ಪುಸ್ತಕ ಪ್ರೇಮಿ?
ಈ ಕಂಪ್ಯೂಟರ್ ಯುಗದವರಿಗೆ ನಮ್ಮ ಕಾಲದವರ(ಮುದುಕರ?) ಕಷ್ಟ ಗೊತ್ತಾಗಲಿಕ್ಕಿಲ್ಲ. ಹಿಂದೆ ಏನಾದರೂ ವಿಷಯ ತಿಳಕೊಳ್ಳಲು ಮನೆಯಲ್ಲಿರುವ ಅಥವಾ ಲೈಬ್ರೇರಿಯ ಪುಸ್ತಕಗಳನ್ನು ಹುಡುಕಾಡಬೇಕಿತ್ತು. ಲೈಬ್ರೇರಿಗೆ ಹೋಗಿ ಪುಸ್ತಕಗಳನ್ನು ಹುಡುಕಿ, ಖಾಲಿ ಕುರ್ಚಿ ಸರಿಮಾಡಿ, ಬ್ಯಾಲೆನ್ಸ್ ಮಾಡಿಕೊಂಡು ಕುಳಿತು, ಪುಸ್ತಕ ತೆರೆದು ನಮಗೆ ಬೇಕಾದ ಪುಟ ಹುಡುಕಿದರೆ ಆ ಹಾಳೆನೇ ನಾಪತ್ತೆ.
ಮನೆಯಲ್ಲಿದ್ದ ಪುಸ್ತಕಗಳಲ್ಲಿ ನಾವು ಹುಡುಕುತ್ತಿದ್ದ ವಿಷಯಗಳನ್ನೇ ಯಾರೋ ತಿಂದು ಬಿಟ್ಟಿರುತ್ತಿದ್ದರು. ಲೈಬ್ರೇರಿಯಲ್ಲಿ ಸೀಝರ್ ಫಿಶ್ಗಳು ಹಾಳೆಗಳನ್ನು ಕತ್ತರಿಸಿ ಎಗರಿಸಿದರೆ, ಮನೆಯಲ್ಲಿ ಸಿಲ್ವರ್ ಫಿಶ್ಗಳು ಹಾಳೆಗಳನ್ನು ಸೊಗಸಾಗಿ ಕತ್ತ್ರಿಸಿ ತಿಂದು ಮುಗಿಸಿರುತ್ತವೆ.
ಕಳೆದ ಜನ್ಮದಲ್ಲಿ ಓದಿ,ಓದಿ ಅರಗಿಸಿಕೊಳ್ಳಲಾಗದಿದ್ದವರು ಈ ಜನ್ಮದಲ್ಲಿ ಸಿಲ್ವರ್ ಫಿಶ್ ಆಗಿದ್ದಾರೋ ಏನೋ? ಟಿ.ವಿ., ಕಂಪ್ಯೂಟರ್ ನಿಂದಾಗಿ ಇವೆರಡು ಫಿಶ್ಗಳು ವಿನಾಶದಂಚಿಗೆ ತಲುಪಿದ್ದಾವೆ !! ಹೊಸ ಮನೆ ಗೃಹ ಪ್ರವೇಶಕ್ಕೆ ಹೋದಾಗ ಟಿ.ವಿ., ಫ್ರಿಡ್ಜ್, ಕಂಪ್ಯೂಟರ್, ಗ್ಯಾಸ್, ಬಟ್ಟೆಬರೆ, ದೇವರು.. .. ಎಲ್ಲಾ ಇಡಲು ವ್ಯವಸ್ಥೆ ಮಾಡಿರುವುದನ್ನು ಕರೆದು,ಕರೆದು,ಕೊರೆದು ತೋರಿಸುವರು. ಇದು ನೋಡಿ ಪುಸ್ತಕಗಳನ್ನು ಇಡಲು ಸ್ಥಳ ಎಂದು ಒಬ್ಬ.. ..ಊಹೂಂ.,
ಪುಸ್ತಕಗಳೇ ಸಿಗದಿದ್ದಲ್ಲಿ ಸಿಲ್ವರ್ ಫಿಶ್ಗಳ ಗತಿ? ಬರೀ ಅರ್ಧದಿಂದ ಹೆಚ್ಚೆಂದರೆ ಒಂದು ಇಂಚಿನವರೆಗೆ ಬೆಳೆಯುವ ಈ ಪುಟಾಣಿಯ ‘ಉಳಿವಿ’ಗಾಗಿ ಇದರ ಬಗ್ಗೆ ಓದಿದಾಗ, ಸಿಕ್ಕ ಕೆಲ ವಿಷಯಗಳು-
ಇವುಗಳಿಗೆ ಪುಸ್ತಕ ಮಾತ್ರ ಆಹಾರವಲ್ಲ. ತಲೆಹೊಟ್ಟು, ಅಂಟು, ಫೋಟೋ,ಕೂದಲು,ಹತ್ತಿ, ಸಿಲ್ಕ್ಸೀರೆ..ಏನೂ ಸಿಗದಿದ್ದರೆ ಚರ್ಮದ ಚೀಲ,ಚಪ್ಪಲನ್ನೂ ತಿನ್ನುವುದು.
ಆಹಾರವಿಲ್ಲದೇ ಒಂದು ವರ್ಷ ಬದುಕಬಲ್ಲವಂತೆ!(ಇವುಗಳ ಮೆನು ನೋಡಿದರೆ ಅಂತಹ ಸಮಯ ಬರಲಿಕ್ಕಿಲ್ಲ ಬಿಡಿ.)
೨ ರಿಂದ ೮ ವರ್ಷದ ಜೀವಿತಾವಧಿಯಲ್ಲಿ ಒಂದು ಹೆಣ್ಣು ಅಂದಾಜು ೧೦೦ ಮೊಟ್ಟೆಗಳನ್ನಿಡಬಹುದು. ಚುರುಕಾಗಿ ಓಡಾಡುವ ಇದು ರಾತ್ರಿ ಸಂಚಾರಿಯಾದದ್ದರಿಂದ ಸಾಮಾನ್ಯವಾಗಿ ಕಾಣ ಸಿಗದು. ಇವುಗಳ ನಿವಾರಣೆಗೆ ಟೇಪ್ ಸಹಿತ ಒದ್ದೆ ಬಟ್ಟೆ ಅವು ಓಡಾಡುವ ಸ್ಥಳದಲ್ಲಿ ಇಡಬೇಕು. ಅಥವಾ ನ್ಯಾಫ್ತಲೀನ್ ಬಾಲ್ಗಳನ್ನು ಇಟ್ಟರೂ ಸಾಕು. ಆದರೆ ಪಾಪ ಪುಸ್ತಕ ಪ್ರೇಮಿಯನ್ನು ಕೊಲ್ಲುವುದು ಸರಿಯೇ?
Comments
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by Shreekar
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by makara
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by Shreekar
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by makara
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by Shreekar
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by makara
ಉ: ಪುಸ್ತಕ ಪ್ರೇಮಿ?
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by Shreekar
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by ಗಣೇಶ
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by venkatb83
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by Shreekar
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by venkatb83
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by ಗಣೇಶ
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by makara
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by Shreekar
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by ಗಣೇಶ
ಉ: ಪುಸ್ತಕ ಪ್ರೇಮಿ?
ಉ: ಪುಸ್ತಕ ಪ್ರೇಮಿ?
In reply to ಉ: ಪುಸ್ತಕ ಪ್ರೇಮಿ? by padma.A
ಉ: ಪುಸ್ತಕ ಪ್ರೇಮಿ?