗರ್ಲ್ ..? ನಾನು ಮಿಸ್ ಮಾಡ್ಕೊಂಡೆ , ಫ್ಲೆಕ್ಸಿ ಟೈಮಿಂಗ್ ನ ಗುಂಗಲ್ಲೇ ಎದಿದ್ದೆ, ಮತ್ತೆ ನೆನಪಾಯ್ತು ಇವತ್ತು ಹೊಸ ಜೇನುಗಳು ಪುಣೆಗೆ ಲಗ್ಗೆ ಇಡ್ತಾರೆ ಹೇಳಿ , ತಯಾರಾಗಿ ಓಡಿ ಬರುವಷ್ಟರಲ್ಲಿ ಆ ರಾಣಿ ಜೇನಿನ ಇಂಟರ್ವ್ಯೂ ಮುಗಿದಿತ್ತು " ಅಂದ ತುಸು ನಿರಾಸೆ ಇಂದ.
"ಪ್ರೀತೀನಾ ..?ಅವಳು ನಮ್ಮ ಕೊಲ್ಲೆಜ್"
"ಮಂಗಳೂರು ಹುಡ್ಗೀನಾ ...? ಸಿಕ್ಕ ಚಾನ್ಸ್ ಬಿಡಬಾರದು !! ಅವಳು ಬೇರೆಯವರೊಡನೆ ಸೆಟ್ ಮಾಡ್ಕೊಳ್ಳುವ ಮೊದಲು ನಾನು ಸೆಟ್ ಮಾಡ್ಕೊಂಡು ಬಿಡಬೇಕು"
"ಗುರೂ ಅವಳದು ಅಲ್ರೆಡಿ ಸೆಟ್ ಆಗಿದೆ ! ಎರಡು ವರ್ಷ ಮುಗ್ದಿದೆ "
"ಅಯ್ಯೋ !! ಒಂದು ಹುಡುಗಿ ಇಷ್ಟ ಆದಳು ಅಂದು ಒಳಗೊಳಗೇ ಖುಷಿ ಪದುವಷ್ಟರಲ್ಲಿ ಅವಳು ಇನ್ನೂ ಹಲವರ ಇಷ್ಟ ಆಗಿರ್ತಾಳೆ !!!"
"ಅವಳನ್ನು ಬಿಟ್ಟು ಬಿಡು; ಬೇರೆ ಯಾರಾದ್ರು ಸಿಗಬಹುದು ನಿನಗೆ, ಐ.ಐ.ಟಿ , ೬'೨" ಅಂದ್ರೆ ಯಾರೂ ಬೀಳ್ತಾರೆ !!!"
"ಆಕೃತಿ ಹೇಗೋ ..? ತಮಿಳಿಯನ್ ಆದ್ರೂ ಪರವಾಗಿಲ್ಲ !"
"ಗುರೂ, ಸ್ವಲ್ಪ ಸ್ವತಂತ್ರ ಕೊಟ್ರೆ ನೀನು ನನ್ನ ಬುಡಕ್ಕೆ ಬರ್ತಿಯಲ್ಲ ..?"
"ನಿಮ್ದಿಬ್ಬರ್ದ್ದೂ ಸೆಟ್ಟ...?"
"ಸೆಟ್ಟು ಇಲ್ಲ ಗೆಟ್ಟೂ ಇಲ್ಲ.. ಸುಮ್ನೆ ಇರ್ತೀಯ ಸಲ್ಪಾ ...?"
"ಓಕೆ , ಬಿಟ್ಟು ಬಿಟ್ನಪ್ಪಾ ನಿಮ್ಮಿಬ್ಬರನ್ನು ನಿಮ್ ಪಾಡಿಗೆ"
ಅಷ್ಟರಲ್ಲಿ ಇಬ್ಬರು P2 ತಲುಪಿದೆವು ಜೀವನ್ "ಅ ಕಪ್ ಆಫ್ ಕಾಫಿ ?"
"ಬೇಡವೂ .. ಆ ರೆಕ್ವೈರ್ಮೆಂಟ್ ಡಾಕ್ಯುಮೆಂಟ್ ನೋಡ್ಬೇಕು, ಇನ್ನೂ ನೋಡಿಲ್ಲ !!"
"ಓಕೆ ನಿನಗೆ ಕಾಫಿ ಬೇಡ ಅಂದ್ರೆ ನಂಗೂ ಬೇಡ"
ಆಕೃತಿ ತನ್ನ ತಮಿಳಿಯನ್ ಪೋಷಾಕು ಬಿಚ್ಚಿಟ್ಟು, ವಾಶ್ ರೂಮಿನಿಂದ ಹೊರಬರುತ್ತಾ ನಡುವಲ್ಲಿ ನಮಗೆ ಎದುರಾದಳು, ಅವಳಿಗೆ ಒಂದು ನಗೆ ಬಿಟ್ಟು ಜೀವನ್ ಅನ್ನು ಹಿಂಬಾಲಿಸಿದೆ.
ಅವಳು "ವೈಭು , ಅ ಕಪ್ ಆಫ್ ಕಾಫಿ ...?"
ನಾನು ತಿರುಗಿ "ಶೂರ್ .."
ಜೀವನ್ "ಆ ರೆಕ್ವೈರ್ಮೆಂಟ್ ...?"
ನಾನು "ಆರಾಮ್ಸೆ ನೋಡಿದ್ರೆ ಆಯಿತು, ಇನ್ನೂ ಡೆಡ್ಲೈನ್ ಕೊಟ್ಟಿಲ್ಲ ಆ ಕ್ರಿಸ್, ನಿಂದೇನು ನಡುವಲ್ಲಿ ಅವಸರ ...?"
ನನ್ನ ರೆಕ್ವೈರ್ ಮೆಂಟ್ ಆಕೃತಿ ಆಗಿದ್ದಳು, ಈ ಮೆನ್ಯುಲೈಫ್ ರೆಕ್ವೈರ್ಮೆಂಟ್ ಹಿಡ್ಕೊಂಡು ಏನ್ ಮಾಡ್ಲಿ ..?
ಅ ಕಪ್ ಆಫ್ ಕಾಫಿ ; ಒಂದು ಸಿಪ್ ಪ್ರೀತಿಯೊಂದಿಗೆ , ಮತ್ತೊಂದು ಜೀವನದೊಂದಿಗೆ ....
ಪ್ರೀತಿಯ ನಡುವಲ್ಲಿ ಪ್ರಾಜೆಕ್ಟ್ ಎಂದು ಹೊಡ್ಕೊಳ್ಳುವ ಜೀವನ್ ಗೆ ಏನು ಕೆಲಸ ನಿರಂತರ ಹೀರುವ ಸಿಪ್ಗಳಲ್ಲಿ...??
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧೭
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೧೭ by makara
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧೭
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧೭
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೧೭ by manju787
ಉ: ಅ ಕಪ್ ಓಫ್ ಕಾಫಿ ... ಸಿಪ್ - ೧೭