ಭರೋ... ಜೈಲು ಭರೋ

ಭರೋ... ಜೈಲು ಭರೋ

ಹೀಗೇ ಬರುತಿರುವಾಗ ಫ್ರೀಡಂ ಪಾರ್ಕ್ ಬಳಿ ಜನಸಾಗರವೇ ನೆರೆದಿತ್ತು. ಏನಂತಹ ವಿಶೇಷ ಅಂದು ನೋಡಲಾಗಿ, ಕೆಲ ಯುವಕರು ಹಾಡಿ ಕುಣಿಯುತ್ತಿದ್ದರು-


"ಅಣ್ಣಾ ಎಂದರೆ ಏನೋ ಹರುಷವು


ಜನರಾ ಪಾಲಿಗೆ ಅವರೇ ಲೀಡರು


ಅಣ್ಣಾ ಕರೆದರೆ ಎಲ್ಲಾ ಬರುವೆವು


ಊರೂ ಬಿಡುವೆವು, ಉಪವಾಸ ಮಾಡುವೆವು.."


ಅಂತ ಹಾಡುತ್ತಿದ್ದವರನ್ನು ಕಂಡು, "ಯಾಕಪ್ಪಾ ಇಲ್ಲಿ ನೆರೆದಿದ್ದೀರಿ?" ಎಂದು ವಿಚಾರಿಸಲಾಗಿ,


"ಈ ಲೋಕಪಾಲ ಬಿಲ್ಲು ತನ್ನಿ ಇದೇ ದಿಸೆಂಬರ


ಹೊಸ ಲೋಕಪಾಲರನ್ನು ಆಯ್ಕೆ ಮಾಡಿ ಇಲ್ಲೀ ಈ ವಾರ" ಎಂದರು.


ಇಲ್ಲಿ ಬಿಡಿ. ಕರ್ನಾಟಕ ಸರಕಾರ ಲೋಕಪಾಲನ ಆಯ್ಕೆ ಮಾಡಿದ್ದರು. ರಾಜ್ಯಪಾಲರಿಗೆ ಇಷ್ಟವಾಗಲಿಲ್ಲ ಅದಕ್ಕೆ ತಡವಾಯಿತು. ಸಂಸತ್ತಿನಲ್ಲಿ ಕಾಂಗೈಗಳು ಬಿಲ್ಲು ತರಲು ಯಾಕೆ ಒಪ್ಪುತ್ತಿಲ್ಲ?


"ಲೋಕಕ್ಕೆ ಗೊತ್ತಿರೋ ಮಾತಿದು


ಕಾಂಗೈ ಪಾಲಿನ ಮಂತ್ರವೇ ಇದು


ನಾಯಕಿ ಹೇಳಿದ್ದೇ ಮಾಡಬೇಕು


ಹಣದ ಮೂಲವ ಕೇಳಬಾರದು


ಬಿಲ್ಲು ತರಬಾರದು, ತಂದರೆ ರಾಹುಲ್ಲ ತರಲಾಗದು.."


ಓಹೋ, ಹಾಗಾ ವಿಷಯ.. ಸೋನಿಯಾ ಅವರು ಅಣ್ಣಾ ಬಳಿ ರಿಯಾಯಿತಿ ಕೇಳಿದರಾಗದೆ?


ಒಂದು ವೇಳೆ-


"ಅಣ್ಣಾ..ನಿನ್ನ ಸೋನಿಯಾ ಅಣ್ಣಾ..


ಬೀಳಿಸದಿರು ಎಂದೂ ಸರಕಾರವನ್ನಾ.." ಅಂತ ಕೇಳಿದರೆ, ಅಣ್ಣಾ ಸ್ವಲ್ಪ ರಿಯಾಯಿತಿ ಕೊಡಬಹುದೋ ಏನೋ..ಆದರೆ ಅಲ್ಲಿ ಪಕ್ಕದಲ್ಲಿರುವ ಕಿರಣ ಕಿವಿಯಲ್ಲಿ, "ಬೇಡಿ, ಆಕೆ ವಿದೇಶಿ ಹೆಣ್ಣೂsss..." ಎಂದು ಹೇಳಿ ತಪ್ಪಿಸಬಹುದು.


ಪಾರ್ಲಿಮೆಂಟಲ್ಲಿ ಚರ್ಚೆ ನಡೆಸಿ ಒಮ್ಮತದ ದಾರಿ ಹುಡುಕಿದರಾಗದೇ?


-ಹ್ಹೆ ಹ್ಹೆ..ಚರ್ಚೆ! ಒಮ್ಮತ! ಅಲ್ಲೇನಿದ್ದರೂ ಗದ್ದಲ ಗಲಭೆ.. ಯಾರು ಮಾತನಾಡಿದ್ದು..ಯಾರಿಗೂ ಅರ್ಥವಾಗದು.ಪಿಎಮ್ಮೇ ಎದ್ದು ನಿಂತು ಮಾತನಾಡಿದರೂ ಯಾರೂ ಕೇಳಿಸಿಕೊಳ್ಳರು. ಕೋಪದಲ್ಲಿ ಸಿಂಗ್.."ಅರೆ ದಿವಾನೋಂ.. ಮುಜೆ ಪಹಚಾನೋಂ.. ಮೈ ಹೂಂ ಕೌನ್? ಮೈ ಹೂಂ ಕೌನ್?" ಅಂದರೆ,


ಸಭಾಧ್ಯಕ್ಷೆ ತನ್ನ ಮಧುರ ಕಂಠದಿಂದ "ಪ್ಲೀಸ್ ಸಿಟ್ ಡೌನ್.. ..ಡಾನ್.. .. ಡಾನ್" ಅನ್ನುವರು.


ಹೀಗಾದರೆ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೆ ಹಾಕಿದರೆ-


ಅಣ್ಣಾ "ಭರೋ..ಜೈಲು ಮೇ ಭರೋ..." ಚಳುವಳಿ ಮಾಡುವರಂತೆ.


" ಹಾಗಿದ್ದರೆ ಈ ಸಲ ಅಣ್ಣಾಗೆ ಸೋಲು ಗ್ಯಾರಂಟಿ. ಈಗ year ಎಂಡ್ ನೆನಪಿರಲಿ. ಅಣ್ಣಾ ಬೆಂಬಲಕ್ಕಿರುವುದು ಈಗಿನ ಯುವಕರು. ಹೆಚ್ಚಿನವರು "ಬಾರ್ ಭರೋ" ಮಾಡುವವರು.


ಹ್ಹ ಹ್ಹಾ..ಅದಕ್ಕೇ ಜೈಲು ಭರೋ ಜನವರಿ ಒಂದರ ನಂತರ!


ನಮ್ಮ ಅಣ್ಣಾ ಜಾಣ.. 

Rating
No votes yet

Comments