ನಮ್ಮ ಮಧುರೈ ಮೀನಾಕ್ಷಿ ದೇವಸ್ಥಾನದ ಪ್ರವಾಸ !
ಬಹಳ ದಿನಗಳಿಂದ, ವರ್ಷಗಳಿಂದ, ರಾಮೇಶ್ವರದ ದೇವಸ್ಥಾನಕ್ಕೆ ಭೇಟಿನೀಡುವ ಪ್ರಯತ್ನ ಸಾಗಿತ್ತು. ಅದೇಕೊ ಆ ದಿನ ಬರಲೇ ಇಲ್ಲ. ಆದರೆ ಮೊನ್ನೆ ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತ ಹೋದಾಗ, ಅನಾಯಾಸವಾಗಿ ಮಧುರೈ, ರಾಮೇಶ್ವರ ಮತ್ತು ಕನ್ಯಾಕುಮಾರಿ ದೇವಾಲಯಗಳ ದರ್ಶನ ಭಾಗ್ಯ ಲಭಿಸಿತು. ಯಾವುದಕ್ಕೂ ದೈವ ಬಲ ಒಲಿದುಬರಬೇಕು. ಈ ರೀತಿ ನಮಗೆ ದರ್ಶನ ಭಾಗ್ಯ ಒದಗಿಬಂತು. ಈಗ ನಾವು ಕಾಶಿವಿಶ್ವನಾಥನ ದರ್ಶನ ಮಾಡಬೇಕು..ತಮಿಳುನಾಡಿನ ದೇವಸ್ಥಾನಗಳು ಬೃಹತ್ ಪ್ರಮಾನದವು. ಕಲೆಯೂ ಸಾಕಷ್ಟಿದೆ. ಆದರೆ ನಮ್ಮ ಕರ್ನಾಟಕದ ದೇವಾಲಯಗಳಲ್ಲಿ ಕಲೆ ಬಹಳ ಪ್ರಮುಖವಾದದ್ದು. ಹಂಪೆಯ ವಿರೂಪಾಕ್ಷ ಸ್ವಾಮಿಯನ್ನು ಬಿಟ್ಟು ಬೇರೆ ದೇವಾಲಯಗಳು ಅಷ್ಟೇನೂ ಗಾತ್ರದಲ್ಲಿ ಹೆಚ್ಚಿಲ್ಲ. ಬೇಲೂರೂ ಚೆನ್ನ ಕೇಶವ ಸ್ವಾಮಿ ದೇವಾಲಯದ ಕೆತ್ತನೆ ಕೆಲಸಗಳು ಅತಿ ಮಹತ್ವದವು.
ಮಧುರೈ ಮತ್ತು ಬೇರೆ ಯಾತ್ರಾಸ್ಥಳಗಳಲ್ಲಿ ಒಳ್ಳೆಯ ಊಟ, ವಸತಿಗಳು ಸಿಗುತ್ತವೆ. ಒಟ್ಟಿನಲ್ಲಿ ಇನ್ನೂ ವಯಸ್ಸಿರುವಾಗಲೇ ಇಂತಹ ಯಾತ್ರೆಗಳನ್ನು ಮಾಡುವುದು ಲೇಸು.

ಮಧುರೈನಲ್ಲಿ ಮಾಜಿ ರಾಷ್ಟ್ರಾಧ್ಯಕ್ಷ ಜನಾಬ್ ಎ.ಪಿ.ಜೆ.ಅಬ್ದುಲ್ ಕಲಾಮ್ ಸಾಹೇಬರ ಸೋದರನ ಕಪ್ಪೆಚಿಪ್ಪುಗಳ ಅಂಗಡಿಗೆ ಓಗಿ ಕೆಲವು ಸುಂದರ ಹಾರಗಳನ್ನು ಕೊಂಡೆವು. ಕನ್ಯಾಕುಮಾರಿ ಕಡಲ ತೀರ ಅತ್ಯಂತ ಸುಂದರ ಹಾಗೂ ಶುಭ್ರವಾಗಿದ್ದು, ಸ್ನಾನಮಾಡಲು ಅತಿ ಉತ್ತಮವಾದ ಜಾಗವಾಗಿತ್ತು.

ಕನ್ಯಾಕುಮಾರಿ ಊರಿನಲ್ಲಿ ಬೇಸಾಯ ಇಲ್ಲವಂತೆ. ಸೀತಾ ಮಾತೆ ಭೂಮಿಯಿಂದ ಉದ್ಭವಿಸಿ ಬಮ್ದಳಲ್ಲವೇ ? ಜನ ಬಹಳ ಶ್ರದ್ಧಾಳುಗಳು, ಮತ್ತು ಮಹಾ ದೈವಭಕ್ತರು. ತಮಿಳುನಾಡಿನುದ್ದಕ್ಕು ಅದೆಷ್ಟು ದೇವಸ್ಥಾನಗಳಿವೆಯೋ ದೇವರೆಬಲ್ಲ. ಮುಂಬೈನ ಕೊಳಕು ಕಡಲ ತಾಣ ಕಂಡ ನಮಗೆ ಇದು ಸ್ವರ್ಗವೇ ಆಗಿತ್ತು ! ಪ್ರಕೃತಿದೇವಿಯ ಪ್ರಿಯತಾಣವಾಗಿತ್ತು. ಇದೇ ಸ್ಥಳದಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿನ ಪುಟ್ಟ ಗುಡ್ಡ ಬಹಳ ಸೊಗಸಾದ ಸ್ಥಳ. ಅಲ್ಲಿ ಸ್ವಾಮಿಜಿಯವರ ಪದತಲದಲ್ಲಿ ಕುಳಿತು ಧ್ಯಾನ ಮಾಡಿದಾಗ ಆಗುವ ಸಮಾಧಾನ ಆನಂದ, ನೆಮ್ಮದಿ ವರ್ಣಿಸಲು ಅಸಾಧ್ಯ !
ಬೆಳಿಗ್ಯೆ ಸೂರ್ಯೋದಯದ ದೃಶ್ಯ ಮನಮೋಹಕ. ನಮಗೆ ಅದು ಸಾಧ್ಯವಾಯಿತೇನೋ ನಿಜ, ಆದರೆ, ಪಾಪಿ ಸುಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಇನ್ನು ನಾನ್ನುಡಿ ನನಗೆ ಮಾಡಿರಬಹುದೇನೋ. ಬಸ್ಸಿನಲ್ಲಿ ನಮಗೆ ಕೆಳಗೆ ಇಳಿಯಿರಿ ಎಂದರು. ನಾನು ಎಲ್ಲಿ ಹೋದರೂ ಕ್ಯಾಮರ ತೆಗೆದುಕೊಳ್ಳದೆ ಹೋಗುವನಲ್ಲ. ತಿಳಿಯದೆ ಕೆಳಗೆ ಇಳಿದೆ. ರಸ್ತೆ ಕ್ರಾಸ್ ಮಾಡಿದೆ. ಆಗ ತಿಳಿಯಿತು, ಸೂರ್ಯೋದಯವನ್ನು ವಿಕ್ಷಿಸಲು ನಾವು ಹೋಗುತ್ತಿದ್ದೇವೆ, ಎನ್ನುವ ವಿಷಯ. ಪುನಃ ವಾಪಸ್ ರಸ್ತೆ ಕ್ರಾಸ್ ಮಾಡಿ ನಮ್ಮ ವ್ಯಾನ್ ಇದೆಯೇನೋ ಅಂತ ನೋಡಿದರೆ ಅದೆಲ್ಲಿದೆ ? ಮಾಯವಾಗಿತ್ತು.
ನಿಜ ಹೇಳಬೇಕೆಂದರೆ, ಇಂತಹ ಸುಂದರ ಸೀನರಿಗಳನ್ನು ಮತ್ತು ದೇವಸ್ಥಾನಗಳನ್ನು ನೋಡಿ ಚಿತ್ರತೆಗೆಯುವ ಆಶೆ ಪ್ರಬಲವಾಗಿತ್ತು. ೫ ಸಾವಿರ ರೂಪಾಯಿ ಖರ್ಚುಮಾಡಿ ಹೊಸಕ್ಯಾಮರ ಕೊಂಡಿದ್ದೆ. ಆದರೆ ಆದದ್ದೇನು ?
* ನನ್ನ ಬಳಿ ಒಂದು ಕ್ಯಾಮರ ಇತ್ತು. ಅದರ ಕಾರ್ಡ್ ನಿಂದ ೩೫೦ ಚಿತ್ರಗಳನ್ನು ತೆಗೆಯಬಹುದಿತ್ತು. ಆದರೆ ಹೆಚ್ಚು ಚಿತ್ರಗಳನ್ನೂ ತೆಗೆಯಲು ನಾನು ಮತ್ತೊಂದನ್ನು ಖರೀದಿಸಿದ್ದು. ಹೆಚ್ಹಿನ ಜಿ.ಬೀ. ಕಾರ್ಡ್ ಹಾಕಿಸಿದ್ದರೆ ಸಾಕಾಗಿತ್ತು. ಅಷ್ಟು ತಿಳುವಳಿಕೆ ಇರಲಿಲ್ಲ.
Rating
Comments
ಉ: ನಮ್ಮ ಮಧುರೈ ಮೀನಾಕ್ಷಿ ದೇವಸ್ಥಾನದ ಪ್ರವಾಸ !
In reply to ಉ: ನಮ್ಮ ಮಧುರೈ ಮೀನಾಕ್ಷಿ ದೇವಸ್ಥಾನದ ಪ್ರವಾಸ ! by makara
ಉ: ನಮ್ಮ ಮಧುರೈ ಮೀನಾಕ್ಷಿ ದೇವಸ್ಥಾನದ ಪ್ರವಾಸ !