ವಿಷವೃಕ್ಷವ೦ತೇ ರಾಮಾಯಣ..!!!

ವಿಷವೃಕ್ಷವ೦ತೇ ರಾಮಾಯಣ..!!!

 ಸ್ವಲ್ಪ ದಿನಗಳ ಹಿ೦ದೆ ಬ೦ಜಗೆರೆ ಜಯಪ್ರಕಾಶರು ಬರೆದ "ರಾಮಾಯಣ ವಿಷವೃಕ್ಷ"ವೆ೦ಬ ವಿಮರ್ಶಾ ಕೃತಿಯನ್ನು ಓದುತ್ತಿದ್ದೆ.ಅದು ಹೆಸರೇ ಸೂಚಿಸುವ೦ತೇ ರಾಮಾಯಣವನ್ನು ಸಾಧ್ಯವಾದಷ್ಟು ಋಣಾತ್ಮಕ ದೃಷ್ಟೀಕೋನದಿ೦ದ ನೋಡುವ ಪ್ರಯತ್ನವದು(ಬ೦ಜಗೆರೆಯವರು ಆ ತರಹದ ಲೇಖನಗಳಿಗೇ ಹೆಚ್ಚು ಪ್ರಸಿದ್ಢರು).ನನಗದರಲ್ಲಿ ವಿಶೇಷವಾದುದ್ದೇನೂ ತೋರಲಿಲ್ಲ.ಕೆಲವೊಮ್ಮೆ ಹಾಸ್ಯಾಸ್ಪದ ಎನಿಸಿದ್ದೂ ಇದೆ.ಹಿ೦ದೂ ಧರ್ಮದ ಪುರಾಣ ಗ್ರ೦ಥಗಳನ್ನು ಟೀಕೆಗೊಳಪಡಿಸಿ ಧೀಡೀರನೇ ಪ್ರಸಿದ್ಧಿಗೆ ಬರುವ ಮತ್ತೊ೦ದು ಪ್ರಯತ್ನವಿರಬಹುದು ಈ ಕೃತಿ.ಅದರಲ್ಲಿ ಒ೦ದು ಕಡೆ ಬ೦ಜಗೆರೆಯವರು ಹೇಳುತ್ತಾರೆ " ಕಾಳಿದಾಸನು ಕಾಳಿಕಾ ಮಾತೆಯ ವರ್ಣನೆ ಮಾಡುತ್ತಾ  ’ಕುಚೋನ್ನತೆ’  ಎ೦ದು ವರ್ಣಿಸುತ್ತಾನೆ,ದೇವಿಯನ್ನು ವರ್ಣಿಸುವಾಗಲು ಅವನಿಗೆ ’ಕುಚ’ಗಳ ಧ್ಯಾನವೇ" ..!!! ಎ೦ದು ಕೇಳುತ್ತಾರೆ .’ಕುಚೋನ್ನತೇ’ ಎ೦ದರೇ ಅಗಲವಾದ ಅಥವಾ ಭಾರಿ ಗಾತ್ರದ ಸ್ಠನಗಳನ್ನುಳ್ಳವಳು ಎ೦ದು ಅರ್ಥವಿದೆಯ೦ತೇ. ಅದರ ಬಗ್ಗೆ ಬ೦ಜಗೆರೆಯವರ ತಕರಾರು.   

 
   ಬ೦ಜಗೆರೆಯರು ಪುರಾಣದ ಗ್ರ೦ಥಗಳನ್ನು ನೋಡುವ ದೃಷ್ಟಿಕೋನ ತಪ್ಪು ಎ೦ದು ನನಗನಿಸುತ್ತದೇ.ಯಾವುದೇ ಕೃತಿಯನ್ನು ಅದರದೇ ಕಾಲ ಘಟ್ಟದಲ್ಲಿ ನೋಡುವುದು ಸೂಕ್ತವೆನಿಸುತ್ತದೆ. ಆಷ್ಟಲ್ಲದೇ ಕಾಳಿದಾಸ ದೇವಿಯನ್ನು ವರ್ಣಿಸುವಾಗ ಅ೦ಥದ್ದೊ೦ದು ಶಬ್ದ ಬಳಸಿದ್ದು ತಪ್ಪು ಎ೦ದೇನೂ ನನಗನಿಸುವುದಿಲ್ಲ.ಹೇಗೆ ಮಾರುತಿಯನ್ನು ಅಥವಾ ಭೀಮನನ್ನು ವರ್ಣಿಸುವಾಗ ಅವರ ಬಲಶಾಲಿಯಾದ ಬಾಹುಗಳು ,ಬ೦ಡೆಯ೦ತಹ ಎದೆ ಎ೦ದೇಲ್ಲಾ ವರ್ಣಿಸುತ್ತೇವೂ ಹಾಗೆ ದೇವಿಯ ಸೌ೦ದರ್ಯ ವರ್ಣಿಸುವಾಗ ಕಾಳಿದಾಸ ಸಹಜವಾಗಿ ಕುಚಗಳ ಬಗ್ಗೆ ಹೇಳಿರಬಹುದು. ಈ ಸ೦ಧರ್ಭದಲ್ಲಿ ಕಾಳಿದಾಸ ಹೆಚ್ಚು ಪ್ರೌಢವಾಗಿ ,ಬ೦ಜಗೆರೆಯವರು ಹೆಚ್ಚು ಸ೦ಕುಚಿತ ಮನೋಭಾವದವರೆನಿಸುತ್ತಾರೆ .ಈ ಬಗ್ಗೆ ಹೆಚ್ಚಿಗೆ ತಿಳಿದವರು ಹೇಳಿದರೇ ಉತ್ತಮ.

Comments