ನಮ್ಮೊಂದಿಗಿದ್ದು ನಮ್ಮಂತಾಗದವರು
ಕವನ
ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು
ನಮ್ಮೊಂದಿಗಿದ್ದು ನಮ್ಮಂತಾಗದವರು
ಸಂದಿ ಗುಂದಿಯಲ್ಲಿ ಚಿಂದಿ ಗಿಂದಿ ಆಯ್ದು
ತಿಪ್ಪೆ ಗೊಂಡಿಯಲ್ಲಿ ಎಂಜಲನ್ನು ತಿಂದು
ದೊಡ್ಡ ದೊಡ್ಡ ಮೂಟೆ ಹೆಗಲಮೇಲೆ ಹೊತ್ತು
ಮಳೆ ಬಿಸಿಲಿನಲ್ಲಿ ಬೀದಿಯಲ್ಲಿ ನಿಂತು
ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು
ನಮ್ಮೊಂದಿಗಿದ್ದು ನಮ್ಮಂತಾಗದವರು||
ಸೂರ್ಯ ಹುಟ್ಟೋ ಮುಂಚೆ ಹಾಲು ಪ್ಯಾಕೆಟ್ ಹಾಕಿ
ದಿನವು ಸೈಕಲ್ ಹತ್ತಿ ಪೇಪರನ್ನು ಹಾಕಿ
ಅಂಗಡಿ ಮನೆಯಲ್ಲಿ ಕಸ ಮುಸುರೆ ಮಾಡಿ
ಗ್ಯಾರೇಜ್ ಹೋಟಲ್ ನಲ್ಲಿ ಕೂಲಿ ನಾಲಿ ಮಾಡಿ
ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು
ನಮ್ಮೊಂದಿಗಿದ್ದು ನಮ್ಮಂತಾಗದವರು||
ಆರ್. ಆರ್. ಅಶಾಪುರ್
Comments
ಉ: ನಮ್ಮೊಂದಿಗಿದ್ದು ನಮ್ಮಂತಾಗದವರು
In reply to ಉ: ನಮ್ಮೊಂದಿಗಿದ್ದು ನಮ್ಮಂತಾಗದವರು by Kodlu
ಉ: ನಮ್ಮೊಂದಿಗಿದ್ದು ನಮ್ಮಂತಾಗದವರು
In reply to ಉ: ನಮ್ಮೊಂದಿಗಿದ್ದು ನಮ್ಮಂತಾಗದವರು by Kodlu
ಉ: ನಮ್ಮೊಂದಿಗಿದ್ದು ನಮ್ಮಂತಾಗದವರು
In reply to ಉ: ನಮ್ಮೊಂದಿಗಿದ್ದು ನಮ್ಮಂತಾಗದವರು by dayanandac
ಉ: ನಮ್ಮೊಂದಿಗಿದ್ದು ನಮ್ಮಂತಾಗದವರು
In reply to ಉ: ನಮ್ಮೊಂದಿಗಿದ್ದು ನಮ್ಮಂತಾಗದವರು by rakeshashapur
ಉ: ನಮ್ಮೊಂದಿಗಿದ್ದು ನಮ್ಮಂತಾಗದವರು