ಮನಸ್ಸು-ಗೂಟ

ಮನಸ್ಸು-ಗೂಟ



ಮನವಿದು ಮರ್ಕಟವು


ಎಲ್ಲೆಯೆಂಬುದಿಲ್ಲ ಇದಕೆ


ಎಲ್ಲೆಂದರಲ್ಲಿ ನುಗ್ಗುವುದು


ಬಯಲಿಗೆಲ್ಲಿಯ ಬೇಲಿ


ಮಾಡುತಿರುವುದು ಗೇಲಿ


ಅಹ ಎನ್ನುವುದು


ಕನಸುಗಳ ಮೆರವಣಿಗೆ


ಸಾಗುವುದು


ವಟವಟಗುಟ್ಟುವುದು


ಕೊತಕೊತ ಕುದಿಯುವುದು


ಆಗುವುದು ಒದ್ದೆ ಮುದ್ದೆ...

ತಿಳಿಯದೆ ಗುರಿ


ಕಾಣದೆ ದಾರಿ


ಅನುದಿನವು ಚಡಪಡಿಕೆ

...............


..............


ಜವಾಬ್ದಾರಿಯ ಬೇರ ಹರಡಿಸಿ


ಜ್ಞಾನದ ಹರವು ಬೆಳೆಯಿಸಿ


ಕಟ್ಟಬೇಕು ಸರ್ವಶಕ್ತನ


ನಾಮಗೂಟಕೆ





Rating
No votes yet

Comments