ನೀನೊಮ್ಮೆ ನಕ್ಕಾಗ..!!
ನೀನೊಮ್ಮೆ ನಕ್ಕಾಗ...,
ಸುರಿದಾವು ಇಳೆಗೆ ಹನಿ ಹನಿ
ಮುತ್ತುಗಳು..!
ಸೇರಿವೆ ಹಳಗಳು,ನದಿಗಳ..
ನದಿಗಳು,ಸಮುದ್ರಗಳ...
ನೀನೊಮ್ಮೆ ನಕ್ಕಾಗ...
ಹಗಲ ನೊರೆ ಹರಡಿದೆ ಆಕಾಶದಗಲ.
ಕೊಚ್ಫ್ಚಿಕೊಂಡು ಹೋಗಿದೆ
ದ್ವೇಶ-ಅಸೂಯೆಗಳ...!
ಜಗವೆಲ್ಲಾ ಹಸನಾಗಿ,
ಕನಸೊಂದರ ಬಾಳುವೆಗೆ
ರಂಗು ಬಂದಿದೆ...!
ದುಗುಡ ದುಮ್ಮಾನ
ಗಾಳಿಗೆ ಹಾರಿದೆ...!!
ನೀನೊಮ್ಮೆ ನಕ್ಕಾಗ...
ಆಡಿವೆ ಬಂಜರೆದೆಗಳಲಿ
ನವ ಜೀವಿಗಳು...
ಮುಗುಳ್ನಗೆ ತಳೆದಿದೆ
ಚಿಗುರಿನ ಕೆಂಪು...
ಅರಳಿದ ಹೂಗಳು ತಳೆದಿವೆ
ನವಿರು ಹೊಸ ಕಂಪು...!!!
Comments
ಉ: ನೀನೊಮ್ಮೆ ನಕ್ಕಾಗ..!!
ಉ: ನೀನೊಮ್ಮೆ ನಕ್ಕಾಗ..!!