ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
ಸಂಬಂಧಿಕರೊಬ್ಬರ 'ಮಧ್ವೆಗ್' ಹೋಗಬೇಕಾಗಿ ಬಂದಾಗ 'ಅಲಂಕಾರಕ್ಕೆಂದು' ಕೋಣೆ ಹೊಕ್ಕವಳು 'ಸ್ಸುಮಾರು' ಹೊತ್ತಾದ ಮೇಲೆಬಂದಾಗ, ಹೊರ ಬಂದ ವಳನ್ನ -ಅವಳ ಅಂದವನ್ನ ನೋಡಿ ನಾ 'ನಮ್ಮದೇ ಮಧ್ವೆ' ಅನ್ನೋ ಹಾಗ್ ಸಂಭ್ರಮ ಪಟ್ಟಿದೆ(ಅಲಂಕಾರಕ್ಕೆಅವಳು ಅಸ್ಟು ಸಮಯ ವ್ಯರ್ಥ ಮಾಡಿದರೂ ಅದು ಅವಳ ಅಂದವನ್ನ ಬಹು ಹೆಚ್ಹ್ಸಿಸಿತ್ತು:))
ನನ್ನನ್ನ ನೋಡಿದವಳೇ ಸ್ಸಾರೀ ಕಣ್ರೀ 'ಸ್ವಲ್ಪ' ಹೊತ್ತಾಯ್ತು, ಏನ್ ಮಾಡೋದು? 'ಅಸ್ಟೊಂದು' ಸೀರೆಗಲಿದ್ದವಲ್ಲ, ಅದ್ರಲ್ಲಿ'ಚೆನ್ನಗಿದ್ದೊಂದನ್ನ' ಆರಿಸಿ ಉಟ್ಟು ಓಡಾಡಿ ನೋಡಿ ಸಮ್ಧಾನವಾಗಿ ಇದ್ನಾ ಹಾಕೊಂಡೆ, ಅದ್ಕೊಪ್ಪುವ ಕುಪ್ಪಸ, ಚಪ್ಪಲಿ,ಆಭರಣ,ಓಲೆ,ಸರ,ವಾಚು, ಬಳೆ, ಹುಡ್ಕಿ ಹಾಕೊಬೇಕಿತ್ತಲ್ಲ ಅದ್ಕೆಅಂತ 'ಒಂಥರಾ ನಕ್ಕಳು'..ನನ್ಗೆ 'ಅಳತೆ ಮಾಡೋಕಾಗ್ದಸ್ತು' ಕೋಪಬರ್ತಿದ್ರೂ, ಅವಳ' ಆ ನಗೆ ನೋಡಿ 'ಕರಗಿ ನೀರಾಗಿ' ಸ್ಸರಿ-ಸ್ಸರಿ ನಡೀ ಹೋಗೋಣ ಇನ್ನು 'ಹತ್ತೇ' ನಿಮಿಷ ಸಮಯವಿರುವುದು 'ಆಟೋ' ಬೇರೇ ಹಿಡೀಬೇಕು.
ರ್ರೀ ರ್ರೀ ಇರ್ರಿ ಮಧುಮಗ-ಮಗಳಿಗೆ ಯಾವ್ ಗಿಫ್ಟ್ ಆದ್ರೆ ಚೆನ್ನ? ಅದ್ನ ಕೊಂಡ್ಕೊಬೇಕಲ್ಲ:)) ಹೌದಲ್ಲ ನಾ 'ಅದ್ನ' ಮರ್ತೆ ಬಿಟ್ಟಿದ್ದೆ, ಛೆ ಛೆಛೆ! ಮದ್ವೆಗ್ ಮುಂಚೆ ನನ್ನ ಬುದ್ಧಿಶಕ್ತಿ, ಮೆಮೊರಿ ಪವಾರ್ಗೆ ಎಸ್ಥೆಮ್ಮೆ ಪಡ್ತಿದ್ರು ನಮ್ಮ ಸ್ನೇಹಿತರು ಸಂಬಂಧಿಗಳು, ಈಗ 'ಮದ್ವೇಯಾದ್ಮೇಲೆ' ಬರೀ 'ಮರೆವು':: ಮದ್ವೆಗೂ-ಮರೆವಿಗೂ ಏನಯ್ಯ ಸಂಬಂಧ ಏನಿರ್ಬಹುದು ? ಮದ್ವೆ-ಹತ್ತೇ ನಿಮಿಷ ,ಆಟೋ ಎಲವೂಮರೆಯಾಗ್ ನನ್ನ ಮರೆವಿನ ಕಾರಣವನ್ನ ಹುಡ್ಕೊದ್ಕೆ ಹೊರಟ ನನ್ನ ಮನಸ್ಸನ ವಾಪಾಸ್ ಕರ್ತಂದು ನನ್ನವಳಿಗ್ ಹೇಳ್ದೆ, ಬ್ಬಾರೆಹೋಗೋಣ, ಗಿಫ್ಟ್ ಕೊಡೋದು, ಅವ್ರು ಅದ್ನ 'ಎತ್ತಿ ತಮ್ ಹಿಂದಕ್ಕೆ ಬಿಸಾಡೋದು' ಹಳೆ ಕಾಲಕ್ಕೆ ಹೋಯ್ತ…
ಈಗೇನಿದ್ರೂ 'ಕಾಸನ್ನ ಕವರ್ನಲ್ಲಿ' ಇಟ್ಟು ಅವ್ರ ಕೈಗೆ ಇಕ್ಕಿದ್ರೆ ಸ್ಸಾಕು ಸಖತ್ ಖುಷಿಯಾಗ್ತಾರೆ. ಒಹ್ ಪರವಾಗಿಲ್ಲವೇ 'ರಾಯರು' ತುಂಬಾ ತಲೆ ಓಡಿಸ್ತವ್ರೆ :)೦ ನನ್ನವಳ 'ವ್ಯಂಗವೋ-ಹೊಗಳಿಕೆಯೋ' ಅರ್ಥವಾಗದೆ ನಾ ಅವಳ ಕೈ ಹಿಡಿದುಕೊಂಡು 'ಪಾಪುವನ್ನ 'ತಾಯಿ ಕೈಗೊಪ್ಪಿಸಿ ಲಗುಬಗೆಯಿಂದ ಆಟೋ ಸ್ಟ್ಯಾಂಡ್ ನತ್ತ ಹೊರಟೆ.
ಆಟೋದವರ ಹತ್ತಿರ ಹೋಗಿ, ಎಲ್ಲದಕ್ಕಿಂತ ಮುಂದೆ -ಸಾಲಿನ ಮೊದಲಲ್ಲಿದ್ದ ಆಟೋ ಚಾಲಕನಿಗೆ ಕೇಳಿದೆ ಯೆಶ್ವನ್ತಪುರದ 'ಮುನಿಸ್ವಾಮಪ್ಪ ಕಲ್ಯಾಣ ಮಂಟಪಕ್ಕೆ' ಬರ್ತೀರ? ಒಮ್ಮೆ ನನ್ನನ್ನ ಮೇಲೆ ಕೆಳಗೆ ನೋಡಿ ನೋಡಿ ಸ್ವಾಮೀ ನಿಮ್ಗೆ ಗೊತ್ತು 'ಟಾಟ ಇನ್ಸ್ಟಿಟ್ಯೂಟ್' ಹತ್ರ ರಸ್ತೆ ಕೆಲಸ ನಡೀತಿದೆ, ಯೆಶ್ವನ್ತಪುರಕ್ಕೆ 'ಮಲ್ಲೇಶ್ವರಂ ೧೮ನೆ ೧೭ ನೆ ೧೬ ನೆ ಕ್ರಾಸ್ಸ್ ಸುತ್ತು' ಹಾಕೊಂಡ್ ಹೊಗ್ಬೆಕ್ ೧೫೦ ರುಪಾಯೀ ಆಗುತ್ತೆ.'ಆಗಿನಂತೆ' ಲೆಕ್ಖಾಚಾರ ಹಾಕಿದ್ರೆ ಬರೇ 'ಹತ್ತು ನಿಮಿಶದೊಳಗಡೆ ಮತ್ತು ೨೦ ರೂಪಾಯಿಯಲ್ಲಿ' ಹೋಗಬಹುದಾಗಿದ್ದ ಯೆಶ್ವನ್ತಪುರಕ್ಕೆ 'ಈ ರಸ್ತೆ ಕಾಮಗಾರಿ' ಅದೂ ಒಂದ್ವರ್ಷಾ ಆದರೂ ಮುಗಿಸದೆ ಇನ್ನೂ ಆಗೀತಲೆ ಇದ್ದಾರೆ 'ಅದ್ಯಾವಾಗ' ಮುಗಿಸ್ತಾರೋ? ಆದ್ರೆ ಸಧ್ಯಕ್ ಆ ಕಾಮಗಾರಿ 'ದೆಸೆಯಿಂದ' ನನ್ನ ಜೆಬಿಗ್ 'ಕತ್ತರಿ' ಬಿತ್ತು..
ನನ್ನವಳ ಮುಖ ನೋಡಿದೆ, ಅವಳು ನನಗೆ ಸುಮ್ಮನಿರ್ವಂತೆ ಹೇಳಿ, ಆಟೋದವನೊಡನೆ 'ವಾಗ್ಯುದ್ಧ' ಮಾಡಿ ಕೊನೆಗೆ ಅವನನ್ನೇ ದಬಾಯ್ಸಿ-ಬೆವರಿಳಿಸಿ ೫೦ ರೂಪಾಯಿಗೆ ಬರಲು ಅವನು ಒಪ್ಪಿಕೊಂಡ ಆದರೂ ಒಂದು 'ಕ್ಯಾತೆ' ತೆಗೆದ - ಮಧ್ಯದಲ್ಲಿ ಯಾರದ್ರ ಹತ್ತಿದರೆ ೫೦ತ್ತೆ ಕೊಡಿ, ಹತ್ತದಿದ್ದರೆ ೭೦ ಕೊಡಿ, ಉಹೂ ಅದಾಗೋಲ್ಲ ೫೦ತ್ತೆ ಕೊಡೋದು ನನ್ನವಳ ಮೊಂಡು ಹಠ(ನನಗೋ ಮುಹೂರ್ತ ಮೀರ್ ಹೋಗ್ತಿದೆ ಎನ್ನೋ ತಳಮಳ-ಊಟವೂ ತಪ್ಪಬಹುದು ಎನ್ನುವ ದುರಾಲೋಚನೆ:))
ಕೊನೆಗೆ ಆಟೋ ಚಾಲಕ ನಮ್ಮನ್ನ ಹೊತ್ತು ಕಲ್ಯಾಣ ಮಂಟಪ ತಲುಪಿಸಿದ. ಅವನ ಕೈಗೆ ೫೦ನ್ನು ಇಕ್ಕಿದಾಗ ಇಸ್ಕೊಂಡು ಒಮ್ಮೆ ನನ್ನನ್ನ 'ಕನಿಕರದಿಂದೆಮ್ಬಂತೆ' ನೋಡಿದಾಗ ನನಗೆ ವನ ಆ 'ದೃಷ್ಟಿಯ ತಾತ್ಪಾರ್ಯವೇನು' ಅಂತಾ ಗೊತಾಗಲಿಲ್ಲ.ಅವಸರದಿಂದ ಧ್ವಾರದತ್ತ ಹೋಗ್ತಿರ್ಬೇಕದ್ರೆ ಒಬ್ಬರು ತಡೆದು ಎಲ್ಲಿ ಮದ್ವೆ ಇನ್ವಿತಸನ್ ಕಾರ್ಡು ಅಂದ್ರು? ಅಯ್ಯೋ ಛೀ ಛೆ ತತ್! ಪ್ಚ್ ಅದ್ನ ತರೋಕ್ ಮರ್ತೆ ಹೋಯ್ತಲ್ಲ,ನನ್ನ ಪೇಚಾಟ-ಪರದಾಟ-ಪೆಚ್ಚು ಮುಖ ನೋಡ್ 'ಅವಂಗೆ' ಗೊತ್ತಾಯ್ತು ನಮ್ಮ ಹತ್ತಿರ ಮದ್ವೆ ಕಾರ್ಡ್ ಇಲ್ಲ:)) ನನ್ನನ್ನ ಪಕ್ಕಕ್ಕೆ ಬರಲು ಹೇಳಿ- ನೋಡಿ ಕಾರ್ಡ್ ಇಲ್ಲ ಅಂತಾ ಬೇಜಾರಾಗ್ಬೇಡಿ:)) ಒಂದು ೫೦ತ್ತೊ -ನೂರೋ ಇತ್ತ ತಳ್ಳಿ,
ಒಳಹೋಗಿ.. ನನ್ನ ಅವನ ಗುಸು-ಗುಸು-ಪಿಸು-ಪಿಸು - ನನ್ನವಳು ಹತ್ತಿರ ಬಂದು ಏನ್ರಿ ಅವ್ನಂತ್ರ ಮಾತು? ಕಾರ್ಡು ತಾನೇ ನನ್ನತ್ರ ಇದೆ ಬ್ಯಾಗಲಿ ,ಅನ್ತ ಕಾರ್ಡು ತೆಗೆದು ಅವನ ಕೈಗಿತ್ತಳು. ೫೦-೧೦೦ ಹಾಳಾಯ್ತು ,ಅಟ್ ಲೀಸ್ಟ್ 'ಹತ್ತರ ನೋಟು' ಸಿಗಬಹುದು ಅಂಕಡಿದ್ನೇನೋ ಪಾಪ ಬಡಪಾಯಿ:)) ನಾ ನನ್ನವಳೂ ಮುಸಿ ಮುಸಿ ನಗ್ತಾ ಒಳ ಹೊಕ್ಕರೆ ಏನಿದೆ ಅಲ್ಲಿ? ಮಾನ್ಗಲ್ಯಧಾರಣೆ ಮುಗಿದು ಬರೀ ಮಧುಮಗ-ಮಗಳು ಸುಸ್ತಾಗ್ ಕುಳಿತವ್ರೆ:)) ಉಳಿದವರು ಎಲ್ಲಿ? ಛೆ ಏನ್ ಪ್ರಶ್ನೆ ಕೇಳ್ತೀರಿ ಸ್ವಾಮೀ ಇಲ್ಲ್ಯಕಿರ್ತಾರೆ? ಅದೋ ಅಲ್ಲಿ ನೋಡಿ 'ಬೋಜನ ಶಾಲೆಯತ' ಅಲ್ಲಿ ಸಮಸ್ತ 'ಭಾರತದ ಜನಸಂಖೆಯ' ಪ್ರತಿನ್ದಿಧಿಗಳು ಇದ್ದಾರೆ:))
ಮಧುಮಗ-ನಮ್ಮನ್ನು ನೋಡಿ ಹೇಳ್ದ- ಮದು ಮಗಳಿಗೆ, ನೋಡು ಅವರನ್ನ ನೋಡಿದ್ರೆ ಅಡ್ರೆಸ್ಸು ಸಿಗದೇ ಈಗ ಬಂದಿದರ್ ಅನ್ಸುತ್ತೆ ಪಾಪ, ನಂಗಂತೂ ಸಧ್ಯಕ್ಕೆ ಊಟಕ್ಕೆ ನಿಡೋರಿಲ-ಕೊಡೋರಿಲ್ಲ ಎಲ್ರಿಗೂ ಅವರವರ 'ಹೊಟ್ಟೆ ಪಾಡಿಂದ್' ಚಿಂತೆ ಆಗಿದೆ, ಅವ್ರಿಗ್ ಹೇಳ್ಬಿಡೋಣ ಭೋಜನ ಶಾಲೆಗ್ ಹೋಗಿ ಅನ್ತ. ರ್ರೆ ರೀ ಇರ್ರಿರಿ ಅದ್ನ ಆಮೇಲ್ ಹೆಲ್ವ್ರಿ ಮೊದ್ಲು ಅವ್ರ 'ಕೈಲಿರೋ ಆ ಕವರ್' ನೋಡಿ ಅದು 'ಉಬ್ಬಿದ್' ನೋಡಿದ್ರೆ ಅಂದಾಜು '೫೦೦೦' ಆದರೂ ಇರ್ಬೇಕು ಅಲ್ಲವ? ಹ್ಹ-ಹ್ಹ ಅಂತ್ಯ ಕಿಸೀತ ನಮ್ಮನ್ನ ಹಾರ್ದಿಕ! ಸ್ವಾಗತ ಕೋರಿ ಕೈ ಕುಲುಕಿ ನಾ 'ಕೊಡ್ವದಕ್ಕೆ' ಮುಂದಾಗೆ ತಾವೇ ಆ ಕವರನ್ನ ತೆಗೆದ್ಕೊಂದು ಹೇಳಿದ್ರು ಅಲ್ಲಿದೆ ಭೋಜನ ಶಾಲೆ ಮರೀದೆ!! ಊಟ ಮಾಡ್ಕೊಂಡೆ ಹೋಗ್ಬೇಕು.. ಅವರಿಬ್ಬರನ್ನ ಆಶೀರ್ವದಿಸಿ ಭೋಜನ ಶಾಲೆಯತ್ತ ಹೋದೆವು.
ಅಲ್ಲಿ ಅದಾಗಲೇ ಹನುಮನ 'ಲಂಕೆ ಸುತ್ತಿ ಹೆಚ್ಚದ್ ಬಾಲಕ್ಕಿಂತ' ದೊಡ್ಡದಾಗಿದ್ದ 'ತಟ್ಟೆ' ಕೈಲಿ ಹಿಡಿಕೊಂಡು ಅವ್ರು 'ತಟ್ಟೆ ಹಿಡ್ಕಂದವ್ರೋ ಇಲ್ಲ 'ಹೊಟ್ಟೆ ನೆ ' ಕೈಲಿ ಹಿಡ್ಕಂದವ್ರೋ ಅನ್ನೋ ಹಾಗ್ ನಿಂತಿದ್ದವ್ರನ್ನ ನೋಡ್ ಹೇಳ್ದೆ, ನೋಡೇ ಇಗಲ್ಲ-ಇವತಲ್ಲ-ನಾಳೆಯೂ ನಮಗೆ ಇಲ್ಲಿ 'ಊಟ' ಸಿಕ್ಕುವುದಿಲ್ಲ ಬಾ ಮನೆಗ್ ಹೋಗೋಣ ಇಲ್ಲ ಯಾವ್ದರ ಹೋಟೆಲ್ಗೆ ಹೋಗ್ ಊಟ ಮಾಡ್ ಮನೆ ಗ ಹೋಗೋಣ.. ನನ್ನದು ಈ ಚಿಂತೆ ಆದ್ರೆ ಅವಳ ಚಿಂತೆಯೇ ಬೇರೇ:))
ಏನದು? ಇಸ್ಟೆಲ್ಲಾ 'ಸ್ವರ್ಣ ಸರ್ವಾಭಾರಣ' ಅಲಂಕಾರೆಯಾಗ್ ಬಂದರೂ ಅದ್ನ ಮೆಚ್ಹೊಕ್ -ಹೊಗಳೋಕ್ ಹೊಂನಶೂಲಕ್ಕೆ ಏರ್ಸೋಕ್ ಒಬ್ರೂ 'ದೆಸೆಯಿಲ್ಲವಲ್ಲ' ಅನ್ನುವುದು:)) ಅಲ್ಲಿ ತಟೆ ಇಡ್ಕಂಡ್ ನಿಂತವರನ್ನ ನೋಡಿದಾಗ ನನ್ಗೆ ಅನ್ಸ್ತು ಅವ್ರ ಗಮನ ಸೆಳೆಯಬೇಕಂದರೆ 'ಬಂಗಾರದ ಚೈನನ್ನೇ' ಅವರತ್ತ ಎಸಿಬೇಕೆನೋ:)) ಬಾರೆ ಹೋಗೋಣ, ಯಾರ್ಗೆ ಮೆಚ್ಕೆಯಾದ್ರೆನು? ಆಗದಿದ್ರೆನು? ನನಗಂತೂ ನೀ ತುಂಬಾ ಲಕ್ಷಣವಾಗ್-ಅನ್ದವಾಗ್-ಮುದ್ದು-ಮುದ್ದಾಗ್ ಕಾಣ್ತಿದಿಯ.. ಆದರೂ ನನ್ನವಳ ರಾಗ, ನನ್ಗೊತ್ತಯ್ತು ' ಶಂಖದಿಂದ ಬಂದ್ರೇನೆ ತೀರ್ಥ' ಅವಳನ್ನ 'ಹೆನ್ಮಕ್ಲೆ' ಹೊಗಳ ಬೆಕ್ ಆಗ್ಲೇ ಸಮಾಧಾನ ಆದ್ರೆ ಈಗ ಯಾರ್ಗೂ ಅದ್ಕೆ ಪುರಸೊತ್ತಿಲ್ಲ:))
ಇನ್ನೇನು ಮಾಡುವುದು? ವಾಪಸ್ಸು ಬಂದು ಆಟೋದಲ್ಲಿ ಹೊಗೋದ ಇಲ್ಲ ಬಸ್ಸಲ್ಲೇ ಹೊಗುವುದ? ನನ್ನವಳೋ ಬಸ್ಸಲ್ಲೇ ಹೋಗೋಣ ಹೇಗೂ ಮಲ್ಲೇಶ್ವರಂ ಸರ್ಕಲ್ಲಿಗೆ ಹೋಗುತ್ತ್ತಲ್ಲ, ಸುಮ್ನೆ ಆಟೋಗ್ ಯಾಕೆ ದಂಡಕ್ಕೆ ಅಂದ್ಲು, ಆದರೂ ಸದಾ 'ತುಂಬು ಗರ್ಭಿಣಿಯಂತೆ' ಇರೋ ಆ ಬಸ್ಸುಗಳಲಿ ನಾವ್ ಹೋಗವ್ದು:)) ಸ್ಸರಿ ಮೊದ್ಲು ಆಟೋ ಕೇಳೋಣ ದರ ಜಾಸ್ತಿಯಾದ್ರೆ ಬಸ್ಸಿಗ್ ಹೋಗೋಣ ಅಂದೇ. ಆಟೋ ಸ್ಟಾಂಡಿಗೆ ಹೋಗ್ವಾಗ ಒಂದು ಆಟೋ ನಂಗ್ ಎದುರೆ ಬಂತು ಅವ್ನು ನಮ್ಮನ್ನ 'ಕ್ಯಾರೆ' ಅನ್ನದೆ ಹೊರಟಾಗ ನಾನೇ ಕೈ ಬೀಸಿ ತಡೆದು ನಿಲ್ಲಿಸಿ ಮಲ್ಲೇಶ್ವರಂಗೆ ಬರ್ತೀಯ ಅಂದೇ? ಇಲ್ಲ ನಾ 'ರಾಜಾಜಿನಗರಕ್ಕೆ' ಹೋಗ್ತಿದೀನ್, ಬರ್ತೀರಾ? ಅಂದ:))
ಹೀಗೂ ಉಂಟಾ? ಅನ್ತ ನಾ ಪೆಚ್ಹ್ಕಾಗ್ ಅವನ ಮುಖ ನೋಡ್ತಿರಲು, ನನ್ನವಳು 'ರಂಗಕ್ಕೆ' ಧುಮುಕಿದಳು, 'ಅಲ್ಲಾ ನಾವೊಗೋ ಕಡೆ ನೀವ್ ಬರಬೇಕ? ಇಲ್ಲ ನೀವೊಗೋ ಕಡೆ ನಾವ್ ಬರಬೇಕ'? ಅಂದ್ಲು ನೋಡಿ ನಾ ರಾಜಜಿನಗರ್ ಒಳಗಿಂದ ಮಲ್ಲೇಶ್ವರಕ್ಕೆ ಹೋಗ್ತೀನ್ ಬಂದ್ರೆ ಬನ್ನಿ ಇಲ್ದ್ರೆ ಇನ್ನೊಂದು ಆಟೋ ಹತ್ತಿ ಹೋಗಿ ಎಂದವನೇ ಗೇರ್ ಬದಲಿಸಿ ಸುಂಟರಗಾಳಿಯಂತೆ ಹೊರಟ ಹೋದ ಧೂಳೆಬ್ಬಿಸುತ್ತಾ:))
ಈ ಆಟೋ ಸಹವಾಸವೇ ಬೇಡ ಸಧ್ಯಕ್ 'ಬೀ ಎಂ ಟೀ ಸೀ' ಬಸ್ಸಲ್ಲೇ ಹೋದ್ರೆ ಆಯ್ತು ಅದೇ ನಮಗ ಸದಾ 'ಆಪತ್ ಬಾಂಧವ'. ಲೇ ಇವಳೇ ಆ ಒಡವೆ ಹುಷಾರು ಬಸ್ಸಲ್ಲಿ ನಿನ್ನ ಪಕ್ಕವೇ ಬಂದು ಮಗುವಿನೊಂದಿಗ್ ನಿಂತು ಸದ್ದಿಲದೆ ಸರ ಅಪಹರಿಸ್ತಾರೆ ಅಂದೇ, ಅವ್ಳು ನಿಮ್ಮದು ಬರೀ ಅನುಮಾನ-ಅಪಶಕುನದ ಮಾತೆ ಸರಿ.. ಈಗೇನು ಎಲ್ಲ ಒಡವೆ ಬಿಚ್ ಇತ್ಕೊಲ್ಲ್ಲ ಅಂದ್ಲು? ಬೇಡ ಬೇಡ ನೀ ಮುಂದೆ ಹೋಗ್ ನಿಂತ್ಕೋ ಸೀಟ್ ಸಿಕ್ರೆ ಕುಳಿತ್ಕೋ ನಾ ಹಿಂದೆ ಕೂರ್ತಿನ್ ಇಲ್ಲ ನಿಲ್ತೀನ್ ಅಂದೇ. ಅದ್ಕೆ ಅದ್ಯಾಕ್ ಹಂಗೆ ನಾವಿಬ್ರೂ 'ಒಟ್ಗೆ' ಕೂರ್ಬಹುದಲ್? ಕೂರಬಹುದು ಆದ್ರೆ 'ಪುರುಷರಿಗೆ ಮಹಿಳೆಯರಿಗೆ ಮತ್ತು ಪುರುಷ ಹಿರಿಯ ನಾಗರೀಕರಿಗೆ ಅಂತೆಲ್ಲ ಸೀಟುಗಳಿವೆ.
ಬೇಡ ಬೇಡ ನೀ ಮುಂದೆ ಹೋಗ್ ನಿಂತ್ಕೋ ಸೀಟ್ ಸಿಕ್ರೆ ಕುಳಿತ್ಕೋ ನಾ ಹಿಂದೆ ಕೂರ್ತಿನ್ ಇಲ್ಲ ನಿಲ್ತೀನ್ ಅಂದೇ.
ನಾ-ನೀ ಇನ್ನು ಹಿರಿಯ ನಾಗರೀಕರೋ ಆಗಿಲ್ಲ, ಇಬ್ರೂ ಮಹಿಳಾ ಸೀಟಲ್ಲಿ ಕೂತರೂ, ಪುರುಷರ ಸೀಟಲ್ಲಿ ಕೂತರೂ,ಹಿರಿಯ ನಾಗರೀಕ ಸೀಟಲ್ಲಿ ಕೂತರೂ, ಎಲ್ಲಾದ್ರೂ - ಯಾರಾರ ಬಂದು ಎಬ್ಬಿಸ್ತಾರೆ 'ನ್ಯಾಯ-ಅನ್ಯಾಯ' ಅನ್ತ ಕೂಗ್ತಾ. ನಂಗ್ ಆದ ಬೇಕಾ?
ಬಸ್ಸು ಹತ್ತಿ ಅವಳು ಮುಂದೆ ನಾನು ಹಿಂದೆ ಕೂತೆವು. ಬಸ್ಸು ಸ್ಟಾರ್ಟ್ ಆಗ್ ಕಂಡಕ್ಟರ್ ಬಂದು ಚೀಟಿ ಚೀಟಿ ಅಂದ(ನನ್ಗೆ ನಮ್ಮ ಹಳೆ ಪರೀಕ್ಷೆಯ ಚೀಟಿ ನೆನಪಿಗ್ ಬಂತು)) ನಾ ೫೦ರ ನೋಟು ತೆಗ್ದ್ ಅವ್ನ ಕೈಗಿತ್ತೆ ಅವ್ನು ಅದ್ನ 'ದುರ್ದಾನ' ತೆಗೆದ್ಕೊನ್ದವ್ನಂತೆ ನೋಡಿ ಚೇಂಜು ಬೇಕು ಸ್ಸಾರ್ ಅಂದ, ನಾ ಇಲ್ಲ ಎನ್ನಲು 'ಸೀಟಿ ಊದಿ ಗಾಡಿ ನಿಲ್ಲಿಸಿ' ಚೇಂಜ್ ಇದ್ರೆ ಗಾಡಿ ಹತ್ಬೇಕ್ ಇಲ್ಲಾಂದ ಇಲಾಂದ್ರೆ ಹತಲೆಬಾರ್ದು ಅಂದ:)೦
ನಾ ಪಿಚ್ ಆಗ್ ಈ ತರಹದ್ದು ಒಂದು 'ಅಂದಹಾ ಕಾನೂನು' ಉಂಟಾ ಅನ್ತ ಯೋಚ್ಸೋಕ್ ಶುರು ಹಚ್ಕೊಂಡೆ:)) ನಾ ನಾನವಳ ಕಡೆ ತೋರ್ಸಿ ಅವ್ಳು ಕೊಡ್ತಾಳೆ ಅನ್ನಲು ಕಂಡಕ್ಟರ್ ಅಲ್ಲಿಗೊಗ್ ಕಾಸು ಇಸ್ಕೊಂಡು ಟಿಕೆಟ್ ಕೊಟ್ಟ. ಹಾಗೂ ಹೀಗೂ ೧೦ ನಿಮಿಷದ ಪ್ರಯಾಣ ಮುಗ್ಸಿ ಚಿತ್ರ-ವಿಚಿತ್ರ ಅನುಭವಗಳೊಂದಿಗೆ ಮನೆ ತಲುಪಿ ಊಟ ಮಾಡಿ ಹಾಲಿಗೆ ಬಂದು ಟೀವಿ ನೋಡ್ತಾ ನಾ ಕುಳಿತೆ ಅವ್ಳು 'ಅದ್ಯರ್ಗೋ ವರುಷ -ದೋಣ್ನೆಗ್ ನಿಮಿಷ ನ್ನೂ ಅನ್ನೋ ಗಾದೆಗ್ ತಕ ಹಾಗ್ ಆಭರಣ-ಅಲಂಕಾರ ಕಳಚಿಟ್ ನಿರಾದಮ್ಬರಿಯಾಗ್ ನನ್ನ ಪಕ್ಕ ಬಂದು ಕುಳಿತಳು. ಅಲಂಕಾರಕ್ಕೆ ಅಸ್ತೊತ್ತು-ಆದ್ರೆ ಅದ್ನ ತೆಗ್ದಿದೋಕ್ ಇಸ್ಟೇ ಹೊತ್ತ? ಅರ್ಥವೇ ಆಗೋಲ್ಲ…
ವಿಶೇಷ ಸೂಚನೆ: ಈ ಬರಹ ಊಹೆ ಮಾಡ್ಕೊಂಡು ಬರೆದದ್ದು, ಇದರಲ್ಲಿ ಬರ್ವ ಪತ್ರಗಳು ಕಾಲ್ಪನಿಕ, ಅಕಾಸ್ಮಾತ್ ಆ ಪಾತ್ರಗಳಿಗೂ ಕೆಲ ಘಟನೆಗಳಿಗೂ ಸಾಮ್ಯತೆ ಕಂಡು ಬಂದರೆ ಅದು ಕಾಕತಾಳೀಯ ...
ಚಿತ್ರ ಸೌಜನ್ಯ: ಗೂಗಲ್ ಸರ್ಚ್..
Comments
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
In reply to ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ) by venkatb83
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
In reply to ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ) by sathishnasa
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
In reply to ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ) by ಸುಮ ನಾಡಿಗ್
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
In reply to ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ) by makara
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
In reply to ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ) by venkatb83
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)
In reply to ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ) by ಗಣೇಶ
ಉ: ಹೀಗ್ ಒಂದು ಮದುವೆಯೂ-ನಮ್ಮ ಪಜೀತಿಯೂ ...(ಹಾಸ್ಯ ಲೇಖನ)