ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ, ಮಾರಿಯೋ ಮಿರಾಂಡ ಇನ್ನಿಲ್ಲ !
ಭಾರತದ ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಮಾರಿಯೋ ಮಿರಾಂಡ ರವಿವಾರ, ೧೧, ಡಿಸೆಂಬರ್, ೨೦೧೧ ರ ಬೆಳಿಗ್ಯೆ ಗೋವದಲ್ಲಿ ನಿಧನರಾದರು. ೮೫ ವರ್ಷ ಪ್ರಾಯದ ಪದ್ಮಭೂಷಣ, ಪದ್ಮಶ್ರೀ ಪುರಸ್ಕೃತ, ಮಿರಾಂಡ, ಸುಮಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ತಮ್ಮ ಪೂರ್ವಿಕರ ಮನೆಯಲ್ಲಿ ನಿಧನರಾದರು.
ಗೋವಾದ ನಿವಾಸಿಯಾಗಿದ್ದ ಅವರು, ಕನ್ನಡಿಗರಿಗೆ ಚಿರಪರಿಚಿತರು. ಪತ್ನಿ ಹಬೀಬಾ, ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಾಯಿಲೆಯ ಕಾರಣದಿಂದ ಅವರು ತಮ್ಮ ವೃತ್ತಿಯನ್ನು ಸ್ಥಗಿತಗೊಳಿಸಿದ್ದರು. ಅವರು, ಮಿಸ್ ಫೋನಿಸ್ಕಾ, ರಜನಿ ನಿಂಬೂಪಾನಿ, ಬಂಡಲ್ ದಾಸ್ ಗಾಡ್ಬೊಲೆ, ನಪೋಲಿಯನ್, ಪಾತ್ರಗಳಿಗೆ ಸಚಿತ್ರ ಒದಗಿಸಿದ್ದರು. ಮುಂಬೈನ ಹಲವಾರು ಪತ್ರಿಕೆಗಳಿಗೆ ವ್ಯಂಗ್ಯ ಚಿತ್ರ ಒದಗಿಸಿದ್ದರು. (ಬೆಹ್ರಾಂ ಕಂಟ್ರಾಕ್ಟರ್ (ಬಿಸಿ ಬೀ) ಲೇಖನಗಳಿಗೆ ಚಿತ್ರ ಒದಗಿಸುತ್ತಿದ್ದರು.
ಸಮಸ್ತ ಸಂಪದೀಯರ ಪರವಾಗಿ ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಕೊಂಡಿ :
Rating
Comments
ಉ: ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ, ಮಾರಿಯೋ ಮಿರಾಂಡ ಇನ್ನಿಲ್ಲ !