ಗಜಲ್
ಕವನ
ಆಸೆಯ ಬೀಜ ಹೊತ್ತವಳು ನಾ ನೀರೆ
ಕನಸ ಸಸಿಯ ಹೆತ್ತವಳು ನಾ ನೀರೆ
ಕನಸ ಸಸಿಯಲಿ ಮೊಗ್ಗಾಗಿ ಅರಳಿದವಳು
ಮನಸಲಿ ಕನಸ ಗಭ೯ಹೊತ್ತು ನನಸಿಗಾಗಿ ಕಾದವಳು ನಾ ನೀರೆ
ಮನಸಲಿ ಮಧನನ ನೆನಸಿ ಮೂಕವಿಸ್ಮಿತಳಾದವಳು
ಮನದ ಮಂದಿರದಿ ಕನಸ ರಂಗೋಲಿಯಲಿ ಹೂವಾಗಿ ಅರಳಿದವಳು ನಾ ನೀರೆ
ಮರೆಯಲಾರದ ಗಾಯವ ಮನದಲ್ಲಿ ಮೂಡಿಸಿಕೊಂಡವಳು
ನೋಯಲಾರದ ಗಾಯವ ಮುಟ್ಟಿ ಮುಟ್ಟಿ ಮನದಲ್ಲಿ ಹಿಗ್ಗಿ ಕರಗಿದವಳು ನಾ ನೀರೆ
ಮರೆಯಲಾರದ ಕನಸ ನನಸಾಗಿಸಿ `ಪ್ರಬಿ'ಯ ಜೊತೆ
ಪ್ರಭೆಯಾಗಲು ಎವೆಯಿಕ್ಕದೆ ಕಾತರಿಸುತಿರುವವಳು ನಾ ನೀರೆ...
ಚಿತ್ರ ಕೃಪೆ ; kurjnikathambam.blogspot.com
Comments
ಉ: ಗಜಲ್
In reply to ಉ: ಗಜಲ್ by rohith p vitla
ಉ: ಗಜಲ್