ಆಕೆಗೆ ಈಗ ಹದಿನೆಂಟು ವರ್ಷ

ಆಕೆಗೆ ಈಗ ಹದಿನೆಂಟು ವರ್ಷ

 

ಬೆಳಗ್ಗೆ ಬುದ್ದಿ ಹೇಳಹೋದಾಗ
ನನಗೇನು ತಿಳಿಯದೆ? ನೀವೇನು ಹೇಳುವುದು
ಎಂದು ಮೊಂಡುವಾದ ಹೂಡಿ
ಸಂಜೆ ಬರಿಗೈಲಿಬಂದ ಅಪ್ಪನನ್ನ
ಮಕ್ಕಳ ದಿನಾಚರಣೆಯಂದು
ಒಂದು ಚಾಕಲೇಟ್ ತರಲಿಲ್ಲವೆ
ನಿಮಗೆ ನನ್ನ ಕಂಡರೆ ಪ್ರೀತಿಯಿಲ್ಲ
ಎಂದು ಮುಖ ಊದಿಸಿ ನಿಲ್ಲುವ ಮಗಳು ನಿಮಗಿದ್ದರೆ
ಖಂಡೀತ
ಆಕೆಗೆ ಈಗ ಹದಿನೆಂಟು ವರ್ಷ

Rating
No votes yet

Comments