ಆದಾಗ್ಯೂ ನಾನೆದ್ದು ಬರುವೆ ( ಕವನ )

ಆದಾಗ್ಯೂ ನಾನೆದ್ದು ಬರುವೆ ( ಕವನ )

ಕವನ

      ಆದಾಗ್ಯೂ ನಾನೆದ್ದು ಬರುವೆ


 


ನೀವು ಬೇಕಾದರೆ ನನ್ನ ಹೆಸರನ್ನು


ಇತಿಹಾಸದ ಕೊನೆಯ ಪುಟಗಳಲ್ಲಿ ಬರೆಯಿರಿ


ನಿಮ್ಮ ಕಹಿಯಾದ ತಿರುಚಿದ ಸುಳ್ಳುಗಳ ಜೊತೆಗೆ


ನೀವು ಬೇಕಾದರೆ ನನ್ನನ್ನು


ಆಳವಾದ ಕೊಳಕಿನಲ್ಲಿ ಹೂತುಬಿಡಿ


ಆದಾಗ್ಯೂ ಕೂಡ ನಾನು ಧೂಳಿನಿಂದೆದ್ದು ಬರುವೆ


 


ನೀವು ನನ್ನನ್ನು ಚೂರು ಚೂರಾದ ಸ್ಥಿತಿಯಲ್ಲಿ


ನೋಡಬೇಕೆಂದು ಇಚ್ಛಿಸಿದ್ದಿರಾ ?


ಬಾಗಿದ ತಲೆ ಅವನತ ಕಂಗಳು


ಕೆಳಗುರುಳುವ ಕಣ್ಣೀರ ಹನಿಗಳ ಸ್ಥಿತಿಯ


ಬಾಗಿದ ಹೆಗಲುಗಳ ಹೃದಯಾಂತರಾಳದ


ಅಳುಗಳಿಂದ ಅಶಕ್ತವಾಗಿರುವ ನನ್ನ


 


ನೀವು ಬೇಕಾದರೆ ನಿಮ್ಮ ಮಾತುಗಳಿಂದ


ನನ್ನನ್ನು ಇರಿಯಿರಿ ನಿಮ್ಮ ಕಣ್ಣುಗಳಿಂದ


ನನ್ನನ್ನು ಕತ್ತರಿಸಿ ಹಾಕಿ ಬೇಕಾದರೆ


ತಿರಸ್ಕಾರದಿಂದ ನನ್ನನ್ನು ಕೊಂದು ಹಾಕಿ


ಆದಾಗ್ಯೂ ಕೂಡ ಗಾಳಿಯಂತೆ ನಾನೆದ್ದು ಬರುವೆ


ನಾನೊಂದು ಆಳ ಕಪ್ಪು ಶರಧಿ


ಉಕ್ಕಿ ಬರುವ ನೋವುಗಳ ಸಹಿಸಬಲ್ಲೆ


 


ಭಯದ ಭಯಂಕರ ರಾತ್ರಿಗಳನ್ನು


ಹಿಂದೆ ಬಿಟ್ಟು ನಾನೆದ್ದು ಬರುವೆ


ವಿಸ್ಮಯಕರ ಶುದ್ಧ ಬೆಳಗಿನಿಂದೆದ್ದು ಬರುವೆ


ಪೂರ್ವಿಕರ ಕನಸುಗಳ ಕೊಡುಗೆಗಳ


ನಾ ಹೊತ್ತು ತರುವೆ


ನಾನೊಂದು ಕನಸು ಗುಲಾಮರ ಆಶಾಕಿರಣ


ನಾ ಎದ್ದು ಬರುವೆ!


ನಾನೆದ್ದು ಬರುವೆ!


ನಾನು ಎದ್ದು ಬರುವೆ!


           ***


      ಮೂಲಃ-              ಮಾಯಾ ಏಂಜೆಲೋಳ ' ಸ್ಟಿಲ್ ಐ ರೈಜ್ ' ಕವನ.


      ಕನ್ನಡಾನುವಾದ . ಹ.ಅ.ಪಾಟೀಲ.


 


 


 


 

Comments