ಹೆಸರಿಲ್ಲದ ಸಾಲುಗಳು

ಹೆಸರಿಲ್ಲದ ಸಾಲುಗಳು

ಕವನ


ನನ್ನದೆಲ್ಲವೂ
ನಿನ್ನದಾದ ಮೇಲೆ
ಕಳೆದುಕೊಳ್ಳುವುದೇನಿದೆ?...........
++++++++++++++++++++++++++++++

ಅವಳ
ನೆನ(ಪ)ದಲ್ಲಿ
ಸುಟ್ಟ
ಸಿಗರೇಟು
ಈಗ
ಕೆಮ್ಮಾಗಿ
ಸೇಡು
ತೀರಿಸಿಕೊಳ್ಳುತ್ತಿದೆ...................
++++++++++++++++++++++++

ಮತ್ತೆ ಮತ್ತೆ
ಮರುಕಳಿಸುವ
ನೆನಪುಗಳ
ಕತ್ತ
ಹಿಸುಕ ಹೋದಾಗಲೆಲ್ಲಾ
ಬೆತ್ತಲೆ
ಕೈಗಳು
ಅರಿವಿಲ್ಲದೇ
ಕಂಪಿಸಿವೆ
+++++++++++++++++

ನೀ
ಹೊತ್ತಿಸಿ ಹೋದ
ಮೊಂಬತ್ತಿಗಳು
ಕರಗಿ
ಬಹಳ
ದಿನಗಳಾಯ್ತು
ಈಗ
ಸುತ್ತಲೂ
ಮತ್ತದೇ
ಕತ್ತಲು,
ನನ್ನೆದೆಯಲಿ
ಬೆಳಗು!
+++++++++++++++++++

(ಇದಕ್ಕೊಂದು ಕ್ಷಮೆ ಇರಲಿ)

ಮನಸ
ಒಬ್ಬರಿಗೆ
ದೇಹ
ಒಬ್ಬರಿಗೆ
ಕೊಟ್ಟು
ನಿನ್ನೊಂದಿಗೆ
ಬದುಕಲು
ಸಾಧ್ಯವಿಲ್ಲ
ಎಂದಿದ್ದಳು,
ಮರುದಿನವೇ
ಗಂಡ
ಹೆಣವಾಗಿದ್ದ........!
++++++++++++++++++++++++

Comments