ಎಲ್ಲವೂ ದೇವನ ಇಚ್ಛೆ (ಶ್ರೀನರಸಿಂಹ 17)

ಎಲ್ಲವೂ ದೇವನ ಇಚ್ಛೆ (ಶ್ರೀನರಸಿಂಹ 17)

ಜಗದಲಿ  ನಡೆಯುತಿಹುದೆಲ್ಲವು ದೈವೇಚ್ಛೆಯಂತೆ


ನಮ್ಮಂತೆ ನಡೆದರೂ ನಡೆದಿಹುದು ಅವನಿಚ್ಛೆಯಂತೆ


ಅವನಾಡಿಸುತಿಹ ಸೂತ್ರದ ಬೊಂಬೆಗಳಂತೆ ನಾವೆಲ್ಲ


ಮಾಯೆಯನುವ ಸೂತ್ರದಿಂದ ಆಡಿಸುತಿಹ ಜಗವನೆಲ್ಲ


 


ಸಿರಿತನದ ಮಾಯೆಯಲಿ ಇರಿಸಿ ಮೆರೆಸುವನು ಒಮ್ಮೆ


ಬಡತನದ ಬೇಗೆಯಲಿ ಉರಿಸಿ ಪರಿಕಿಪನು ಮತ್ತೊಮ್ಮೆ


ಅವನ ಆಣತಿಯಂತೆ ಬಂದಿಹೆವು ನಾವೆಲ್ಲ ಜಗದಲ್ಲಿ


ಇರಬೇಕು ಅವನಿರಿಸಿದ ತೆರದಿ ಜೀವನದ ಪಥದಲ್ಲಿ


 


ನಿಮಿತ್ತ ಮಾತ್ರವೆ ನಾವಿಲ್ಲಿ ಮಾಡು ಕರ್ಮಗಳ ಅವನಾಣತಿಯೆನುತ


ಅಳುಕದಿರು ಕೈ ಬಿಡದೆ ಸಲಹುವನು ಶ್ರೀನರಸಿಂಹ ನಮ್ಮಅನವರತ


 


 

Rating
No votes yet

Comments