ಕನ್ನಡದ ಉಳಿವು ಯಾರಿಂದ

ಕನ್ನಡದ ಉಳಿವು ಯಾರಿಂದ

ಮೊನ್ನೆ ಆಟೊಗಾಗಿ ಕಾಯುತ್ತಿದ್ದೆ.
ನಮ್ಮ ಎಲೆಕ್ಟ್ರಾನಿಕ್ ಸಿಟಿ ಎಂದರೆ ಯಾರೂ ಬರುವುದಿಲ್ಲ. ಬೇರೆ ಆಟೊ ಹುಡುಕುತ್ತಿದ್ದೆ.
ಆಷ್ಟರಲ್ಲಿ ಒಬ್ಬ ಮಹಿಳೆ ಬಂದಳು. ನನ್ನನ್ನು ಯಾವುದೋ ಅಡ್ರೆಸ್ ಕೇಳಿದಳು (ತಮಿಳಲ್ಲಿ). ನಾನು ತಮಿಳು ಬರುವುದಿಲ್ಲವಾದರೂ "ನಂಗೆ ತೆರಿಯಾದು. ಆಟೊ ಕೇಳ್ಂಗೊ" ಎಂದೆ.
ಆಕೆ ಆಟೊವೋಂದರ ಬಳಿಗೆ ಹೋಗಿ ಕೇಳಿದಳು ತಮಿಳಿನಲ್ಲೆ.

ಆತ ಕೊಟ್ಟ ಉತ್ತರ "ಅಮ್ಮ ನಮ್ಮ ತಾಯಿ ಕನ್ನಡನಲ್ಲಿ ಕೇಳಮ್ಮ "

ಆಕೆ" ಎನಕ್ಕೆ ಕನ್ನಡ ತೆರಿಯಾದು. ಉನಕ್ಕೆ ತಮಿಲ್ ವರದಿಲ್ಲೆಯಾ?" ಎಂದಳು

ಅದೆಲ್ಲಿತ್ತೋ ಕೋಪ ಅವನಿಗೆ
" ನಂಗೆ ಯಾಕೆ ತಮಿಳ್ ಬರಬೇಕು . ನಾನೇನು ನಿಮ್ಮ ಊರಲ್ಲಿ ಇದೀನ . ನೀನು ಕನ್ನಡ ಕಲ್ತುಕೋಬೇಕು . ಇಲ್ಲಿ
ಇರೋಳು ನೀನು. ನಮ್ಮ ಊರಿನ ನೀರು ಗಾಳಿ ಎಲ್ಲ್ಲಾ ಕೊಟ್ಟು ನಾವು ಯಾಕೆ ನಿಮ್ಮ ಭಾಷೆ ಕಲೀಬೇಕು . " ಬೈಯ್ಯುತಲೇ ಇದ್ದ .

ಆಕೆ ಬೇರೆ ಒಬ್ಬ ಆಟೊನವನ ಬಳಿ ಹೋಗಿ " ಜಯನಗರ " ಅಂತ ಹೇಳಿ ಆಟೊ ಹತ್ತಿ ಹೊರಟು ಹೋದಳು.

ಆತನ ವರ್ತನೆ ಸರಿ ಇಲ್ಲವಾದುದ್ದಾದರೂ ಆತ ಮಾಡಿದ್ದು ಸರಿ ಅಂತನ್ನಿಸಿತು

ನಾವು ಕನ್ನಡಿಗರು ಬೇರೆಯವರ ಭಾಷೆಯನ್ನು ಕಲಿತು ಅವರೊಡನೆ ನಾವು ಅವರದೇ ಭಾಷೆಯಲ್ಲಿ ಮಾತಾಡುತ್ತೇವೆ.

ಆದರೆ ಅವರುಗಳು ಅವರ ಭಾಷೆ ಕಂಪನ್ನು ಎಲ್ಲೆಡೆ ಬೀರುತ್ತಾರೆ. ನಾವು ಹೀಗಿದ್ದರೆ ಕನ್ನಡದ ಉಳಿವು educated ಅನ್ನಿಸಿಕೊಂಡ ನಮ್ಮಂತಹವರಿಂದ ಖಂಡಿತಾ ಆಗುವುದಿಲ್ಲ.

ಏನಂತೀರಾ?

Rating
No votes yet

Comments